ಶಿವಮೊಗ್ಗ ನಗರದ ವಿಮಾನ ನಿಲ್ದಾಣ ನಗರಕ್ಕೊಂದು ಶೋಕೇಸ್ ಗೊಂಬೆಯಂತೆ ಕಂಗೊಳಿಸುವಂತಿದೆ. ಹೆಸರಿನ ನಾಮಫಲಕ ಇಲ್ಲದ, ಪಾರ್ಕಿಂಗ್ ವ್ಯವಸ್ಥೆ ಇದ್ದರೂ ಅದಕ್ಕೊಂದು ಸೂರು ಇಲ್ಲದಿರುವುದು ಹೀಗೆ ಪಟ್ಟಿ ಮಾಡುತ್ತಾ ಹೋದಂತೆ ಅರ್ಧಂಬರ್ಧ ನಡೆದ ಕಾಮಗಾರಿಗಳು ಕಣ್ಣಿಗೆ ರಾಚುತ್ತಿವೆ.
ಇದರ ನಡುವೆಯೂ ಒಂದೆರಡು ವಿಮಾನಗಳ ಹಾರಾಟ ಮಾತ್ರ ಕಾಣಸಿಗುತ್ತಿದೆ. ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಮುಂದಿರುವ ಶಿವಮೊಗ್ಗ ನಗರ ವಿಮಾನ ನಿಲ್ದಾಣದಲ್ಲಿ ಮಾತ್ರ ಇನ್ನೂ ಹಳ್ಳಿ ಕೊಂಪೆಯಂತೆ ರಾರಾಜಿಸುತ್ತಿರುವದು ಯಾಕೆ ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.
ವರದಿ: ಕೊಡಕ್ಕಲ್ ಶಿವಪ್ರಸಾದ್.




















