ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಪ್ರಥಮ ದರ್ಜೆ ಗುತ್ತಿಗೆದಾರ ಹಾಗೂ ಉದ್ಯಮಿ ಓಲೆ ಮಹದೇವು ಜೆಡಿಎಸ್ ಪಕ್ಷಕ್ಕೆ ಎಂ ಆರ್ ಮಂಜುನಾಥ್ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

ಹನೂರು:ನಮ್ಮ ಪಕ್ಷವು ಪ್ರಧಾನಮಂತ್ರಿಯನ್ನು ಕರ್ನಾಟಕದಿಂದ ದೇಶಕ್ಕೆ ಕೊಟ್ಟ ಏಕೈಕ ಪಕ್ಷವೆಂದರೆ ಅದು ನಮ್ಮ‌ ಜೆಡಿಎಸ್ ಪಕ್ಷ ಎಂದು ರಾಜ್ಯ ಉಪಾಧ್ಯಕ್ಷರಾದ ಎಮ್ ಆರ್ ಮಂಜುನಾಥ್ ತಿಳಿಸಿದರು .
ಹನೂರು ಪಟ್ಟಣದ ಜೆ ಡಿ ಎಸ್ ಕಛೇರಿಯ ಮುಂಭಾಗದ ಮೈದಾನದಲ್ಲಿ ಸೇರ್ಪಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಅಧ್ಯಕ್ಷರಾದ ಎಮ್. ಆರ್ ಮಂಜುನಾಥ್ ಅವರು ನಮ್ಮ ನಾಯಕರುಗಳ ಸಮ್ಮುಖದಲ್ಲಿ ಸರಳ ಸಮಾರಂಭದಲ್ಲಿ ಓಲೆ ಮಹದೇವು ರವರು ಸೇರ್ಪಡೆಯಾಗಿರುವುದು ತುಂಬಾ ಸಂತೋಷದ ವಿಷಯ ವಾಗಿದೆ. ಈದಿನ ಜಾತ್ಯತೀತ ಜನತಾದಳದ ಅಸ್ತಿತ್ವವಿಲ್ಲ ಎಂದವರಿಗೆ ತಕ್ಕ ಉತ್ತರ ಸಿಕ್ಕಿದೆ ,ಮಾದೇವಣ್ಣರವರ ಸೇರ್ಪಡೆ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ದಿಕ್ಸೂಚಿಯಾಗಿದೆ ಎನ್ನುಬಹುದು, ರಾಜ್ಯದಲ್ಲೇ ಬಹಳ ಅಪರೂಪವಾದ ಅಂಬೇಡ್ಕರ್ ಪ್ರತಿಮೆಯನ್ನು ನಿರ್ಮೀಸಿದ್ದಾರೆ ಅವರದೆ ಆದ ಯುವಕರ ತಂಡವಿದೆ ಅದೇ ನಮ್ಮ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ,ನಮ್ಮೆಲ್ಲರ ಉದ್ದೇಶವೊಂದೆ ಅದು ಕುಮಾರಣ್ಣನವರ ಕೈಬಲಪಡಿಸುವುದೇ ನಮ್ಮ ಗುರಿ, ಮುಂದಿನ ದಿನಗಳಲ್ಲಿ ಇದು ಸಹಕರಿಯಾಗುತ್ತದೆ, ಪಂಚರತ್ನ ಯಾತ್ರೆಯು ದೇಶದಲ್ಲಿಯೆ ಮಾದರಿಯಾಗಿದೆ ,ರೈತಾಪಿವರ್ಗವು ಕುಮಾರಣ್ಣ ನವರನ್ನು ನಂಬಿದ್ದಾರೆ.ನಮ್ಮ ಸರ್ಕಾರವು ಒಂದು ಎಕರೆ ಜಮೀನು ಇರುವ ರೈತರಿಗೂ ಸಹ 10 ಸಾವಿರ ರೂ ಅನುದಾನ ನೀಡಬೇಕು ಎಂದು ಹಾಗೂ ರೈತರನ್ನು ಸಾಲಗಾರರಾಗಿ ಮಾಡುವುದನ್ನು ತಡೆಯುವುದೆ ಕುಮಾರಣ್ಣನವರ ಉದ್ದೇಶವಾಗಿದೆ. ಮಹಿಳೆಯರ ಸ್ವಸಾಯ ಸಂಘ ಸಾಲ ಮನ್ನಾ, ವಿಧವಾ ವೇತನ ಎರಡುವರೆ ಸಾವಿರ ವೃದ್ಯಾಪ್ಯ ವೇತನ 5,000 ಸಹಾಯಧನ ನೀಡುವುದಾಗಿ ಬರವಸೆಯನ್ನು ನೀಡಿದ್ದಾರೆ. ಆರೋಗ್ಯ ದೃಷ್ಟಿಯಿಂದ ನಮ್ಮ ಕ್ಷೇತ್ರದಲ್ಲಿ ಸರ್ಕಾರಿ ಆಸ್ಪತ್ರೆಗಳ ಪ್ರಮಾಣ ಕಡಿಮೆ ಇದೆ ಗುಡ್ಡಗಾಡು ಜನರಿಗೆ ತಕ್ಷಣ ಆಸ್ಪತ್ರೆಗೆ ಹೋಗಲು ಸುಸಜ್ಜಿತ ಆಸ್ಪತ್ರೆಗಳು ಇಲ್ಲ ಹೆಚ್ಚು ಪ್ರಮಾಣದಲ್ಲಿ ಖಾಸಗಿ ಆಸ್ಪತ್ರೆಗಳನ್ನೆ ಅವಳಿಂಬಿಸಬೇಕಾಗಿದೆ ,ಈ ಭಾಗದಲ್ಲಿ ವಿದ್ಯೆಗೆ ಒತ್ತು ನೀಡಬೇಕು ,ಇಲ್ಲಿ ಎಂಜನೀಯರ್ ಕಾಲೇಜು ಇಲ್ಲ, ಕೇವಲ ಇಪ್ಪತ್ತು ಪರ್ಸೆಂಟ್ ಭೂಮಿ ಮಾತ್ರ ನೀರಾವರಿಗೆ ಮೀಸಲು ಉಳಿದವುಗಳೆಲ್ಲ ಬಂಜರು ಭೂಮೀಯಾಗಿದೆ ,ಇಲ್ಲಿರುವ ಕೆರೆಕಟ್ಟೆಗಳು ಕೇವಲ ಕೆಲವೆ ಭಾಗಕ್ಕೆ ಸೀಮಿತ ,ಮುಖ್ಯವಾಗಿ ನಿರುದ್ಯೋಗ ಸಮಸ್ಯೆ ವಿದ್ಯೆಗೆ ಅನುಗುಣವಾಗಿ ಉದ್ಯೋಗವಿಲ್ಲ ಎಂಬುದು ಎದ್ದುಕಾಣುತ್ತದೆ, ನಮ್ಮ ಕ್ಷೇತ್ರದಲ್ಲಿ ಒಂದೇ ಒಂದು ಕೈಗಾರಿಕೆ ಇಲ್ಲ ಕೈಗಾರಿಕೆ ಉದ್ಯಮವನ್ನು ಕ್ಷೇತ್ರದಲ್ಲಿ ಅಭಿವೃತ್ತುಪಡಿಸಬೇಕು. ಜಿಲ್ಲೆಯನ್ನು ಮತ್ತೊಮ್ಮೆ ಜೆಡಿಎಸ್ ಭದ್ರಕೋಟೆ ಮಾಡಿಯೇ ತೀರುತ್ತೇವೆ. ನಮಗೂ ಒಂದು ಅವಕಾಶವನ್ನು ನೀಡಿ ಕಳೆದ ಚುನಾವಣೆಯಲ್ಲಿ ಮತ ನೀಡಿದ ಎಲ್ಲಾರಿಗೂ ಧನ್ಯವಾದಗಳು ನನ್ನ ಕೆಲಸಕಾರ್ಯಕ್ಕೆ ಮಾನ್ಯತೆ ನೀಡಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲು ಒಂದು ಅವಕಾಶ ಕೊಡಿ ಎಂದು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದರು.
ಇದೆ ಸಂದರ್ಭದಲ್ಲಿ ಜೆ ಡಿ ಎಸ್ ಪಕ್ಷವನ್ನು ಸೇರಿ ಮಾತನಾಡಿದ
ಓಲೆ ಮಹದೇವ್ ಅವರು ಕುಮಾರಣ್ಣ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಅವರಿಗೆ ನಮ್ಮ ಬೆಂಬಲವನ್ನು ನೀಡುತ್ತೆವೆ ಮಂಜಣ್ಣನವರ ಕೈ ಬಲಪಡಿಸುವುದೇ ನನ್ನಗುರಿ ಎಂದರು. ಈ ಸಮಯದಲ್ಲಿ ತಮ್ಮ ಆಪ್ತರಾದ ಉದ್ಯಮಿ
ಪುಟ್ಟಸ್ವಾಮಿ ,ಸಿದ್ದಯ,ಕೂಡ್ಲೂರು ಮಂಜು, ರವರು ಪಕ್ಷ ಸೇರ್ಪಡೆಯಾದರು.
ಇದೇ ಸಮಯದಲ್ಲಿ ಸೈಯದ್ಅಕ್ರಮ್, ಜಿಲ್ಲಾವಕ್ತಾರರು ಮಾತನಾಡಿ ನಮ್ಮ ಜಿಲ್ಲೆಯ ಶಕ್ತಿಯಾದ ಮಂಜಣ್ಣ ಪಕ್ಷ ಸಂಘಟನೆಯಲ್ಲಿ ತೊಡಗಿರುವುದು ಅಪಾರವಾಗಿದೆ ಮುಂದುವರಿದು ಕೊಳ್ಳೇಗಾಲ ಪ್ರಬಲ ಮುಖಂಡರಾದ ಓಲೆ ಮಾದೇವ ರವರಿಗೆ ಶುಭವಾಗಲಿ ,ನಿಷ್ಠಾವಂತ ಕಾರ್ಯಕರ್ತರ ದೊಡ್ಡ ಪಡೆಯಿದೆ ಅದನ್ನು ಬಳಸಿಕೊಳ್ಳಿ, ನಮ್ಮ ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಕ್ಕೂ ಜೆಡಿಎಸ್ ಅಭ್ಯರ್ಥಿಗಳನ್ನು ನಿಲ್ಲಿಸಲಾಗುವುದು ನಮ್ಮ ರಾಜ್ಯದಿಂದ ಏಕೈಕ ಪ್ರಧಾನಿ ಕೊಟ್ಟ ಪಕ್ಷ ನಮ್ಮದು,ಜನರ ಸೇವೆಯೆ ನಮ್ಮ ಗುರಿ ಎಂದರು.
ಈ ಸಂಧರ್ಭದಲ್ಲಿ
ಚಾಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ ,ಪಟ್ಟಣ ಪಂಚಾಯತಿ ಸದಸ್ಯರಾದ ಆನಂದ್ ಕುಮಾರ್, ಮಮ್ತಾಜ್ ಬಾನು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರವಿಕುಮಾರ್ ಹಾಗೂ ಬಾಬು, ಚಾಮುಲ್ ನಿರ್ದೇಶಕರು ಉದ್ದನೂರು ಪ್ರಸಾದ್ ,ಜೆಸ್ಸಿಮ್, ಸಯ್ಯದ್ ಅಕ್ರಮ್ ,ಶಿವಮೂರ್ತಿ ,
ಮಂಜೇಶ್ ,ರಾಜುಗೌಡ ಮಾಜಿ ಪಟ್ಟಣ ಪಂಚಾಯತಿ ಸದಸ್ಯ
ಸಿದ್ದರಾಜು , ಮಹದೇವು ಕಟ್ಟಣ್ಣ ಲಾರಿ ಪುಟ್ಟಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.

ವರದಿ ಉಸ್ಮಾನ್ ಖಾನ್.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ