ರಾಯಚೂರು:ಫೆ.08.ಸಿಂಧನೂರು ತಾಲೂಕಿನ ಸುಮಾರು ಮೂರು ವರ್ಷಗಳಿಂದ ಸಿಂಧನೂರಿನ ಕಾರುಣ್ಯಾಶ್ರಮದಲ್ಲಿ ಆಶ್ರಯ ಪಡೆದಿದ್ದ ರಾಯಚೂರು ತಾಲೂಕಿನ ಶಕ್ತಿನಗರದ ಮಾಣಿಕ್ಯಮ್ಮ ವಯಸ್ಸು-69 ಎನ್ನುವ ನಿರ್ಗತಿಕ ವೃದ್ಧೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ದಾಖಲಾಗಿದ್ದಳು. ಕಾರುಣ್ಯಾಶ್ರಮದ ಆಡಳಿತಾಧಿಕಾರಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಈಕೆಯ ಕೊನೆಯ ಆಸೆಯನ್ನು ಆಲಿಸಿದಾಗ ತನ್ನ ದೇಹ ಮಣ್ಣಾಗಬಾರದು ಸುಡಬಾರದು ನಮ್ಮಂತಹ ಅದೆಷ್ಟೋ ಅನಾಥರಿಗೆ ಹಲವಾರು ರೋಗಗಳಿಂದ ತುತ್ತಾಗುವಂತಹ ಸನ್ನಿವೇಶಗಳನ್ನು ನಾವೆಲ್ಲ ನೋಡಿದ್ದೇವೆ ಮುಂದಿನ ಪೀಳಿಗೆಯಲ್ಲಿ ವೈದ್ಯಕೀಯ ಕ್ಷೇತ್ರ ನನ್ನ ದೇಹದ ಮೂಲಕ ಇನ್ನು ಹೆಚ್ಚಿನ ಸಂಶೋಧನೆ ಮಾಡಲು ಮಾಣಿಕ್ಯಮ್ಮ ಸರ್ವರಿಗೂ ಆದರ್ಶವಾದರು ಜೊತೆಗೆ ಮರಣ ಹೊಂದಿದರೂ ಜೀವಂತವೇ ಎಂದು
ಸಮಾಜದ ಪ್ರೀತಿಗೆ ಪಾತ್ರರಾದರು
ಎಂದು ಮಾಣಿಕ್ಯಮ್ಮ ಅವರ ದೇಹದಾನದ ಪ್ರಮಾಣ ಪತ್ರ ಸ್ವೀಕಾರ ಮಾಡಿ ಪ್ರಶಂಸೆಯನ್ನು ವ್ಯಕ್ತಪಡಿಸಿದರು.
ಅವರು ರಾಯಚೂರು ರಿಮ್ಸ್ ಕಾಲೇಜಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ದೇಹದಾನ ಸ್ವೀಕಾರ ಮಾಡಿ ಮಾತನಾಡಿದರು
ನಮ್ಮ ಕಾರುಣ್ಯ ಕುಟುಂಬಕ್ಕೆ ವೈದ್ಯ ಕ್ಷೇತ್ರದ ಸಹಾಯ ಸಹಕಾರ ಹೆಚ್ಚಿನ ಮಟ್ಟದಲ್ಲಿ ದೊರೆಯಲಿ ಎನ್ನುವ ಕೊನೆಯಾಸೆಯ ಮೇರೆಗೆ ದೇಹ ದಾನ ನೇತ್ರದಾನ ಮಾಡಲಾಯಿತು. ಇಂದು ಬೆಳಗಿನ ಜಾವ ನಾಲ್ಕು ಗಂಟೆಗೆ ಮರಣ ಹೊಂದಿದ ಈಕೆಯ ದೇಹವನ್ನು ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ಕಾನೂನಾತ್ಮಕವಾಗಿ ಮೃತ ದೇಹವನ್ನು ತೆಗೆದುಕೊಂಡಿತು. ಈ ಸಮಯದಲ್ಲಿ ಮಾತನಾಡಿದ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮುಖ್ಯ ಅಧಿಕ್ಷಕರಾದ ಡಾ.ಬಸವರಾಜ ಪೀರಾಪುರ ಸಿಂಧನೂರಿನ ಕಾರುಣ್ಯಾಶ್ರಮ ಇಂತಹ ಒಂದು ನಿರ್ಧಾರವನ್ನು ತೆಗೆದುಕೊಂಡು ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಹಕಾರ ನೀಡುವುದರ ಮೂಲಕ ನಿರಂತರವಾಗಿ ಸಮಾಜ ಸೇವೆಯ ಮೂಲಕ ನಾಡಿನಾದ್ಯಂತ ಹೆಸರುವಾಸಿಯಾಗಿರುವ ಈ ಸಂಸ್ಥೆ ನಮ್ಮ ಜಿಲ್ಲೆಯಲ್ಲಿರುವುದು ನಮ್ಮೆಲ್ಲರ ಅದೃಷ್ಟ ಮತ್ತು ದೇಹ ದಾನ ನೇತ್ರದಾನದ ಬಗ್ಗೆ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಮಾಡಿ ಕೊರೋನದಂತಹ ಸಮಯದಲ್ಲಿಯೂ ಕೂಡ ನಮ್ಮ ಜಿಲ್ಲಾ ಆರೋಗ್ಯ ಇಲಾಖೆ ಮಾಡುವಂತಹ ಕಾರ್ಯಗಳನ್ನು ಮಾಡಿ ವೈದ್ಯಕೀಯ ಪ್ರಪಂಚಕ್ಕೆ ಶಕ್ತಿ ತುಂಬಿದೆ ಇಂದು ನಮ್ಮೊಂದಿಗಿರುವ ಕಾರುಣ್ಯ ಆಶ್ರಮದ ಗೌರವಾಧ್ಯಕ್ಷರಾದ ಶರಣು. ಪಾ.ಹಿರೇಮಠ ಹಾಗೂ ಕಾರ್ಯಧ್ಯಕ್ಷರಾದ ವೀರೇಶ ಯಡಿಯೂರ ಮಠ ಆಡಳಿತಾಧಿಕಾರಿಗಳಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ ಸಮಾಜಕ್ಕೆ ಒಳ್ಳೆ ಸಂದೇಶ ನೀಡುವ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಮಾಡುವಂತಹ ರೀತಿಯಲ್ಲಿ ಇಂತಹ ಸೇವೆಗಳನ್ನು ಮಾಡುವ ಇವರುಗಳ ಕಾರ್ಯ ಶ್ಲಾಘನೀಯ ನಮ್ಮ ವಿಜ್ಞಾನ ಸಂಸ್ಥೆಯಿಂದ ಯಾವಾಗಲೂ ಸಹಕಾರ ನೆರವು ಕಾರುಣ್ಯ ಆಶ್ರಮಕ್ಕಿರುತ್ತದೆ ಎಂದು ಮಾತನಾಡಿ ಶ್ರೀಮಠ ಸೇವಾ ಟ್ರಸ್ಟ್ (ರಿ.) ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ದಿಮಾಂಧ್ಯ ಆಶ್ರಮಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. ಈ ಸಮಯದಲ್ಲಿ ಅನಾಟಮಿ ವಿಭಾಗದ ಮುಖ್ಯಸ್ಥರಾದ ಡಾ. ನವೀನ್ ಡಾ.ಬಸವರಾಜ ಪಾಟೀಲ್. ಕಾರುಣ್ಯ ಆಶ್ರಮದ ಗೌರವಾಧ್ಯಕ್ಷರಾದ ಶರಣು ಪಾ. ಹಿರೇಮಠ ಕಾರ್ಯಾಧ್ಯಕ್ಷರಾದ ವೀರೇಶ ಯಡಿಯೂರುಮಠ. ಆಡಳಿತಾಧಿಕಾರಿಗಳಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ. ಸಿಬ್ಬಂದಿಗಳಾದ ಗಿರಿಜಮ್ಮ ಮಾಣಿಕ್ಯಮ್ಮನ ಸಂಬಂಧಿಗಳಾದ ಲಕ್ಷ್ಮಿ ನಿರ್ಮಲಾ ಉಮಾ ನಾಗೇಶ ಅನೇಕರುಗಳ ಸಮಕ್ಷಮದಲ್ಲಿ ದೇಹ ದಾನದ ಅಂಶಗಳನ್ನು ತತ್ವಗಳನ್ನು ಮತ್ತು ಮಹತ್ವತೆಯನ್ನು ವಿವರಿಸಿದರು.
ವರದಿ-ವೆಂಕಟೇಶ. ಹೆಚ್. ಬೂತಲದಿನ್ನಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.