ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅವಳಿ ಜವಳಿ ಆಕಳು ಕರುಗಳಿಗೆ ಅದ್ಧೂರಿಯಾಗಿ ತೊಟ್ಟಿಲು ಶಾಸ್ತ್ರ

ಗದಗ : ಮನೆಯಲ್ಲಿ ಹುಟ್ಟಿದ ಮಕ್ಕಳಿಗೆ ತೊಟ್ಟಿಲು ಕಾರ್ಯ ಮಾಡೋದು ಸಹಜ. ಆದ್ರೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗದಗ ರಾಮಗೇರಿ ಗ್ರಾಮದಲ್ಲಿ ಅವಳಿ ಜವಳಿ ಆಕಳು ಕರುಗಳಿಗೆ ಮನೆಯವರು ಅದ್ದೂರಿಯಾಗಿ ತೊಟ್ಟಿಲು ಶಾಸ್ತ್ರ ಮಾಡಿದ್ದಾರೆ.
ಇದಕ್ಕೆ ನೂರಾರು ಗ್ರಾಮಸ್ಥರು ಕೂಡಾ ಸಾಕ್ಷಿಯಾಗಿದ್ದಾರೆ.
ಗ್ರಾಮದ ರೈತ ನಾಗರಾಜ್ ಮಡಿವಾಳರ ಮನೆಯಲ್ಲಿ ತೊಟ್ಟಿಲಿಗೆ ತೆಂಗಿನ ಗರಿ, ತಳಿರು ತೋರಣ, ಹೂವುಗಳಿಂದ ಶೃಂಗಾರ ಮಾಡಲಾಗಿದ್ದು, ಅಕ್ಷರಶಃ ಹಬ್ಬದ ವಾತಾವರಣ ಸ್ಥಳದಲ್ಲಿ ಮನೆ ಮಾಡಿತ್ತು. ಸಂಪ್ರದಾಯದಂತೆ ಮುದ್ದಾದ ಕರುಗಳನ್ನು ತೊಟ್ಟಿಲಿಗೆ ಹಾಕಿ ನೆರೆದಿದ್ದವರು ಸಂತಸಪಟ್ಟರು. ಮಠಾಧೀಶರು ಕೂಡ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಹೂವಿನಶಿಗ್ಲಿ ವಿರಕ್ತ ಮಠದ ಚನ್ನವೀರಮಹಾಸ್ವಾಮಿಗಳು, ಗಂಜಿಗಟ್ಟಿ ಚರಮೂರ್ತೇಶ್ವರ ಮಠದ ಡಾ. ವೈಜನಾಥ ಶಿವಲಿಂಗ ಮಹಾಸ್ವಾಮೀಜಿ ಕರುಗಳ ಕಿವಿಯಲ್ಲಿ ಹೆಸರು ಹೇಳುವ ಮೂಲಕ ನಾಮಕರಣ ನೆರವೇರಿಸಿಕೊಟ್ಟರು. ಮುದ್ದಾದ ಕರುಗಳಿಗೆ ಶಿವ-ಬಸವ ಅಂತ ನಾಮಕರಣ ಮಾಡಲಾಯಿತು.
ಈ ಕರುಗಳಿಗೆ ಜನ್ಮ ನೀಡಿರುವ ಹಸುವಿಗೆ 15 ದಿನಗಳ ಹಿಂದೆ ಸೀಮಂತ ಕಾರ್ಯವನ್ನು ರೈತ ನಾಗರಾಜ್ ಮಡಿವಾಳ ನೆರವೇರಿಸಿದ್ದರು. ಹೀಗಾಗಿ ಅವುಗಳನ್ನು ತೊಟ್ಟಿಲಿಗೆ ಹಾಕುವ ಕಾರ್ಯವನ್ನೂ ಕುಟುಂಬಸ್ಥರು ಭರ್ಜರಿಯಾಗಿಯೇ ನಡೆಸಿ ಗಮನ ಸೆಳೆದು, ನೂರಾರು ಜನರನ್ನು ಆಹ್ವಾನಿಸಿ ಖುಷಿಪಟ್ಟಿದ್ದಾರೆ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!