ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಡಿ.7ರಂದು ಮೆಟ್ರಿಯ ಮಹಾದೇವತಾತನವರ 42ನೇ ಪುಣ್ಮಸ್ಮರಣೆ

ಬಳ್ಳಾರಿ/ ಕಂಪ್ಲಿ : ತಾಲ್ಲೂಕಿನ ಮೆಟ್ರಿ ಗ್ರಾಮದಲ್ಲಿ ಡಿ.7ರ ಭಾನುವಾರದಂದು ಪ್ರಣವಜ್ಯೋತಿ ಮಹಾಕ್ಷೇತ್ರದ ಶ್ರೀವಿಶ್ವಾರಾಧ್ಯ ಗುರುಕುಲ ಮಠ ಸಂಸ್ಥಾಪಕರಾದ ಲಿಂಗೈಕ್ಯ ಹಂದ್ಯಾಳು ಮಠದ ಮಹಾದೇವತಾತನವರ 42ನೇ ಪುಣ್ಮಸ್ಮರಣೆ ಜರುಗಲಿದೆ.
ಪುಣ್ಯಸ್ಮರಣೆ ಪ್ರಯುಕ್ತ ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯರ ಪುರಾಣ ಪ್ರವಚನ ನ. 29ರಿಂದ ಆರಂಭಗೊಂಡಿದ್ದು, ವಿಶ್ವೇಶ್ವರಯ್ಯ ಸ್ವಾಮೀಜಿ ಪುರಾಣ ಪ್ರವಚನ, ಎ.ಎಂ. ಸೋಮಶೇಖರಯ್ಯಸ್ವಾಮಿ ಹರ‍್ಮೋನಿಯಂಗೆ ಸಿ.ಡಿ. ಮೌನೇಶ್ ತಬಲಾಸಾಥ್ ನೀಡಿದರು.
ಡಿ.7ರಂದು ಪುರಾಣ ಮಹಾಮಂಗಲ, ಉತ್ಸವ (ಉಚ್ಛಾಯ) ಮತ್ತು ದೀಪೋತ್ಸವ ಜರುಗಲಿದೆ. ಅಂದು ಬೆಳಿಗ್ಗೆ ಮಾತೃಶ್ರೀ ಗೌರಮ್ಮನವರ, ಶ್ರೀತಾತನವರ ಕರ್ತೃ ಗದ್ದುಗೆ, ಪ್ರಣವಜ್ಯೋತಿ ಪಂಚಾಚಾರ್ಯರ ಮಹಾಮೂರ್ತಿಗಳಿಗೆ ವಿಶೇಷ ರುದ್ರಾಭೀಷೇಕ, ಗಣಾರಾಧನೆ ಜರುಗಲಿದೆ.
ಎಮ್ಮಿಗನೂರು ವಾಮದೇವ ಮಹಾಂತ ಶಿವಾಚಾರ್ಯರು, ಬುಕ್ಕಸಾಗರ ವಿಶ್ವಾರಾಧ್ಯ ಶಿವಾಚಾರ್ಯರು, ಹರಗಿನಡೋಣಿ ಅಭಿನವ ಸಿದ್ದಲಿಂಗ ಶಿವಾಚಾರ್ಯರು, ನಾಡಿನ ಹರಗುರು ಚರಮೂರ್ತಿಗಳು ಭಾಗವಹಿಸಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!