ಹರಪನಹಳ್ಳಿ:ಗಂಗಜ್ಜಿ ನಾಗರಾಜ್ ಅವರು “ನಾನೊಬ್ಬ ಸಾರ್ವಜನಿಕ” ಎಂಬ ಕಾವ್ಯ ನಾಮದಿಂದ ಒಬ್ಬ ಶ್ರೇಷ್ಠ ಹವ್ಯಾಸಿ ಬರಹಗಾರರಾಗಿ ಸಮಾಜದ ಅಂಕು ಡೊಂಕು ಗಳನ್ನು ತಿದ್ದುವ ಸಲುವಾಗಿ ಅನೇಕ ಲೇಖನ ಕವನಗಳ ಮೂಲಕ ಸಮಾಜದ ನಿರ್ಮಾಣಕ್ಕೆ ಪಣ ತೊಟ್ಟಿದ್ದಾರೆ ಹಾಗೆಯೇ ನಾಗರಾಜ್ ಅವರಿಗೆ ಭಾರತೀಯ ಕಲಾ ಸಾಂಸ್ಕೃತಿಕ ಅಕಾಡಮಿ ವತಿಯಿಂದ ಭಾರತ ಭೂಷಣ ರಾಷ್ಟ್ರ ಪ್ರಶಸ್ತಿ ಕೂಡಾ ಲಭಿಸಿದೆ ಅನೇಕ ಪ್ರಶಸ್ತಿಗಳ ಜೊತೆಗೆ ಸನ್ಮಾನಗಳು ದೊರೆತಿವೆ ನಾಗರಾಜ್ ಅವರನ್ನು ಕೆಲವು ಕವಿಗಳು ಯುವಕವಿ, ರೊಮ್ಯಾಂಟಿಕ್ ಕವಿ,ನಸು ನಗೆಯ ನಾವಿಕ ಎಂದೆಲ್ಲ ಹೆಸರುಗಳಿಂದ ಕರೆಯುತ್ತಾರೆ
ನಾಗರಾಜ್ ಅವರು ಕೇವಲ ಒಂದೇ ರಂಗದಲ್ಲಿ ಇರದೇ ಕಲೆಯ ಜೊತೆಗೆ ಸಮಾಜಸೇವೆ ಹಾಗೂ ರಾಜಕೀಯ ಜ್ಞಾನವನ್ನು ಪಡೆದ ಅವರು 2017 ರಲ್ಲಿ ಮೊದಲ ಬಾರಿಗೆ AISF ಎಂಬ ವಿದ್ಯಾರ್ಥಿ ಸಂಘಟನೆ ಮೂಲಕ ಸಮಾಜಕ್ಕೆ ಧುಮುಕಿದರು ಅನ್ಯಾಯದ ವಿರುದ್ಧ ನನ್ನ ಹೋರಾಟ ಎಂದು ಸಮಾಜಕ್ಕೆ ಸಾರುವ ನಿಟ್ಟಿನಲ್ಲಿ ಹಲವಾರು ವಿದ್ಯಾರ್ಥಿಪರವಾದ ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ ಡಾ.ಪ್ರಿಯಾಂಕಾ ರೆಡ್ಡಿ ಹಾಗೂ ಮನಿಷಾ ಅವರ ಅತ್ಯಾಚಾರವಾದ ಸಮಯದಲ್ಲಿ aisf ಸಂಘಟನೆ ಮೂಲಕ ಕೊಟ್ಟೂರು ಹಾಗೂ ಹರಪನಹಳ್ಳಿ ಭಾಗದಲ್ಲಿ ಅಪಾರ ವಿದ್ಯಾರ್ಥಿ ಸಮೂಹದ ಮೂಲಕ ಹೋರಾಟಗಳನ್ನು ಮಾಡಿದ್ದಾರೆ ಇದರ ಜೊತೆ ಜೊತೆಗೆ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಇತರೆ ಸೌಲಭ್ಯಗಳ ಕುರಿತು ಸಂಘಟನಾತ್ಮಕವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ.
ಸಂಘಟನಾತ್ಮಕವಾಗಿ ಹೋರಾಟ ಮಾಡುತ್ತಾ ಬಂದಂತಹ ನಾಗರಾಜ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಬಂದು ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವ ದೃಷ್ಟಿಕೋನದಿಂದ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸುತ್ತಿರುವ ನಾಗರಾಜ್ ಅವರನ್ನು ಗಮನಿಸಿದ ಹಿರಿಯ ನಾಯಕರು ಕೆಪಿಸಿಸಿ ಒಬಿಸಿ ಘಟಕದ ಚಿಗಟೇರಿ ಬ್ಲಾಕ್ ಕಾರ್ಯಕಾರಿಣಿ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಿದರು ಹೀಗೆಯೇ ನಿರಂತರವಾಗಿ ಪಕ್ಷ ಸಂಘಟನೆ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕ್ರಮಗಳಲ್ಲೂ ನಾಗರಾಜ್ ಅವರು ಭಾಗಿಯಾಗಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ ಎಂ.ಪಿ.ವೀಣಾಮಹಾಂತೇಶ್ ಹಾಗೂ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಸಿದ್ದು ಹಳೆಗೌಡರು, ಗಂಗಜ್ಜಿ ನಾಗರಾಜ್ ಅವರನ್ನು ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಯುವ ಕಾಂಗ್ರೆಸ್ ನ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದರು ಹೀಗೆಯೇ ವಿವಿಧ ರೀತಿಯಲ್ಲಿ ಪಕ್ಷ ಸಂಘಟನೆ ಕಾರ್ಯದಲ್ಲಿ ತೊಡಗಿಕೊಂಡು ರಾಜಕೀಯವಾಗಿ,ಸಾಮಾಜಿಕವಾಗಿ, ವಿಶೇಷವಾಗಿ ಸಾಹಿತ್ಯ ಆಸಕ್ತಿಯನ್ನು ಬೆಳೆಸಿಕೊಂಡು ಸಮಾಜಕ್ಕೆ ಮಾದರಿ ರೂಪದಲ್ಲಿ ನಾಗರಾಜ್ ಅವರು ತಮ್ಮ ನಿಸ್ಕಲ್ಮಷ ಮನಸ್ಸಿನಿಂದ ಸಾರ್ಥಕ ಜೀವನವನ್ನು ನಡೆಸುತ್ತಾ ಬಂದಿದ್ದಾರೆ.
ನಾಗರಾಜ್ ಅವರ ಇಷ್ಟೆಲ್ಲಾ ಬೆಳವಣಿಗೆಗೆ ಪ್ರಮುಖವಾಗಿ ಕಾರಣಿಕರ್ತರು ಎಂದರೆ ಅವರ ತಂದೆ ತಾಯಂದಿರು ಹಾಗೂ ಕುಟುಂಬದ ಬಂಧುಗಳು ವಿಶೇಷವಾಗಿ ಮಾಜಿ ಉಪಮುಖ್ಯಮಂತ್ರಿಗಳ ಪುತ್ರಿ ಮಾಜಿ ಶಾಸಕರಾದ ಎಂ.ಪಿ ರವೀಂದ್ರ ಅಣ್ಣನವರ ಸಹೋದರಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಹೆಮ್ಮೆಯ ಜನನಾಯಕಿ ನಾಗರಾಜ್ ಅವರ ಸಹೋದರಿಯಾದ ಎಂ.ಪಿ.ವೀಣಾ ಮಹಾಂತೇಶ್ ಅವರ ಪ್ರೋತ್ಸಾಹವಿದ್ದು ಅನೇಕ ಅಕ್ಕಂದಿರ ಪ್ರೀತಿ ವಿಶ್ವಾಸದಿಂದಾಗಿ ಸದಾ ಒಬ್ಬ ಮಾದರಿ ವ್ಯಕ್ತಿಯಾಗಿ ಬೆಳೆಯುತ್ತಾ ಬಂದಿದ್ದಾರೆ.