ಹಾವೇರಿ ಜಿಲ್ಲೆಯ ಹಾನಗಲ್:ಚುನಾವಣಾ ಆಯೋಗದ ಆದೇಶದ ಮೇರೆಗೆ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಹಾನಗಲ್ ತಾಲೂಕಿನಲ್ಲಿ ಮತಯಂತ್ರಗಳ ತರಬೇತಿ ಮತ್ತು ಜಾಗೃತಿ ಅಭಿಯಾನವನ್ನು ಇಂದು ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಜನರಿಲ್ಲದೆ ಕೇವಲ ಅಧಿಕಾರಿ ವರ್ಗದವರಿಗೆ ಮತಯಂತ್ರದ ಕುರಿತು ಜಾಗೃತಿ ಮೂಡಿಸಲಾಯಿತು ಸುಮಾರು 2000 ಮತದಾರರು ಇರುವ ಗ್ರಾಮದಲ್ಲಿ ಕೇವಲ 15 ರಿಂದ 20 ಜನರಿಗೆ ಮತದಾನ ಜಾಗೃತಿ ಅಭಿಯಾನವನ್ನು ಪಿ ಡಬ್ಲ್ಯೂ ಡಿ ಇಂಜಿನಿಯರ ಶ್ರೀ ಪಾಂಡುರಂಗಪ್ಪ ಅವರು ಮತಯಂತ್ರದ ಕುರಿತು ತರಬೇತಿ ನೀಡಿದರು ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು,ಕಾರ್ಯದರ್ಶಿಗಳು ಮತ್ತು ಇನ್ನುಳಿದ ಸಿಬ್ಬಂದಿ ವರ್ಗದವರು,ಕೇವಲ ಎರಡು ಜನ ಮಾತ್ರ ಗ್ರಾಮ ಪಂಚಾಯತ ಸದಸ್ಯರು, ಗ್ರಾಮಸೇವಕರು, ಗ್ರಂಥಪಾಲಕ, ಒಟ್ಟಾರೆ ಸಾರ್ವಜನಿಕರಿಗಿಂತ ಅಧಿಕಾರಿ ವರ್ಗದವರೇ ಹೆಚ್ಚು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಇದು ಅಧಿಕಾರಿ ವರ್ಗದವರಿಗೆ ಮತದಾನ ಜಾಗೃತಿ ಅಭಿಯಾನವೋ? ಅಥವಾ ಸಾರ್ವಜನಿಕರಿಗೆ ಮತದಾನ ಜಾಗೃತಿ ಅಭಿಯಾನವೋ ಎಂಬ ಗೊಂದಲ ಮೂಡಿತು ಗ್ರಾಮದಲ್ಲಿ ಮುಂಚಿತವಾಗಿ ಡಂಗುರ ಸಾರುವ ಮೂಲಕ ಜನ ಸೇರಿಸಬೇಕಾದ ಅಧಿಕಾರಿಗಳು, ಯಾವುದೇ ರೀತಿ ಮುನ್ಸೂಚನೆ ಇಲ್ಲದೆ, ಜನರನ್ನು ಸೇರಿಸದೆ ಈ ಒಂದು ಕಾರ್ಯಕ್ರಮವನ್ನು ಮಾಡಿದರು.
ವರದಿಗಾರರು:ರವಿ ಓಲೆಕಾರ