ಯಾದಗಿರಿ: ಶಹಾಪುರ ತಾಲೂಕಿನ ಹುರಸಗುಂಡಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ಯಂಕಮ್ಮ ಗಂಡ ಹನುಮಂತರಾಯ ಇವರು ಹುರಸಗುಂಡಗಿ ಗ್ರಾಮ ಪಂಚಾಯಿತಿ ಇವರ ಮನೆ ಆಸ್ತಿ ಅಂತೆಯೇ ತಿಳಿದುಕೊಂಡು ತಮ್ಮ ಮನಸಿಗೆ ಬಂದ ಹಾಗೆ ಪಂಚಾಯಿತಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಹಾಗೆಯೇ ಹುರಸಗುಂಡಗಿ ಪಂಚಾಯಿತಿಯಲ್ಲಿ. ಅಧ್ಯಕ್ಷ ಮತ್ತು ಪಿಡಿಒ ಅವರದೇ ದರ್ಬಾರು ಮತ್ತು ಪಿಡಿಒ ಇಬ್ಬರು ಸೇರಿಕೊಂಡು 15ನೇ ಹಣಕಾಸು ಯೋಜನ ಕಾಮಗಾರಿಗಳನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಇವರನ್ನು ಕೂಡಲೇ ಸದಸ್ಯತ್ವ ರದ್ದು ಮಾಡಿ ಹಾಗೇ ಪಂಚಾಯಿತಿಯ ಪಿಡಿಒ ಗೇ ಸೇವೆಯಿಂದ ಅಮಾನತು ಮಾಡಿ ಎಂದು ಒತ್ತಾಯಿಸಿದರು ನಿನ್ನೆ ತಾಲೂಕು ಪಂಚಾಯತ್ ಕಾರ್ಯಾಲಯಕ್ಕೆ ಬೀಗ ಜಡೆದು ಪ್ರತಿಭಟನೆಗೆ ಮುಂದಾದಾಗ ಪಂಚಾಯಿತಿಯ ಅಧಿಕಾರಿಗಳು ಬಂದು ಬೇಡಾ ಸರ್ ನಾನು ಮೇಲಧಿಕಾರಿಗಳಿಗೆ ಗಮನಕ್ಕೆ ತಂದು ಎರಡು ಮೂರು ದಿನಗಳು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ಇದೆ ಸಂದರ್ಭದಲ್ಲಿ ಪ್ರತಿಭಟನಾಕಾರರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಅಧ್ಯಕ್ಷ ಹಾಗೂ ಪಿಡಿಒ ಅಮಾನತು ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಹೇಳಿದರು. ಜಿಲ್ಲಾ ಸಂಚಾಲಕರಾದ ಶಿವಪುತ್ರ ಜವಳಿ, ಮಲ್ಲಿಕಾರ್ಜುನ ಹೊಸಮನಿ, ಶಹಾಪುರ ತಾಲೂಕಾ ಸಂಚಾಲಕರಾದ ಮರೆಪ್ಪ ಕ್ರಾಂತಿ, ಸಂತೋಷ ಗುಂಡಹಳ್ಳಿ ಶರಬಣ್ಣ ದೊರನಹಳ್ಳಿ, ವಾಸು ಕೋಗಿಲಕರ್, ಶ್ರೀಮಂತ ಸಿಂಗನಹಳ್ಳಿ, ಮಲ್ಲಪ್ಪ ಅನ್ವರ್, ಸಾಬಣ್ಣ ಬಳ್ಳಕ್ಕಿ, ಹೊನ್ನಪ್ಪ ತಾಳಿಗೇರಿ,ಹಣಮಂತ ಪೂಜಾರಿ ರಾಜು ಕುದರಿ, ರವಿ ಹಳಿಸಗರ್, ಭಾಗಪ್ಪ ರಸ್ತಾಪುರ, ಮರೆಪ್ಪ , ಹಣಮಂತ ಹುಲಸುರ, ಬಸಲಿಂಗಪ್ಪ ಮತ್ತು ಸಂಘದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ