ರಾಯಚೂರು.ದಿನಾಂಕ 12/02/2023 ರವಿವಾರ ಸಿಂಧನೂರು ತಾಲೂಕಿನ ದಿ. ಚೆನ್ನಬಸಮ್ಮ ಸ್ಮಾರಕ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ (ರಿ) ಬೆಳಗುರ್ಕಿ, ಗ್ರಾಮ ಪಂಚಾಯಿತಿ ಅಲುಬನೂರು ಹಾಗೂ ಶ್ರೀ ಭೀಮಣ್ಣ ಹಡಪದ್ ಬೆಳಗುರ್ಕಿ, ಬೆಳಗುರ್ಕಿ ಗೆಳೆಯರ ಬಳಗ ವತಿಯಿಂದ ಸಿಂಧನೂರು ತಾಲೂಕಿನ ಅಲಬನೂರು ಗ್ರಾಮದ ಶ್ರೀ ಒಳಬಳ್ಳಾರಿ ಚೆನ್ನಬಸವೇಶ್ವರ ಸರಕಾರಿ ಪ್ರೌಢಶಾಲೆಯಲ್ಲಿ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯು ನಡೆಯಲಿದೆ.
ನಾಡಿನ ಎಲ್ಲ ವಿದ್ಯಾರ್ಥಿಗಳು ಹಾಗೂ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗ ಪಡಿಸಿಕೊಳ್ಳಲು ಮನವಿ.
ಪ್ರಥಮ ಬಹುಮಾನ 21000/- ರೂ ಮೌಲ್ಯ ಪುಸ್ತಕ,ದ್ವಿತೀಯ ಬಹುಮಾನ 11000/- ಮೌಲ್ಯ ಪುಸ್ತಕ ನೀಡಲಾಗುತ್ತದೆ. ಪರೀಕ್ಷೆ ನಡೆದ ದಿನವೇ ಫಲಿತಾಂಶವನ್ನು ಪ್ರಕಟಿಸಲಾಗುವುದು ಮತ್ತು ಬಹುಮಾನ ವಿತರಿಸಲಾಗುವುದು ಹಾಗೂ ಸರಕಾರಿ ನೌಕರಿ ಪಡೆದು ಸೇವೆ ಸಲುಸುತ್ತಿರುವ ಗ್ರಾಮದ ಯುವಕ ಮತ್ತು ಯುವತಿಯರಿಗೆ ಸನ್ಮಾನಿಸಲಾಗುವುದು. ಈ ಸಂದರ್ಭದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ “ಸ್ಪರ್ಧಾತ್ಮಕ ಯುಗದಲ್ಲಿ ವ್ಯಕ್ತಿತ್ವ ವಿಕಾಸನ “ಎಂಬ ಉಪನ್ಯಾಸ ಕಾರ್ಯಕ್ರಮವು ಶ್ರೀ ಶರಣಪ್ಪ ಹೊಸಳ್ಳಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಸಿಂಧನೂರು, ಶ್ರೀ ಬಸವರಾಜ್ ಎಲ್. ಚಿಗರಿ ಉಪನ್ಯಾಸಕರು, ಶ್ರೀ ಡಾಕ್ಟರ್ ಚನ್ನನ್ ಗೌಡ ನೇತ್ರ ತಜ್ಞರು, ಶ್ರೀ ವಿಶ್ವನಾಥ್ ಹಿರೇಗೌಡ್ರು ಸರ್ಕಲ್ ಇನ್ಸ್ಪೆಕ್ಟರ್ ಕೊಪ್ಪಳ, ಶ್ರೀ ಕೊಟ್ರೇಶ್ ಬಿ ಶಿಕ್ಷಕರು ತಿಡಿಗೋಳ, ಶ್ರೀ ಮುದುಕಪ್ಪ ಸಿಎಚ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಅಲಬನೂರು, ಶ್ರೀ ಕೆ. ಹರೀಶ್ ಶೆಟ್ಟಿ ಅಧ್ಯಕ್ಷರು ಶಾರದ ಎಜುಕೇಶನ್ ಸಿಂಧನೂರು, ಇವರ ನೇತೃತ್ವದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯುತ್ತದೆ.ಅಲಬನೂರು ಶ್ರೀ ಒಳಬಳ್ಳಾರಿ ಚನ್ನಬಸವೇಶ್ವರ ಸರಕಾರಿ ಪ್ರೌಢಶಾಲೆಯ ಶಿಕ್ಷಕ ವೃಂದ ಹಾಗೂ ಬೆಳಗುರ್ಕಿ ಶಾಲೆಯ ಮುಖ್ಯ ಗುರುಗಳು ಶಿಕ್ಷಕ ವೃಂದದವರು ಹಾಗೂ ಎಸ್. ಡಿ. ಎಮ್ .ಸಿ ಅಧ್ಯಕ್ಷರು ಮತ್ತು ಸದಸ್ಯರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಸದಸ್ಯರು, ಸಿಬ್ಬಂದಿಗಳು, ಬೆಳಗುರ್ಕಿ ಗ್ರಾಮದ ಉಪನ್ಯಾಸಕರು ಹಾಗೂ ಗ್ರಾಮಸ್ಥರು ಉಪಸ್ಥಿತಿಯಲ್ಲಿ ಇರುತ್ತಾರೆ.
ವರದಿ:ವೆಂಕಟೇಶ.ಹೆಚ್.ಬೂತಲದಿನ್ನಿ