ಹನೂರು :ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀಮಲೆಮಹದೇಶ್ವರ ಕ್ಷೇತ್ರಕ್ಕೆ ಆಗಮಿಸಿದ ಆಗಮಿಸಿದ ಕನ್ನಡದ ಪ್ರಖ್ಯಾತ ನಟ ದರ್ಶನ್ ರನ್ನು ಶ್ರೀ ಮಲೆ ಮಹದೇಶ್ವರ ಪ್ರಾಧಿಕಾರದ
ಉಪ ಕಾರ್ಯದರ್ಶಿಗಳಾದ ಬಸವರಾಜ್ ಹಾಗೂ ಸಿಬ್ಬಂದಿಗಳು ಆತ್ಮೀಯವಾಗಿ ಬರಮಾಡಿಕೊಂಡರು.
ಹನೂರು ತಾಲ್ಲೂಕಿನ ಶ್ರೀ
ಮಲೆ ಮಾದೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ
ಪೂಜೆ ಸಲ್ಲಿಸಿದ ನಂತರ ಅವರು
ದೇವಾಲಯದ ಕಚೇರಿಗೆ ಭೇಟಿ ನೀಡಿ ಪ್ರಾಧಿಕಾರದ ವತಿಯಿಂದ
ನಡೆಸಲಾಗುತ್ತಿರುವ ವಿವಿಧ ಕಾಮಗಾರಿಗಳು ಹಾಗೂ ದೀಪದ ಒಡ್ಡುವಿನಲ್ಲಿ ನಿರ್ಮಿಸಲಾಗುತ್ತಿರುವ 108 ಅಡಿ ಎತ್ತರದ
ಮಲೆಮಾದೇಶ್ವರ ಪ್ರತಿಮೆಯ ಬಗ್ಗೆ ಮಾಹಿತಿ ಪಡೆದುಕೊಂಡು,ಪಕ್ಕದಲ್ಲಿದ್ದ
ದಾಸೋಹ ಭವನಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿ ರಸ್ತೆ ಮಾರ್ಗವಾಗಿ
ಬೆಂಗಳೂರಿನತ್ತ ತೆರಳಿದರು ನೆಚ್ಚಿನ ನಟನ ನೋಡಲು ಮುಗಿಬಿದ್ದ ಅಭಿಮಾನಿಗಳು:
ನಟ ದರ್ಶನ್ ನೋಡಲು ನೂಕು ನುಗ್ಗಲು
ಮಲೆ ಮಹದೇಶ್ವರ ಬೆಟ್ಟಕ್ಕೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್
ಆಗಮಿಸುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಹನೂರಿಂದ ಪ್ರಾರಂಭವಾದ ಅಭಿಮಾನಿಗಳು ಹಾಗೂ ಭಕ್ತರು
ಅಭಿಮಾನಿಗಳು ಕಣ್ತುಂಬಿ ಕೊಂಡರು,ಅಲ್ಲದೆ ಮಲೆಮಾದೇಶ್ವರ ಬೆಟ್ಟದ ಮುಂಭಾಗದಲ್ಲಿಯು ಸಹ ಭಕ್ತರು
ಜಮಾಯಿಸಿದ್ದರು,ತಮ್ಮ ನಟನ ನೋಡಲು ಹಾಗೂ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ನೂಕುನುಗ್ಗಲು ಬಿದ್ದ
ಪರಿಣಾಮ ಕೆಲಕಾಲ ಗೊಂದಲ ಉಂಟಾಯಿತು. ಎಲ್ಲಾ ಅಭಿಮಾನಿಗಳಿಗೂ ಶಾಂತ ಸ್ವಭಾವದಲ್ಲೆ ಕೈ ಬೀಸಿದರು ಇದೇ ಸಂದರ್ಭದಲ್ಲಿ ಪ್ರಾಧಿಕಾರದ ಸಿಬ್ಬಂದಿಗಳು ಹಾಗೂ
ಪೊಲೀಸ್ ಅಧಿಕಾರಿಗಳು ದೇವಾಲಯಕ್ಕೆ ತೆರಳಲು ಅನುವುಮಾಡಿಕೊಟ್ಟರು.
ವರದಿ-ಉಸ್ಮಾನ್ ಖಾನ್
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.