ಚಾಮರಾಜ ನಗರ ಜಿಲ್ಲೆಯ ಹನೂರು ತಾಲೂಕಿನ ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿಯ ಮಾದೇಶ್ ಬಿನ್ ಗೋವಿಂದಯ್ಯ ಎನ್ನುವವರಿಗೆ ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಭಿೃದ್ಧಿ ಅಧಿಕಾರಿ ಶಿವಕುಮಾರ್ ಶೌಚಾಲಯ ಬಿಲ್ ಪಾವತಿ ಮಾಡಲು ನಿರಾಕರಿಸುತ್ತಿದ್ದಾರೆ ಎಂದು ಮಾದೇಶ್ ತಮ್ಮ ಅಳಲು ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಹನೂರು ಇವರ ಗಮನಕ್ಕೆ ತಂದಿದ್ದಾರೆ
ಹನೂರು :ತಾಲೂಕಿನ ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ನಿವಾಸಿಯಾದ ಸೌಮ್ಯ ಕೋಂ ಮಾದೇಶ್ ತಮ್ಮ ಸ್ವಂತ ಬಳಕೆಗಾಗಿ ಶೌಚಾಲಯ ನಿರ್ಮಾಣ ಮಾಡಿಕೊಂಡಿದ್ದು ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದ್ದು ಸದರಿ ಶೌಚಾಲಯ ನಿರ್ಮಾಣಕ್ಕೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಿದ್ದೇವೆ ಆದರೆ ಇಲ್ಲಿವರೆಗೂ ನಾವು ಪಂಚಾಯಿತಿ ವತಿಯಿಂದ ಯಾವುದೇ ಸಹಾಯಧನ ಪಡೆದಿರುವುದಿಲ್ಲ ಈ ಬಗ್ಗೆ ವಿಚಾರಿಸಲು ಗ್ರಾಮ ಪಂಚಾಯಿತಿಗೆ ಹೋದರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ಯಾವುದೇ ತರಹದ ಪ್ರತಿಕ್ರಿಯೆ ನೀಡುತ್ತಿಲ್ಲ ಕೆಲವು ಸಮಯದಲ್ಲಿ ಲಂಚ ಕೇಳುತ್ತಾರೆ ಇದರಿಂದ ಮನನೊಂದು ಸೌಮ್ಯ ಕೋಂ ಮಾದೇಶ ರವರು ಕಂಪ್ಯೂಟರ್ ಆಪರೇಟರ್ ಗೆ 2,000 ಲಂಚ ಕೊಟ್ಟಿದ್ದರೂ ಸಹ ಇಲ್ಲಿವರೆಗೂ ನಮಗೆ ಯಾವುದೇ ತರಹದ ಪಾವತಿ ದೊರೆಕತೆ ಇರುವುದು ವಿಪರ್ಯಾಸ ಆದ ಕಾರಣ ನಮಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಕಳಕಳಿಯ ಮನವಿ ಮಾಡಿಕೊಂಡು ಮಾದೇಶರವರು ಹನೂರು ತಾಲೂಕು ಪಂಚಾಯಿತಿಗೆ ಬಂದು ತಮ್ಮ ಬಳಿ ಇರುವಂತಹ ಎಲ್ಲಾ ದಾಖಲೆಗಳನ್ನು ಒಂದು ಅರ್ಜಿಗೆ ಲಗತ್ತಿಸಿ ಲಿಖಿತ ರೂಪದಲ್ಲಿ ಅರ್ಜಿಯನ್ನು ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಮಾಡಿಕೊಂಡರು ನಂತರ ಇದನ್ನು ಪರಿಶೀಲಿಸಿದ ಕಾರ್ಯನಿರ್ವಹಣ ಅಧಿಕಾರಿ ದಾಖಲೆಗಳನ್ನು ಪರಿಶೀಲಿಸಿ, ಸಹಿ ಮಾಡಿ ಕೊಟ್ಟಿರುವ ದಾಖಲೆಯೂ ಸಹ ಮಾದೇಶ ಅವರ ಬಳಿ ಇದೆ ಆದ್ದರಿಂದ ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿಯ ಅಧಿಕಾರಿ ಶಿವಕುಮಾರ್ ಅವರು ಆದಷ್ಟು ಬೇಗ ಮಾದೇಶ್ ಎನ್ನುವವರಿಗೆ ಶೌಚಾಲಯ ಬಿಲ್ ಪಾವತಿ ಮಾಡಿಕೊಡಬೇಕೆಂದು ಮಾದೇಶ್ ರವರು ಕೇಳಿಕೊಳ್ಳುತ್ತಿದ್ದಾರೆ.
ವರದಿ:ಉಸ್ಮಾನ್ ಖಾನ್