ಕಿನ್ನಿಗೋಳಿ, ಮುಲ್ಕಿ , ಫೆಬ್ರವರಿ ೧೧ : ದಿನಾಂಕ ೦೬ ರಂದು ಆರಂಭ ಗೊಂಡಿದ್ದ ಶ್ರೀ ಸಹಸ್ರ ನೃಸಿಂಹ ಯಾಗವು ನಿತ್ಯ ಶ್ರದ್ದಾ ಭಕ್ತಿ ಯಿಂದ, ವೈಧಿಕ ವಿಧಿ ವಿಧಾನಗಳಿಂದ ನೆರವೇರಿಸಲ್ಪಟ್ಟು ಇವತ್ತು ಗಂಟೆ ೧೧:೩೦ ಕ್ಕೆ ವೇದ ಮೂರ್ತಿ ಕಾಶಿನಾಥ ಆಚಾರ್ಯ, ವೇದಮೂರ್ತಿ ಸುಧೀರ್ ಭಟ್ ಮತ್ತು ಸುಬ್ರಮಣ್ಯ ಶೆಣೈ ನೇತೃತ್ವ ದಲ್ಲಿ ಪೂರ್ಣಾಹುತಿಯೊಂದಿಗೆ ಸಂಪನ್ನ ಗೊಂಡಿತು ಈ ಯಾಗವನ್ನು ಲೋಕಕಲ್ಯಾಣಾರ್ಥವಾಗಿ ಶ್ರೀ ಸುಬ್ರಮಣ್ಯ ಶೆಣೈ ರವರಿಗೆ ಆಗಿದ್ದ ಪ್ರೇರಣೆಯಂತೆ ಆಯೋಜಿಸಲಾಗಿತ್ತು ಈ ಯಾಗ ಶುರು ಮಾಡುವ ಮುಂಚೆ ಶ್ರೀ ಸುಬ್ರಮಣ್ಯ ಶೆಣೈಯವರು ಮೂವತ್ತ ಎರಡು ಲಕ್ಷ ಓಂ ಕ್ಷಮ್ ನೃಸಿಂಹಾಯ ನಮಃ ಎಂಬ ಮೂಲ ಮಂತ್ರವನ್ನು ಜಪಿಸಿದ್ದರು.
ಪಾಯಸ,ಸರ್ಪಿಶ ತುಪ್ಪ, ಸಮಿತ್ತು ಸೇರಿ ಆರು ದ್ರವ್ಯ ಗಳನ್ನು ಹವಿಸ್ಸಾಗಿ ಕಳೆದ ಆರು ದಿನಗಳಿಂದ ನಿತ್ಯ ಸಮರ್ಪಿಸಲಾಗಿದೆ ನೆರೆದ ಭಕ್ತಾದಿಗಳಿಗೆ ನಿತ್ಯವೂ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ಎಲ್ಲ ರೀತಿಯಲ್ಲೂ ಇದೊಂದು ಯಶಸ್ವಿ ಯಾಗ ವಾಗಿದ್ದು ಲೋಕ ಕಲ್ಯಾಣ ಆಗಲಿ ಎಂಬುದು ಆಯೋಜಕರ ಆಶಯ.
ವರದಿ:ಚಂದ್ರಶೇಖರ ಹೆಬ್ಬಾರ್ ಕೊಲ್ಯ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.