ಈ ಬಾರಿಯೂ ಧಾರವಾಡ ಜಿಲ್ಲೆಯಾದ್ಯ್ಯಂತ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಡಲೆ ಬೆಳೆಯನ್ನು ಬೆಳೆದಿರುತ್ತಾರೆ
ಕಾರಣ ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ತರುವ ಮುಂಚಿತವಾಗಿ ರೈತರು ಬೆಳೆದ ದವಸ ಧಾನ್ಯಗಳು ಸಂಪೂರ್ಣವಾಗಿ ಯಾವುದೇ ನಿಯಮಗಳನ್ನು ಜಾರಿ ಮಾಡದೆ ಸರ್ಕಾರ ಖರೀದಿ ಕೇಂದ್ರಗಳನ್ನು ಜಿಲ್ಲಾಧ್ಯಂತ ತೆರೆಯಬೇಕೆಂದು ಇಂದು ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಶ್ರೀ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಧಾರವಾಡದ ಅಪರ ಜಿಲ್ಲಾಧಿಕಾರಿಗಳಾದ ಶ್ರೀ ಶಿವಾನಂದ ಭಜಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಮುಖಂಡರಾದ ಜಗದೀಶ್ ಜಾದವ, ನಾಗರಾಜ್ ರಾಯಣ್ಣವರ, ಸೋಮು ಬೈಲವಾಡ, ಕೃಷ್ಣ ಗೌಡ ಪಾಟೀಲ್, ಸುರೇಶ್ ಹಳಿಯಾಳ, ಮಂಜುನಾಥ್ ಅಂಗಡಿ, ವೀರೇಂದ್ರ ಸಿಂಗ್, ಧರ್ಮಗೌಡ ಪಾಟೀಲ್, ಮೃತ್ಯುಂಜಯ ಮಲ್ಲಯ್ಯಮಠ, ಬಸವರಾಜ್ ಕೆಮ್ಮನ್ ಗಿರಿ, ಕೃಷ್ಣ ಹಾರೇನವರ್,ಬಸವರಾಜ್ ಹಡಪದ್,ರಾಜು ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.
ವರದಿ – ಸದಾಶಿವ ಭೀ ಎಂ