ಹನೂರು:ಪ್ರಜಾಪ್ರಭುತ್ವಕ್ಕೆ ಮತ್ತೊಂದು ಹೆಸರೇ ಭಾರತ ಇಲ್ಲಿ ವಾಸಿಸುವ ಎಲ್ಲಾ ದೀನ ದಲಿತರಿಗೆ ಧ್ವನಿಯಾಗಿದ್ದು ಹಾಗೂ ಎಲ್ಲಾ ವರ್ಗದ ಸರ್ವತೋಮುಖ ಅಭಿವೃದ್ಧಿಗೆ ತನ್ನ ಜನಪರ ಆಡಳಿತದ ಮೂಲಕ ಶ್ರಮಿಸಿದ್ದು ಕಾಂಗ್ರೆಸ್ ಪಕ್ಷ ಎಂದು ತಮ್ಮ ಪಕ್ಷವನ್ನು ಗುಣಗಾನ ಮಾಡಿದ ಶಾಸಕ ಆರ್.ನರೇಂದ್ರ.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಹನೂರು ವಿಧಾನಸಭಾ ಕ್ಷೇತ್ರದ ಆದಿ ಜಾಂಬವ ಸಮುದಾಯದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಈಗಾಗಲೇ ಈ
ಸಮುದಾಯದ ಸಂಘಟನೆಯನ್ನು ಗುರುತಿಸಿ ನಮ್ಮ ಪಕ್ಷವು ಉತ್ತಮ ಸ್ಥಾನಮಾನ ಮತ್ತು ಪಕ್ಷ ಸಂಘಟನೆಯ ಕುರಿತಾಗಿ ಚರ್ಚೆ ತುಂಬಾ ಅವಶ್ಯಕವಾಗಿದೆ,ಕಾಂಗ್ರೆಸ್ ಪಕ್ಷವು ರಾಜಕೀಯವಾಗಿ ಬಲ ಇಲ್ಲದವರಿಗೆ ಬಲ ನೀಡುತ್ತಾ ಆರಂಭದಿಂದಲೂ ಸ್ಪಂದಿಸುತ್ತಿದೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಾರೂ ಅವಕಾಶ ನೀಡುವುದಿಲ್ಲ ಪಕ್ಷ ಮತ್ತು ಜನರು ಗುರುತಿಸುವಂತಹ ಪ್ರಾಮಾಣಿಕ ಸೇವೆ ಮಾಡುವ ಮೂಲಕ ಅವಕಾಶಗಳು ನಮ್ಮನ್ನು ಹುಡುಕಿ ಬರುವಂತಹ ವ್ಯಕ್ತಿತ್ವವನ್ನು ನಾವು ರೂಪಿಸಿಕೊಳ್ಳಬೇಕು. ಕಳೆದ ನಾಲ್ಕು ವರ್ಷಗಳಿಂದ ಅಭಿವೃದ್ಧಿ ನಿಗಮಗಳಲ್ಲಿ ಯಾವುದೇ ಸಾಲ ಸೌಲಭ್ಯಗಳನ್ನು ಬಿಜೆಪಿ ಸರ್ಕಾರ ನೀಡುತ್ತಿಲ್ಲ. ಅಧಿಕಾರದ ಆಸೆಯಿಂದ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ದಲಿತ ಮತ್ತು ಹಿಂದುಳಿದ ಜನಾಂಗಗಳ ಬಗ್ಗೆ ಕಾಳಜಿ ಇಲ್ಲದ
ಬಿಜೆಪಿ ಸರ್ಕಾರ ಜನರಿಗೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯ ಬರೆ ಎಳೆದಿದೆ. ಬಿಜೆಪಿ ಸರ್ಕಾರದ ದುರಾಡಳಿತದ ಬಗ್ಗೆ ರಾಜ್ಯದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಆದ್ದರಿಂದ ದಲಿತ ಸಮುದಾಯಗಳು ಬಿಜೆಪಿಯನ್ನು ಕಡೆಗಣಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ.
ಕ್ಷೇತ್ರದಲ್ಲಿ ನೆಲೆಯೆ ಇಲ್ಲದೆ ಯಾವುದೇ ವಿಳಾಸವೂ ಇಲ್ಲದೆ ಕೆಲವರು ಹನೂರು ಕ್ಷೇತ್ರದ ಜನರು ಮಾರಾಟಕ್ಕಿದ್ದಾರೆ ಎಂದು ತಿಳಿದು ಜನರಿಗೆ ಹಣದ ಆಮಿಷ ತೋರಿಸಿ ದಿಕ್ಕು ತಪ್ಪಿಸುತ್ತಿದ್ದಾರೆ. ಅವರಿಗೆ ಕ್ಷೇತ್ರದ ಜನತೆ ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.
ಇದೇ ತಿಂಗಳು 21ನೇ ದಿನಾಂಕದಂದು ಪ್ರಜಾದ್ವನಿ ಯಾತ್ರೆಯು ಹನೂರು ಕ್ಷೇತ್ರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಯಾತ್ರೆಯನ್ನು ಸ್ವಾಗತಿಸಲು ಕ್ಷೇತ್ರದ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಶಾಸಕರು ತಿಳಿಸಿದರು.
ಹನೂರು ಪಟ್ಟಣಕ್ಕೆ ಆಗಮಿಸಿದ
ವಿಧಾನಪರಿಷತ್ ಸದಸ್ಯ ಡಾ. ತಿಮ್ಮಯ್ಯ ಅವರು ಮಾತನಾಡಿ ಬಿಜೆಪಿ ಸರ್ಕಾರವು ದಲಿತರು ಮತ್ತು ಸಾಮಾನ್ಯ ಜನರಿಗೆ ಯಾವುದೇ ಕಾರ್ಯಕ್ರಮವನ್ನು ರೂಪಿಸಿಲ್ಲ. ಅವರದು ಕೇವಲ ಹಣ ಮಾಡುವ ಉದ್ದೇಶವೆ ಹೊರತು ಅಭಿವೃದ್ಧಿಯ ಬಗೆಗಿನ ಕಾಳಜಿಯೆ ಇಲ್ಲ. ಅನ್ಯ ಪಕ್ಷದ ಆಮಿಷಗಳಿಗೆ ಮತ್ತು ನಾಟಕದ ಮಾತುಗಳಿಗೆ ಮರುಳಾಗದೆ ಆದಿಜಾಂಬವ ಸಮುದಾಯದ ಎಲ್ಲರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಆರ್ ನರೇಂದ್ರ ರವರ ಗೆಲುವಿಗೆ ಸಹಕರಿಸಬೇಕಾಗಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ, ಕಾಂಗ್ರೆಸ್ ರಾಜ್ಯ ಯುವ ಘಟಕದ ಕಾರ್ಯದರ್ಶಿ ಚೇತನ್ ದೊರೆರಾಜು, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್ ಕುಮಾರ್, ಸದಸ್ಯ ಸುದೇಶ್, ಹರೀಶ್ ಜಿಲ್ಲಾ ಆದಿಜಾಂಬವ ಸಮುದಾಯದ ಅಧ್ಯಕ್ಷ ಶಿವಮೂರ್ತಿ, ಕೊಳ್ಳೇಗಾಲ ತಾಲೂಕು ಘಟಕದ ಅಧ್ಯಕ್ಷ ಬಾಲರಾಜು, ಸಮುದಾಯದ ಮುಖಂಡರಾದ ಬೂದು ಬಾಳು ಮಾದೇವ, ರಂಗಯ್ಯ, ರಾಚಯ್ಯ, ಭೈರನತ್ತ ಬಸವಣ್ಣ, ಬಾಣೂರು ವೆಂಕಟಮಾಧು, ಲೊಕ್ಕನಳ್ಳಿ ವೆಂಕಟಯ್ಯ, ಸೇರಿದಂತೆ ಎಲ್ಲಾ ಗ್ರಾಮದ ಮುಖಂಡರು ಕಾರ್ಯಕರ್ತರು ಹಾಜರಿದ್ದರು.
ವರದಿ ಉಸ್ಮಾನ್ ಖಾನ್.