ಏನ ಚೆಂದ ಗೆಳತಿ ನಿನ್ನಾ ಮೊಗವಂದ
ಏನ ಅಂದ ನಿನ್ನಾ ಮಕರಂದ
ಕಣ್ಣೇ ಕುಕ್ಕುವಂಗ ಮನಸ್ಸೇ ನಾಚುವಂಗ
ಕನಸು ಕಾಡತೈತಿ ದಿನಘಳಿಗೆಯಲಿ ನೆನೆದಾಗ….!!
ಬಂದಾಗ ಎದುರಿಗೆ ನೆದರ ಇರತೈತಿ ನಿನ ಮ್ಯಾಗ
ತಿರುಗಿ ಸ್ಮೈಲ ನೀ ಕೊಟ್ಟಾಗ ಝಲ್ಲೆಂದಂಗ ಎದಿಯಾಗ
ಕಣ್ಣ ಸನ್ನೆಯಲಿ ಕರೆದ ನಿಂತಲ್ಲೇ ನುಲಿಯತಿ
ಸಂತಿಯ ನೆಪದಾಗ ಬಂದ ನಿಂತ ಕಾಯತಿ..!!
ಸಂಜೀಕ ನೀ ಬಾರಾ ಚೆಲುವೆ ಅಂಜಿಕೆ ಪಡಬ್ಯಾಡ
ಸಜ್ಜಿಯ ತೆನೆ ಮುರಿದ ಬೇಸತ್ತಿನೆಂದು ಹೇಳಬ್ಯಾಡ
ಸಿಹಿ ಸಜ್ಜುಕು ಮಾಡಿ ಕೊಡತೀನಾ ಒಲ್ಲೆನಬ್ಯಾಡ
ಗೆಳತಿ ಮನಸ ಇಟ್ಟೀನಿ ನಿನಮ್ಯಾಲ ಕಾಯಿಸಬ್ಯಾಡ….!!
ಬೆಳದಿಂಗಳ ಓ ಬಾಲೆ ಇರಬೇಕ ನೀ ಜ್ವಾಕೀಲೆ
ಹಾಕಿ ಕರೆದೋಯ್ಯಲು ಕಾದಿರುವೆ ಕೊರಳಿಗೆ ಹೂಮಾಲೆ
ಬೆರಳಿಡಿದ ಕರಕೊಂಡ ಕನಸಿನ ಅರಮನೆಗೆ
ತುಸು ನಾಚಿಕೆಯ ನಮ್ರತೆಯಲಿ ಜಾರಲು ಹೂಹಾಸಿಗೆಗೆ….!
ವಾರ್ಷಿಕ ದಿನಕ್ಕೊಂದು ಕಂದನ ಕೈ ಹಿಡಿದು
ಸುಂದರ ಜಗದೊಳಗ ಹಂದರವ ಹಾಕಿ
ಚಿನಕುರಳಿ ಚೆಲುವಿಗೆ ಚೆಂದಾನ ಹೆಸರಿಟ್ಟ
ಕಲ್ಪನೆಯ ಕನಸಿಗೊಂದು ಕೊನೆಯನ್ನೀಡೋಣ….!!
- ಹನುಮಂತ ದಾಸರ
ಯುವ ಕವಿ ಸಾಹಿತಿ ಬರಹಗಾರರು
ಭಾರತ ಸೇವಾರತ್ನ ಪ್ರಶಸ್ತಿ ಪುರಸ್ಕೃತರು ಧಾರವಾಡ.