ವಿಜಯಪುರ/ಮುದ್ದೇಬಿಹಾಳ :ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡಿಹಾಳ ಗ್ರಾಮದಲ್ಲಿ ಐದು ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಲು ಪ್ರಭಾತ್ ಭೇರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕರ್ನಾಟಕ ಸರ್ಕಾರದಿಂದ ಐದು ವರ್ಷದ ಒಳಗಿನ ಎಲ್ಲ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ರಾಜ್ಯಾದ್ಯಂತ ಹಮ್ಮಿಕೊಂಡಿದ್ದು ಗುಡಿಹಾಳ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಾಯಂಕಾಲ 5:00 ವರೆಗೆ ಹಮ್ಮಿಕೊಂಡಿದ್ದು ಎಲ್ಲಾ ಪಾಲಕರು ಪೋಷಕರು ತಮ್ಮ 5 ವರ್ಷದ ಒಳಗಿನ ಎಲ್ಲಾ ಮಕ್ಕಳನ್ನು ತಮ್ಮ ಕೆಲಸಗಳನ್ನು ಬದಿಗೊತ್ತಿ ಮಕ್ಕಳ ಆರೋಗ್ಯದ ಹಾಗೂ ದೇಹದ ಸದೃಢತೆಗಾಗಿ ಈ ಲಸಿಕೆಯನ್ನು ಹಾಕಿಸಬೇಕು ಎಂದು ಮುಖ್ಯ ಗುರುಗಳಾದ ಸಂಗಮೇಶ ನವಲಿ ರವರು ಕರೆ ಕೊಟ್ಟರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಶ್ರೀದೇವಿ ತಿಮ್ಮಾಪುರ ಶಿಕ್ಷಕಿಯರಾದ ಲಕ್ಷ್ಮೀ ದೇವೇಂದ್ರಪ್ಪ ಮನಿಕಟ್ಟಿ ಕಾಶಿಬಾಯಿ ಹಾದಿಮನಿ ಆಶಾ ಕಾರ್ಯಕರ್ತೆರಾದ ರಾಜೇಶ್ವರಿ ಮಾಡಗಿ ಅಂಗನವಾಡಿ ಕಾರ್ಯಕರ್ತೆರಾದ ಎಲ್ಲಮ್ಮ ಉತಾಳೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡಿಹಾಳ ಗ್ರಾಮದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ




















