ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಖಾಸಗಿ ಭೂಮಿ ಕಬ್ಜಾ ಮಾಡಲು ಕೆಲವರ ಹುನ್ನಾರ : ಚನ್ನಪ್ಪ ಆರೋಪ

ಕಂಪ್ಲಿ: ಖಾಸಗಿ ಭೂಮಿಯನ್ನು ಕಬ್ಜಾ ಮಾಡಲು ಕೆಲವರು ಹುನ್ನಾರ ನಡೆಸಿದ್ದಾರೆ ಎಂದು ಅಂಬೇಡ್ಕರ್ ಸ್ವಾಭಿಮಾನಿ ಸಂಘದ ಕಂಪ್ಲಿ ಕ್ಷೇತ್ರಾಧ್ಯಕ್ಷ ಸಿ.ಎ.ಚನ್ನಪ್ಪ ಆರೋಪಿಸಿದರು.
ಅವರು ಶನಿವಾರ ಪಟ್ಟಣದ ಅತಿಥಿ ಗೃಹದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯ ನೇತೃತ್ವವಹಿಸಿ ಮಾತನಾಡಿ, ಪಟ್ಟಣದ 4/6ನೇ ವಾರ್ಡಿನ ಸರ್ವೆ ನಂ.1400ನಲ್ಲಿ 5 ಎಕರೆ 34 ಸೆಂಟ್ಸ್ ಜಾಗ ಇದ್ದು, ಇದರಲ್ಲಿ 50ಸೆಂಟ್ಸ್ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಳ್ಳಲು ಹೊರಟಿದ್ದಾರೆ.
ಈಗಾಗಲೇ ಕೆಲವರು ಸರ್ಕಾರಿ ಉದ್ಯಾನವನ ಎಂದು ಪುರಸಭೆಗೆ ಮನವಿ ಮಾಡಿದ್ದಾರೆ. 1982ರಲ್ಲಿ ಇಲ್ಲಿನ ಜಾಗವು ಎನ್‌ಎ ಆಗಿದೆ. ವಲಿಸಾಬ್ ಅವರ ಆಸ್ತಿಯನ್ನು ಸರ್ಕಾರಿ ಜಾಗವೆಂದು ಸುಳ್ಳು ಹೇಳಿ, ವಶಪಡೆಸಿಕೊಳ್ಳಲು ಹೊರಟಿದ್ದಾರೆ. 50 ಸೆಂಟ್ಸ್ ಜಾಗವನ್ನು ಕಾನೂನಾತ್ಮಕವಾಗಿ ತೆರವುಗೊಳಿಸಲಾಗಿದೆ. 104 ನಿವೇಶಗಳನ್ನು ಮಾರಾಟ ಮಾಡಿದ್ದು, ಇನ್ನೂ 50ಸೆಂಟ್ಸ್ ಜಾಗ ಉಳಿದಿದೆ. ಆದ್ದರಿಂದ ಈ ಜಾಗವನ್ನು ಬೇರೆಯವರಿಗೆ ಒತ್ತುವರಿ ಮಾಡುವುದಕ್ಕೆ ಬಿಡುವುದಿಲ್ಲ. ಪುರಸಭೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ, ಫಾರಂ ನಂ-3 ನೀಡಿದ್ದು, ಅಧಿಕಾರಿಗಳನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ವಾದ (ಪ್ರೋ.ಬಿ.ಕೃಷ್ಣಪ್ಪ) ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಬಸಪ್ಪ ಭಾವಿಕಟ್ಟಿ, ಭೀಮವಾದ ಸಂಘಟನೆಯ ಪೃಥ್ವಿರಾಜ್‌ಸಿಂಗ್, ಯುವ ಮುಖಂಡರಾದ ಐ.ಶಂಕರ್, ಹುಸೇನಪ್ಪ ಇದ್ದರು.

  • ಜಿಲಾನ್ ಸಾಬ್ ಬಡಿಗೇರ್
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!