ಬೆಂಗಳೂರು: ನಗರದ ಚಾಮರಾಜಪೇಟೆಯಲ್ಲಿರುವ “ಮಾತಿನ ಮನೆ” ಯಲ್ಲಿ ಶ್ರೀ ಎನ್ ರಾಮನಾಥ್ ಅವರಿಂದ ಅಣಕವಾಡುಗಳು ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.
ಈ ಸಂಧರ್ಭದಲ್ಲಿ ಶ್ರೀಯುತರಾದ ರಮೇಶ್, ಅನಂತ್ ಹಾಗೂ ರಾ ಸು ವೆಂಕಟೇಶ ಮತ್ತಿತರರು ಉಪಸ್ಥಿತರಿದ್ದರು.
ಆರಂಭದಲ್ಲಿ ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದ ಅಂತ್ಯದಲ್ಲಿ ಶ್ರೀ ರಾಮನಾಥ್ ಅವರನ್ನು ಗೌರವಿಸಲಾಯಿತು. ಶೈಲಸುತೆ ರಂಜಿತ ಅವರ ನಿರೂಪಣೆಯ ಈ ಕಾರ್ಯಕ್ರಮದಲ್ಲಿ ಹತ್ತಾರು ಹಾಡುಗಳ ಮೂಲಕ ನೆರೆದವರನ್ನು ರಂಜಿಸಿದರು.
ವರದಿ: ಕೊಡಕ್ಕಲ್ ಶಿವಪ್ರಸಾದ್



















