ಹನೂರು: ತಾಲ್ಲೂಕಿನ ಕೌದಳ್ಳಿ ಗ್ರಾಮದಲ್ಲಿ 36 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪಶು ಆಸ್ಪತ್ರೆ ಕಟ್ಟಡವನ್ನು ಹನೂರು ಶಾಸಕರಾದ ನರೇಂದ್ರ ರವರು ಉದ್ಘಾಟನೆ ನೆರವೇರಿಸಿದರು.
ಪಶು ಆಸ್ಪತ್ರೆ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕರು ಈ ಭಾಗದಲ್ಲಿ ಕೃಷಿ ಅವಲಂಬಿತ ಮತ್ತು ಭೂರಹಿತರಿಗೆ ಹೆಚ್ಚಾಗಿ ಪಶು ಪಾಲನೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಜಾನುವಾರುಗಳ ಸುರಕ್ಷತೆಗೆ ಅನುಕೂಲವಾಗುವ ಉದ್ದೇಶದಿಂದ 1963 ರಲ್ಲಿ ದಿ. ಜಿ.ವಿ. ಗೌಡ ರವರು ಈ ಗ್ರಾಮದಲ್ಲಿ ಪಶು ಆಸ್ಪತ್ರೆ ಯನ್ನು ನಿರ್ಮಿಸಿದ್ದರು.
ಕಟ್ಟಡ ತುಂಬಾ ದುರಸ್ತಿಯಾಗಿದ್ದ ಕಾರಣ 36 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. ಈ ಭಾಗದ ನಾಟಿ ತಳಿ ಹಸುಗಳ ರಕ್ಷಿಸಿ ತಳಿ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಎಲ್ಲಾ ರೈತಾಪಿ ವರ್ಗದ ಜನರು ಮತ್ತು ಜಾನುವಾರುಗಳಿಗೆ ಅನುಕೂಲವಾಗಲಿ ಎಂದು ತಿಳಿಸಿದರು. ಈ
ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ಕೌದಲ್ಲಿ ಗ್ರಾ.ಪಂ. ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷೆ ಶಾಂತಿ, ಪಶು ವೈದ್ಯಾಧಿಕಾರಿ ಸಿದ್ದರಾಜು, ಮುಖಂಡರಾದ ಮೆಹಬೂಬ್ ಶರೀಫ, ಗಿರೀಶ್ ಕುಮಾರ್, ಸುದೇಶ್, ಹರೀಶ್, ಪಾಳ್ಯ ಕೃಷ್ಣ, ಸಿದ್ದರಾಜು, ಚಾಂದ್ ಪಾಷಾ, ಶಿವಕುಮಾರ್ ಮುಂತಾದವರು ಹಾಜರಿದ್ದರು.
ವರದಿ :ಉಸ್ಮಾನ್ ಖಾನ್