ಜಗತ್ತಿನ ಸಕಲ ಜೀವರಾಶಿಗಳಿಗೆ ಮೂಲ ಪರಿಸರ.ಪರಿಸರ ಭೂಮಿ,ಆಕಾಶದ ನಡುವೆ ಇರುವ ಒಂದು ಅಮೂಲ್ಯವಾದ ವಾತಾವರಣ. ಸಕಲ ಜೀವರಾಶಿಗಳು ವಾಸಿಸುವ ತಾಣ.ಇಂತಹ ಒಂದು ವಾತಾವರಣದಲ್ಲಿ ಮನುಷ್ಯ ಜೀವಿಯಾದ ನಾವುಗಳು ಕೂಡ ವಾಸಿಸುತ್ತಿದ್ದೇವೆ.ಆದರೆ ಇತ್ತೀಚಿನ ದಿನಗಳಲ್ಲಿ ಮನುಷ್ಯ ತನ್ನ ದುರಾಸೆಯಿಂದ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಅಧುನಿಕತೆಗೆ ತಕ್ಕಂತೆ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆಯಿಂದ ತ್ಯಾಜ್ಯ ಪ್ಲಾಸ್ಟಿಕ್ ನ್ನು ಎಲ್ಲೆಂದರಲ್ಲಿ ಎಸೆದು ಪರಿಸರಕ್ಕೆ ಹಾನಿಮಾಡುತ್ತಿದ್ದಾನೆ.ಗಿಡಮರಗಳನ್ನು ಕಡಿಯುತ್ತಿದ್ದಾನೆ.ಇದರಿಂದಾಗಿ ಭೂಮಿಯ ಮೇಲಿನ ಮಣ್ಣಿನ ಸವಕಳಿಯಾಗುತ್ತಿದೆ.ಅತಿ ಹೆಚ್ಚು ವಾಹನಗಳ ಬಳಕೆಯಿಂದ ವಾಯುಮಾಲಿನ್ಯ ವಾಗುತ್ತಿದೆ.ಕೆಟ್ಟ ವಸ್ತುಗಳನೆಲ್ಲ ನೀರಿನಲ್ಲಿ ಹಾಕುವುದರಿಂದ ಜಲಮಾಲಿನ್ಯವಾಗುತ್ತಿದೆ.ಹೀಗೆ ಮನುಷ್ಯನ ನಾನಾಕಾರಣಗಳಿಂದ ಇಂದು ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರೋಪಾಯವೆಂದರೆ ಮನುಷ್ಯ ತನ್ನ ಸುತ್ತಮುತ್ತಲಿನಲ್ಲಿ ಗಿಡಮರಗಳನ್ನು ಬೆಳಸಿ ಸಂರಕ್ಷಿಸಬೇಕು,ಮನುಷ್ಯ ತಾನು ಜೀವಿಸಲು ಉಪಯುಕ್ತವಾದಂತಹ ವಸ್ತುಗಳನ್ನು ಪರಿಸರದಿಂದ ಉತ್ಪತ್ತಿಯಾದ ಹಾಗೂ ನೈಸರ್ಗಿಕವಾದ ವಸ್ತುಗಳನ್ನೇ ಬಳಸಬೇಕು.ಉದಾಹರಣೆಗೆ ಮಣ್ಣಿನ ಮಡಿಕೆಗಳಲ್ಲಿನ ನೀರು ಕುಡಿಯುವುದು,ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚವಾಗಿಟ್ಟುಕೊಳ್ಳುಬೇಕು ಆದ್ದರಿಂದ ಪ್ರತಿಯೊಬ್ಬರೂ ಪ್ಲಾಸ್ಟಿಕ್ ವಸ್ತುಗಳ ಬಳಕೆ ವಸ್ತುಗಳನ್ನು ತ್ಯಜಿಸಿ ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಿಸಬೇಕೆಂದು ವನಸಿರಿ ಫೌಂಡೇಶನ್ ವತಿಯಿಂದ ಮನವಿ ಮಾಡಿಕೊಳ್ಳತ್ತೇವೆ ಎಂದು ವನಸಿರಿ ಫೌಂಡೇಶನ್ ಅದ್ಯಕ್ಷ ಅಮರೇಗೌಡ ಮಲ್ಲಾಪೂರ ಮನವಿ ಮಾಡಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.