ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಇಟಗಿ ಉತ್ಸವ ನಿರಂತರವಾಗಿ ವೈಭವದಿಂದ ನಡೆಯಲಿ : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಭೀಮವ್ವ ಸಿಳ್ಳಿಕ್ಯಾತರ ಅಭಿಮತ

ಕೊಪ್ಪಳ/ ಇಟಗಿ: 22ನೇ ಬಾರಿಗೆ ನಡೆದ ಇಟಗಿ ಉತ್ಸವ ವನ್ನ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ
ಜನಪದ ಗಾಯನ ಮಾಡುವುದರೊಂದಿಗೆ
ಇಟಗಿ ಉತ್ಸವ ನಿರಂತರವಾಗಿ ವೈಭವದಿಂದ ನಡೆಯಲಿ ಸ್ಥಳೀಯ ಕಲಾವಿದರಿಗೆ ಹಾಗೂ ಅವಕಾಶ ವಂಚಿತ ಕಲಾವಿದರಿಗೆ ಕಾರ್ಯಕ್ರಮ ನೀಡುವ ಮೂಲಕ ಇಟಗಿ ಉತ್ಸವ ಸಮಿತಿ ಪ್ರಾಮಾಣಿಕವಾಗಿ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಅಭಿನಂದನಿಯವೆಂದರು. ತೊಗಲು ಗೊಂಬೆ ಆಟದ ಕಲೆಗೆ ನಮ್ಮ ಜೀವನವನ್ನೇ ಮುಡುಪಾಗಿಟ್ಟು 20ಕ್ಕೆ ಹೆಚ್ಚು ದೇಶಗಳಲ್ಲಿ ತೊಗಲು ಗೊಂಬೆ ಆಟದ ಪ್ರದರ್ಶನ ನೀಡಿ ಜನಪದ ಅಕಾಡೆಮಿಯ ಪ್ರಶಸ್ತಿ ರಾಜ್ಯೋತ್ಸವ ಪ್ರಶಸ್ತಿ
ಜನಪದ ಶ್ರೀ ಪ್ರಶಸ್ತಿ
ಕೊಪ್ಪಳ ಜಿಲ್ಲಾ ಉತ್ಸವದ ಪ್ರಶಸ್ತಿ ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿಯನ್ನು ಜೊತೆಗೆ ನಾಡಿನ ಹತ್ತು ಹಲವು ಪ್ರಶಸ್ತಿಗಳನ್ನು ನನ್ನ ಜನಪದ ತೊಗಲುಗೊಂಬೆ ಆಟಕ್ಕೆ ನೀಡಿ ಪ್ರೋತ್ಸಾಹಿಸಿದ್ದಾರೆ.
ಕರ್ನಾಟಕ ಸರ್ಕಾರ ನನ್ನ ತೊಗಲುಗೊಂಬೆಯಾಟಕ್ಕೆ ಹೆಚ್ಚಿನ ಮುತುವರ್ಜಿ ವಹಿಸಿ
ಆರ್ಥಿಕವಾಗಿ ಬೆಂಬಲಿಸಬೇಕಿದೆ.
ಅಂದಾಗ ಮಾತ್ರ ಇಂತಹ ಕಲೆಗಳು ಜೀವಂತಿಕೆಯಿಂದ
ಇರಲು ಸಾಧ್ಯವೆಂದರು.


ಸಾನಿಧ್ಯ ವಹಿಸಿದ್ದ ಮಹಾದೇವ ದೇವರು ಮಾತನಾಡಿ ಇಟಗಿ ಉತ್ಸವ ನಿರಂತರವಾಗಿ ನಡೆಯುತ್ತಿದೆ ಸರ್ಕಾರ ಈ ಉತ್ಸವಕ್ಕೆ ನಿರಂತರವಾಗಿ ಕಲಾತಂಡಗಳನ್ನು ಮತ್ತು ಧನಸಹಾಯವನ್ನು ನೀಡಬೇಕಿದೆ. ಇದರಲ್ಲಿ ರಾಜಕೀಯ ಮಾಡಬಾರದು ಈ ಉತ್ಸವಗಳು ರಾಜಕೀಯದಿಂದ ದೂರವಿದ್ದು ಈ ಭಾಗದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುತ್ತವೆ ಎಂದರು.
ಇಟಗಿ ಉತ್ಸವ ಸಮಿತಿ
ನಿರಂತರವಾಗಿ ಉತ್ಸವವನ್ನು ಮಾಡುತ್ತಿರುವುದು ಅಭಿನಂದನೀಯ ಹೀಗೆಯೇ ಮುಂದುವರೆಯಿರಲಿ
ದೇವಾಲಯ ಚಕ್ರವರ್ತಿಯ 1000ವರ್ಷ ವರ್ಷಾಚರಣೆಯ ಕಾರ್ಯಕ್ರಮ ಮಾಡುವಂತಾಗಲಿ ಶುಭ ಹಾರೈಸಿದರು.
ಇದೇ ಸಮಿತಿ 15 ವರ್ಷಗಳ ಹಿಂದೆ 900 ವರ್ಷಗಳ ವರ್ಷಾಚರಣೆ ಕಾರ್ಯಕ್ರಮವನ್ನು ಮಾಡಿತ್ತು ಎಂದು ಸ್ಮರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಇಟಗಿ ಉತ್ಸವ ಸಮಿತಿಯ ಸಂಚಾಲಕ ಮಹೇಶ್ ಬಾಬು ಸುರ್ವೆ ಜಿಲ್ಲೆಗೆ ಪದ್ಮಶ್ರೀ ಪ್ರಶಸ್ತಿಯನ್ನು ತಂದುಕೊಟ್ಟ ಶ್ರೀಮತಿ ಭೀಮವ್ವ ಶಿಳ್ಳಿಕ್ಯಾತರ್ ರವರಿಗೆ ಸರ್ಕಾರ ಮತ್ತು ಕೊಪ್ಪಳದ ಜಿಲ್ಲಾಡಳಿತ ಆರ್ಥಿಕವಾಗಿ ಬೆಂಬಲಿಸಿ ಅವರಿಗೆ ನಗರ ಪ್ರದೇಶದಲ್ಲಿ ನಿವೇಶನ ಅಥವಾ ಮನೆ ನೀಡಿ ಇಳಿ ವಯಸ್ಸಿನಲ್ಲಿ ವೈಯಕ್ತಿಕ ಕಾಳಜಿ ವಹಿಸಬೇಕಿದೆ.
ಅವರ ಕುರಿತು ವಾರ್ತಾ ಇಲಾಖೆಯಿಂದ
ಸಾಕ್ಷ್ಯ ಚಿತ್ರ ನಿರ್ಮಿಸಿ ಮುಂದಿನ ಪೀಳಿಗೆಗೆ ಅವರ ಕೊಂಬೆಯಾಟದ ಕಲೆ ಮುಂದುವರಿಸಲು ಸಹಕಾರಿಯಾಗಬೇಕಿದೆ ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ವಿನಂತಿಸಿದರು.
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಶಿವರಾಜ್ ತಂಗಡಿಗಿಯವರು ಕೊಪ್ಪಳ ಜಿಲ್ಲೆಯ ಉತ್ಸವಗಳಿಗೆ ಮತ್ತು ಕಲಾವಿದರಿಗೆ ಅಧಿಕಾರಿಗಳ ಮಾತು ಕೇಳಿ ನಿರ್ಲಕ್ಷ್ಯ ತೋರುತ್ತಿರುವುದು ಖಂಡನೀಯವೆಂದರು.
ಭ್ರಷ್ಟ ಅಧಿಕಾರಿಗಳ ಕೋಪವಾಗಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಕಳೆದ ಏಳೆಂಟು ವರ್ಷಗಳಿಂದ ಬೀಡು ಬಿಟ್ಟಿರುವ ಭ್ರಷ್ಟ ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕಿದೆ. ಕಲಾವಿದರು ನೀಡಿದ ದೂರುಗಳಿಗೆ ಕೂಡಲೇ ಸ್ಪಂದಿಸಿ ಭ್ರಷ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕೊಪ್ಪಳ ಜಿಲ್ಲೆಯ ಕಲಾವಿದರನ್ನು ಸಂಘ ಸಂಸ್ಥೆಗಳನ್ನು ನಿರ್ಲಕ್ಷಿಸುತ್ತಿರುವ
ಕಲ್ಬುರ್ಗಿ ವಲಯದ ಜಂಟಿ ನಿರ್ದೇಶಕರು ಮೇಲೆ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿದರು.
ಕಳೆದ 22 ವರ್ಷಗಳಿಂದಲೂ ನಡೆಸುತ್ತಿರುವ ಇಟಗಿ ಉತ್ಸವಕ್ಕೆ ಇಲಾಖೆ ಮೇಲಾಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯ ಮತ್ತು ತಾತ್ಸಾರ ಭಾವನೆ ಇದೇ ರೀತಿ ಮುಂದುವರೆದರೆ ಅಧಿಕಾರಿಗಳ ವಿರುದ್ಧ ಬೀದಿಗೆ ಇಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶರಣಪ್ಪ ವಡಗೆರಿಯವರ ಜನಪದ ಗಾಯನ
ಜೀವನ್ ಸಾಬ್ ಬಿನ್ನಾಳವರ ಜನಪದ ಹಾಸ್ಯ.
ಅವನಿ ಗಂಗಾವತಿಯವರ ಜಾನಪದ ನೃತ್ಯ
ರುಕ್ಮಿಣಿ ಸುವೆ೯ ಅವರ ಶಾಸ್ತ್ರೀಯ ನೃತ್ಯ
ವಿದ್ಯ ಮಂಗಳೂರ ಅವರ ಸಮೂಹ ನೃತ್ಯ
ಜೀ ವಿ ಶೀಲಾ ಅವರ ನೃತ್ಯ ರೂಪಕ
ಸೋನು ಅವರ ಲಂಬಾಣಿ ನೃತ್ಯ
ಜೈವಿಹಾನ ತಂಡದ ಸಮೂಹ ನೃತ್ಯ
ಶಿಲ್ಪಾ ಎಂ ಕೊಪ್ಪಳ ತಂಡದ ಭರತನಾಟ್ಯ ನೃತ್ಯಗಳು
ಸರಸ್ವತಿ ಸಸಿಮಠ ಗಾಯನ
ಮಲ್ಲನಗೌಡ ಪಾಟೀಲ್ ಅವರ ಏಕ ಪಾತ್ರ ಅಭಿನಯ
ನೆರೆದಿದ್ದ ಪ್ರೇಕ್ಷಕರ ಜನಮನವನ್ನು ರಂಜಿಸಿದವು.
ಉತ್ಸವದಲ್ಲಿ ಸಮ್ಮೇಳನ ಅಧ್ಯಕ್ಷರಾದ ಸಂಗಪ್ಪ ಕೊಪ್ಪಳ ಮತ್ತು ದೇವಪ್ಪ ಸನ್ಮಾನಿಸಲಾಯಿತು ವಿವಿಧ ಕ್ಷೇತ್ರದ ಸಾಧಕರಿಗೆ ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು
ವೇದಿಕೆಯಲ್ಲಿ ಗೌರವಾಧ್ಯಕ್ಷ ಎಂಬಿ ಅಳವಂಡಿ.ರುದ್ರಪ್ಪ ಭಂಡಾರಿ ಬಸವರಾಜ್ ಕೊನಾರಿ. ಮುರಾರಿ ಭಜಂತ್ರಿ
ಎಸ್ ಡಿ ಗಾಂಜಿ
ಸುರೇಶ ಗೌಡ್ರು ಕನಕಪ್ಪ ಕಂಬಳಿ
ಎಂ ಎಂ ಜನಾದ್ರಿ
ಹನುಮಂತಪ್ಪ ಕುರಿ
ಬಸವರಾಜ ಅಡಿವೆಪ್ಪನವರ್
ಸೇರಿದಂತೆ ಇತರರು ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಉತ್ಸವ ಸಮಿತಿಯ ಅಧ್ಯಕ್ಷ ಉಮೇಶ್ ಬಾಬು ಸುರ್ವೆ ವಹಿಸಿದ್ದರು.
ಶರಣಪ್ಪ ಹಾದಿ ಸ್ವಾಗತಿಸಿದರೆ ,
ಸುನಿಲ್ ನಾಗೇಶ್ವರಹಳ್ಳಿ ನಿರೂಪಿಸಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!