ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಮಹತ್ವದ ಹೆಜ್ಜೆ ಇಟ್ಟಿರುವ ಶಾಸಕರಾದ ಮಾನೆ ಶ್ರೀನಿವಾಸ ಅವರು ಈ ಕುರಿತು ಬ್ರಿಟಿಷ್ ಹೈ ಕಮಿಷನ್ ನ ಡೆಪ್ಯುಟಿ ಹೈ ಕಮಿಷನರ್ ಚಂದ್ರು ಐಯ್ಯರ್ ಸೇರಿದಂತೆ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಹಾನಗಲ್ಲ ಭೌಗೋಳಿಕವಾಗಿ ಅತ್ಯುತ್ತಮ ಹವಾಗುಣ ಹೊಂದಿದ್ದು, ಕೃಷಿ ಆಧಾರಿತ ಕೈಗಾರಿಗಳ ಸ್ಥಾಪನೆಗೆ ಪ್ರಸಕ್ತವಾಗಿದೆ. ಇದರಿಂದ ರೈತರು, ಮಹಿಳೆಯರು, ಯುವಕರಿಗೆ ಅನುಕೂಲವಾಗಲಿದ್ದು, ನಗರ ಪ್ರದೇಶಗಳಿಗೆ ವಲಸೆ ತೆರಳುವುದು ತಪ್ಪಲಿದೆ. ಈ ನಿಟ್ಟಿನಲ್ಲಿ ಕಾಳಜಿ ವಹಿಸುವಂತೆ ಕೋರಿ, ತಾವೂ ಕೂಡ ಸಹಕಾರ ನೀಡಿ, ಜೊತೆಗೆ ನಿಲ್ಲುವುದಾಗಿ ಮಾನೆ ಶ್ರೀನಿವಾಸ ಹೇಳಿದರು. ಇದೇ ಸಂದರ್ಭದಲ್ಲಿ ತಾಲೂಕಿನ ಸಂಪ್ರದಾಯ, ಸಂಸ್ಕೃತಿ, ಆಚರಣೆಗಳ ಕುರಿತೂ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ವರದಿಗಾರರು:ರವಿ ಓಲೆಕಾರ,ಕೊಪ್ಪರಸಿಕೊಪ್ಪ