ಹನೂರು :ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಸರ್ವಜನಾಂಗಕ್ಕೂ ಸಭೆ ಸಮಾರಂಭಗಳಲ್ಲಿ ಬಳಸಿಕೊಳ್ಳಲು ಸಹಕಾರಿಯಾಗುವಂತೆ ಸಮುದಾಯ ಭವನಗಳನ್ನು ನಿರ್ಮಿಸಿದ್ದೇನೆ ಹಿಂದಿನ ಕಾಲದಲ್ಲಿ ಚಾವಡಿಗಳನ್ನ ಉಪಯೋಗಿಸುತ್ತಿದ್ದರು ಈಗ ಅಂತಹ ಸಮಸ್ಯೆ ನಮಲ್ಲಿಲ್ಲ , ಇನ್ನೂ ಹಲವು ಭವನಗಳ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಪ್ರಯತ್ನಿಸಲಾಗುವುದು ಎಂದು ಶಾಸಕರಾದ ಆರ್. ನರೇಂದ್ರ ತಿಳಿಸಿದರು .
ಹನೂರು ಕ್ಷೇತ್ರದ ಶ್ಯಾಗ್ಯ ಗ್ರಾಮ ಪಂಚಾಯತಿಯಲ್ಲಿ ನಿರ್ಮಿತಿ ಕೆಂದ್ರದಿಂದ ಹನ್ನೆರಡು ಲಕ್ಷರೂಗಳ ವೆಚ್ಚದಲ್ಲಿ ನಿರ್ಮಿಸಿದ್ದ ಸಮುದಾಯ ಭವನವನ್ನು ಉದ್ಘಾಟನೆ ಮಾಡಿ ನಂತರ ಮಾತನಾಡಿದ ಅವರು ಈಗಾಗಲೇ ಬಾಬು ಜಗಜೀವನ್ ರಾಮ್ ಅವರ ಹೆಸರಿನಲ್ಲಿ
ಒಟ್ಟು ನಲವತ್ತೊಂದು ಸಮುದಾಯ ಭವನಗಳನ್ನು ನಿರ್ಮಿಸಿ ಉದ್ಘಾಟನೆ ಮಾಡಿದ್ದೆನಿ ಮುಂದೆಯು ಮಾಡುತ್ತೆನೆ ನಿರ್ಮಿಸಿ ಉದ್ಘಾಟನೆ ಮಾಡುತ್ತೇನೆ ,ಹಾಗಾಗಿ
ನೀವೆಲ್ಲರೂ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿದ್ದೀರ ಮುಂದಿನ ದಿನಗಳಲ್ಲಿ ಬರುವ ವಿಧಾನಸಭಾ ಚುನಾವಣೆಯಲ್ಲಿ ತಾವೆಲ್ಲರು ನಮ್ಮ ಪಕ್ಷವನ್ನು ಬೆಂಬಲಿಸಬೇಕು ಹಾಗೂ ನಮ್ಮ ಕ್ಷೇತ್ರಕ್ಕೆ ಕೆಲವರು ಹಣದ ಮದದಲ್ಲಿ ತೇಲಾಡುತ್ತಾರೆ ಆದರೆ ವಾಸ್ತವದಲ್ಲಿ ಜನರ ನಾಡಿಮಿಡಿತಕ್ಕನು ಗುಣವಾಗಿ ದುಡಿಯುವ ವ್ಯಕ್ತಿಗೆ ನಿಮ್ಮ ಮತವನ್ನು ನೀಡಬೇಕು ,ಇತ್ತಿಚಿನ ದಿನಗಳಲ್ಲಿ ಹೊರಗಿನಿಂದ ಬಂದ ಕೆಲವರು ಊರಿನ ದೇವಾಲಯ ಉರುಳಿಸಿ ಹಣ ನೀಡುತ್ತೆನೆ,ಮನೆ ಕೆಡುವಿದರೆ ಹತ್ತು ಸಾವಿರ ಹೀಗೆ ಹಲವಾರು ಘೋಷಣೆ ಗಳನ್ನು ಮಾಡುತ್ತಾರೆ ಆದರೆ ನಾವು ಅಂತಹ ಪೊಳ್ಳು ಭರವಸೆಯನ್ನು ನೀಡುವುದಿಲ್ಲ ,ಸದಾ ನಾನು ನಿಮ್ಮಜೋತೆಯಲ್ಲಿದ್ದಿನಿ ಮುಂದೆಯು ಇರುತ್ತೆನೆ ಹಾಗೂ ಸಮುದಾಯ ಭವನಗಳನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಉಪಯೋಗಿಸುವ ಕಾರ್ಯವಾಗಬೇಕು ಮತ್ತು ದಿನ ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಂಡರೆ ಬಹಳ ಪ್ರಯೋಜನಕಾರಿಯಾಗಲಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಶ್ಯಾಗ್ಯ ಬಸವರಾಜು .ಮಾಜಿ ಟಿ ಪಿ ಅಧ್ಯಕ್ಷರಾದ ಜಾವೇದ್ ಅಹ್ಮದ್ ,ಪ.ಪಂ. ಉಪಾಧ್ಯಕ್ಷರಾದ ಗಿರೀಶ್ ,ಸದಸ್ಯರುಗಳಾದ ಹರೀಸ್ ,ಸುದೇಶ್, ಚಾಮುಲ್ ನಿರ್ದೇಶಕ ಶಾಹುಲ್ ಅಹ್ಮದ್, ಚೇತನ್ ದೊರೈರಾಜು ,ಮುಖಂಡರಾದ ನಟರಾಜು ,ಮಣಗಳ್ಳಿ ಮಲ್ಲಣ್ಣ ,ಶಿವಪ್ಪ,ಸಿದ್ದರಾಜು ,ನಿರ್ಮಿತಿಕೇದ್ರ ಅಧಿಕಾರಿಗಳಾದ ರವಿಕುಮಾರ್ ,ಮಂಜೇಶ್ ಸೇರಿದಂತೆಇನ್ನಿತರರು ಹಾಜರಿದ್ದರು.
ವರದಿ :ಉಸ್ಮಾನ್ ಖಾನ್.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.