ವಿಜಯನಗರ / ಹೊಸಪೇಟೆ : ನಗರದ ಚಾಪಲ್ ಗಡ್ಡೆ ಪ್ರದೇಶದಲ್ಲಿ ನಡೆದ ಘಟನೆಗೆ ಸಂಬಂಧಿಸಿದ ಸ್ಟೇಷನ್ ರಸ್ತೆಯ ಸಾಯಿಬಾಬಾ ಗುಡಿ ಹತ್ತಿರ, ಚಾಪಲ್ ಗಡ್ಡೆ ಏರಿಯಾದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮಹಿಳೆಯೊಬ್ಬರ ಕೊಲೆ ನಡೆದಿದ್ದು, ಹತ್ಯೆಯಾದ ಮಹಿಳೆ ಉಮಾ (28) ಎಂದು ಗುರುತಿಸಲಾಗಿದೆ ಇಂದು ಬೆಳಗಿನ ಜಾವ (ಜನವರಿ 6, 2026) ಈ ವಿಷಯ ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ವರದಿ : ಜಿಲಾನಸಾಬ್ ಬಡಿಗೇರ್



















