
ತುಮಕೂರು/ ಕೊರಟಗೆರೆ: ಅಭಿಮಾನಿಗಳ ಆಸೆಯಂತೆ ಕ್ಷೇತ್ರಕ್ಕೆ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ, ಪಿ ಎನ್ ಕೃಷ್ಣಮೂರ್ತಿ ರವರನ್ನು ನಾವು ಶಾಸಕರನ್ನಾಗಿ ಮಾಡಬೇಕೆಂದು ಕ್ಷೇತ್ರಕ್ಕೆ ಕರೆ ತರಲು ಸಾವಿರಾರು ಅಭಿಮಾನಿಗಳು ಇಂದು ಅವರ ನಿವಾಸದಲ್ಲಿ ಸೇರಿದರು.
ಡಿಸೆಂಬರ್ 27ರಂದು ಜನುಮ ದಿನೋತ್ಸವ.
ಕೊರಟಗೆರೆಯಲ್ಲಿ ಚುನಾವಣೆ ನಿಲ್ಲುವುದು ಖಚಿತ ಅರಸಮ್ಮ ದೇವಿಯ ಸಮುದಾಯ ಭವನವನ್ನು ನಿರ್ಮಿಸುತ್ತಿದ್ದೇನೆ ನಾನು ಮುಂದಿನ ದಿನಗಳಲ್ಲಿ ಹೋಬಳಿಗೆ ಎರಡು ಸಮುದಾಯ ಭವನಗಳನ್ನು ನಮ್ಮ ತಂದೆಯವರ ಹೆಸರಿನಲ್ಲಿ ನನ್ನ ಸ್ವ ಇಚ್ಚೆಯಿಂದ ಕಟ್ಟಿಸಿಕೊಡುತ್ತೇನೆ ಹಾಗೂ ಸಂಕೇನಹಳ್ಳಿ ಮತ್ತು ದೊಡ್ಡ ಪಾಲನಹಳ್ಳಿ ದೇವಸ್ಥಾನಗಳ ನಿರ್ಮಾಣಕ್ಕೆ ನನ್ನಿಂದ ಏನು ಸಹಾಯ ಬೇಕು ಅದು ನಾನೇ ಮಾಡುತ್ತೇನೆ ನನ್ನ ನೀವು ಯಾರೂ ರಾಜಕಾರಣಿ ಎಂದು ತಿಳಿದುಕೊಳ್ಳಬೇಡಿ ನಾನು ನಾನು ನಿಮ್ಮ ಬಂಧು ಬಳಗ ಎಂದು ತಿಳಿದುಕೊಳ್ಳಿ ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಇರಲಿ ಮಾವತ್ತೂರು ಅರಸಮ್ಮ ದೇವಿಯ ದೇವಸ್ಥಾನದ ಸಮುದಾಯ ಭವನ ಪೂರ್ಣಗೊಂಡ ನಂತರ ಉದ್ಘಾಟನೆಗೆ ಎಲ್ಲಾ ಹೋಬಳಿಯ ಜನರನ್ನು ಕರೆತಂದು ಎಲ್ಲಾ ಬಂದಂತಹ ಹೆಣ್ಣು ಮಕ್ಕಳಿಗೆ ಬಾಗಿನ ಕೊಡಬೇಕೆಂದು ನನ್ನ ಇಚ್ಛೆಯಾಗಿದೆ ವಿಶೇಷವಾಗಿ ದೊಡ್ಡಮಟ್ಟದಲ್ಲಿ ಜಾತ್ರೆ ಮಾಡಬೇಕೆಂದು ತಿಳಿಸಿದರು.
ಅವರ ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು ಅಪಾರ ಅಭಿಮಾನಿಗಳು ಕ್ಷೇತ್ರದಲ್ಲೆ ಮಾಡಬೇಕೆಂದು ತಾಲೂಕಿನಾದ್ಯಾಂತ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಅವರ ಅಭಿಮಾನಿಗಳನ್ನು ಕೇಳಿದಾಗ ಮುಂದಿನ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಿಂದ ಅತೀ ಹೆಚ್ಚು ಮತಗಳನ್ನು ನೀಡಿ ಅವರನ್ನು ಶಾಸಕರನ್ನಾಗಿ ನೋಡಲು ಬಯಸುತ್ತೇವೆ ಎಂದ ಅಭಿಮಾನಿಗಳು ಭರವಸೆಯನ್ನು ನೀಡಿದ್ದಾರೆ.
ಪಿ. ಎನ್. ಕೃಷ್ಣಮೂರ್ತಿ ರವರು ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿದ್ದಾಗ ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದಾರೆ ನೀವು ನೋಡಬಹುದು ಅವರನ್ನು ಶಾಸಕರನ್ನಾಗಿ ಮಾಡಿದಾಗ ಕ್ಷೇತ್ರಕ್ಕೆ ಇನ್ನೆಷ್ಟು ಅನುದಾನ ಮತ್ತು ಅಭಿವೃದ್ಧಿ ಮಾಡುತ್ತಾರೆ ಎಂದರೆ ಊಹೆಗು ಮೀರುವಂತಹ ಕೆಲಸಗಳನ್ನು ಮಾಡೋದ್ರಲ್ಲಿ ಎರಡು ಮಾತೇ ಇಲ್ಲ ಇಂಥ ಒಬ್ಬ ಜನನಾಯಕನನ್ನು ನಾವು ಕಳೆದುಕೊಂಡರೆ ಮತ್ತೆ ನಮಗೆ ಸಿಗಬಲ್ಲರೇ ಇವರಿಗೆ ಮತಗಳನ್ನು ಕೊಟ್ಟು ಶಾಸಕರನ್ನಾಗಿ ಮಾಡಬೇಕೆಂದು ನನ್ನ ಅಭಿಪ್ರಾ, ಪಿ ಎನ್. ಕೃಷ್ಣಮೂರ್ತಿಯವರ ಶಾಸಕರಾಗುವ ಆಸೆಯನ್ನು ನನಸು ಮಾಡುವುದು ನಮ್ಮ ಎಲ್ಲರ ಕರ್ತವ್ಯ ಮತ್ತು ಮತ ಬಾಂಧವರು ಅಭಿಮಾನವಾಗಿದೆ ಅಭಿಮಾನಿಗಳ ಭರವಸೆ ಎಂದರು.
ವರದಿ : ಪ್ರಸನ್ನಕುಮಾರ್ .ಎಸ್. ಕೊರಟಗೆರೆ




















