ಯಾದಗಿರಿ: ಶಹಾಪುರ ತಾಲೂಕಿನ ಆಲ್ದಾಳ ಗ್ರಾಮದ ನೀರಿನ ಟ್ಯಾಂಕ್ ಅಪಾಯದಲ್ಲಿ ಇದೆ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಶಾಪ ಹಾಕುತ್ತಿದ್ದಾರೆ.
ಕಳೆದ ೨೦೦೭/ ೨೦೦೮ ನೇ ಸಾಲಿನ ನಿರ್ಮಿಸಲಾಗಿದ್ದ ನೀರಿನ ಟ್ಯಾಂಕ್ ಸುಮಾರು ೧೬ ವರ್ಷ ಹಳೆಯದಾದ ಟ್ಯಾಂಕ್ ಇಂದು ಶಿಥಿಲಗೊಂಡಿದೆ.
ನೀರಿನ ಟ್ಯಾಂಕ್ ಸುತ್ತಮುತ್ತಲು ಬಹಳಷ್ಟು ಜನರು ಜೀವನ ನಡುಸುತ್ತಿದ್ದಾರೆ. ಇಲ್ಲಿನ ಆಲ್ದಾಳ ಗ್ರಾಮದ ಜನರ ಜೀವ ತೆಗೆಯುವುದಕ್ಕೆ ಕಾದು ನಿಂತಿರುವ ನೀರಿನ ಟ್ಯಾಂಕ್.ಇಷ್ಟು ಆದರೂ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿದೆ ಇರುವುದು ದುರದೃಷ್ಟಕರ ಸಂಗತಿ ಇನ್ನು ಮುಂದೆ ಆದರೂ ಆದಷ್ಟು ಬೇಗ ಅಧಿಕಾರಿಗಳು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಮುಂದಿನ ದಿನಗಳಲ್ಲಿ ಇದು ಅಪಾಯ ಆಗುವುದು ಗ್ಯಾರಂಟಿ ಈಗಲಾದರೂ ಆಲ್ದಾಳ ಗ್ರಾಮಸ್ಥರ ಮನವಿ ಸ್ಪಂದಿಸುವ ಕೆಲಸ ಅಧಿಕಾರಿಗಳು ಮಾಡಬೇಕು ಮುಂದಿನ ದಿನಗಳಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ನಿಮ್ಮ ಆಫೀಸಿಗೆ ಮುತ್ತಿಗೆ ಹಾಕುತ್ತವೆ ಎಂದು ಹೇಳಿದರು.
ಆಲ್ದಾಳ ಗ್ರಾಮದ ಯುವ ಮುಖಂಡ ಜೈ ಕರ್ನಾಟಕ ಸಂಘಟನೆಯ ಕಾರ್ಯಾಧ್ಯಕ್ಷ ವೆಂಕಟೇಶ್ ಮತ್ತು ಗ್ರಾಮ ಘಟಕದ ಅಧ್ಯಕ್ಷ ವೆಂಕೋಬ ಆಲ್ದಾಳ ಅನೇಕ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ