ಇಂದು ಫೆಬ್ರವರಿ 14 ಅನ್ನು valentine day ಎಂದು ಕೆಲವರು ಆಚರಿಸುವರು. ಇದಕ್ಕೆ ಕನ್ನಡದಲ್ಲಿ ” ಪ್ರೇಮಿಗಳ ದಿನಾಚರಣೆ ” ಎಂದೂ ಕರೆಯುತ್ತಾರೆ.
valentine’s day ಅಂದರೆ ? ಗೊತ್ತಿಲ್ಲದೆ ನಮ್ಮ ದೇಶದಲ್ಲಿ ಕುರುಡು ಕುರುಡಾಗಿ, ಹುಚ್ಚು ಹುಚ್ಚಾಗಿ ಆಚರಿಸುತ್ತಿದ್ದಾರೆ.
ಬಹಳ ಹಿಂದೆ ರೋಮ್ ಸಾಮ್ರಾಜ್ಯದಲ್ಲಿ ಕ್ಲಾಡಿಯಸ್ ಎನ್ನುವ ರಾಜನು ದೇಶವನ್ನು ಆಳುತ್ತಿದ್ದನು.ನಮಗೆ ತಿಳಿದಂತೆ ಗತ ಕಾಲದಲ್ಲಿ ರೋಮನ್ನರು ಬಹಳ ದರ್ಪಿಷ್ಟ ರಾಜರಾಗಿದ್ದರು.ಅವರು ಬಲಿಷ್ಠ ಸೈನ್ಯವನ್ನು ಹೊಂದಿ,ಇಡೀ ಯೂರೋಪನ್ನೇ ವಶಪಡಿಸಿಕೊಂಡಿದ್ದರು.ಈ ಕ್ಲಾಡಿಯಸ್ ದೊರೆಗೆ ಒಂದು ಯೋಚನೆ ಬಂತು. ತನ್ನ ಸೈನ್ಯದ ಸೈನಿಕರು ಮದುವೆ ಮಾಡಿಕೊಂಡರೆ, ಅವರುಗಳು ವೈವಾಹಿಕ ಜೀವನದಲ್ಲಿ ಮುಳುಗಿ, ಯುದ್ಧ ವಿಮುಖರಾಗಬಹುದು. ಇದರಿಂದ ಸೈನ್ಯ ಬಲಹೀನವಾಗಿ, ಸಾಮ್ರಾಜ್ಯ ವಿಸ್ತರಣೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಇದನ್ನು ತಡೆಯಬೇಕೆಂದು ಆತನು ಒಂದು ಆಜ್ಞೆ ಜಾರಿ ಮಾಡಿದನು. ಏನೆಂದರೆ ತನ್ನ ಸೈನ್ಯದ ಯೋಧರು ಯಾರೂ ವಿವಾಹವಾಗಕೂಡದು. ಅವರಿಗೆ ವಿವಾಹ ನಿಷಿದ್ಧ. ಆದರೆ ಮನುಷ್ಯನ ಸಹಜ ಧರ್ಮ ತಡೆಯುತ್ತದೆಯೇ ? ಇಲ್ಲ. ಕದ್ದು ಮುಚ್ಚಿ ವಿವಾಹಗಳು ಜರುಗುತ್ತಿದ್ದವು. ಈ ವಿವಾಹಗಳನ್ನು ‘ ವ್ಯಾಲೆಂಟೈನ್ ‘ ಎನ್ನುವ ಪಾದ್ರಿಯೋರ್ವರು ಗುಟ್ಟಾಗಿ ನಡೆಸಿಕೊಡುತ್ತಿದ್ದರು. ಎಷ್ಟೋ ದಿನಗಳಾದ ಮೇಲೆ ಕ್ಲಾಡಿಯಸ್ ರಾಜನಿಗೆ ಈ ವಿಷಯ ತಿಳಿದು ಬಂತು. ಅವನು ಕೋಪಗೊಂಡು ಪಾದ್ರಿಗೆ ಮರಣದಂಡನೆ ವಿಧಿಸಿದನು. ಕಾಕತಾಳೀಯವಾಗಿ ಅಂದು ಫೆಬ್ರವರಿ 14 ಆಗಿತ್ತು. ಆ ಪಾದ್ರಿಯ ಶವ ಸಂಸ್ಕಾರ ಮಾಡಿದ ದಿನವನ್ನೇ ವ್ಯಾಲೆಂಟೈನ್ ದಿನ ಎಂದು ಆಚರಿಸಲಾಗುತ್ತದೆ. ಸರಿಯಾಗಿ ಹೇಳಬೇಕೆಂದರೆ ಇದು ಶೋಕಾಚರಣೆಯ ದಿನ. ಭಾರತೀಯರು ಇದನ್ನು ‘ ಪ್ರೇಮಿಗಳ ದಿನ ‘ ಎಂದು ಆಚರಿಸುವುದು ಹಾಸ್ಯಾಸ್ಪದವಲ್ಲವೇ ?
ನಮ್ಮ ಭಾರತೀಯರಿಗೆ ವಸಂತ ಋತು ಪ್ರೇಮಿಗಳ ಋತು. ಇದು ಚೈತ್ರ- ವೈಶಾಖ ಮಾಸಗಳು. ಬೇಕಾದರೆ ಏಪ್ರಿಲ್- ಮೇ ಎನ್ನಿ. ನಮ್ಮ ಕನ್ನಡದಲ್ಲಿ ಒಂದು ಕವನವೇ ಇದೆ. ” ವಸಂತ ಬಂದ….. ಋತುಗಳ ರಾಜ ತಾ ಬಂದ, ಚಿಗುರನು ತಂದ…..ಹೆಣ್ಗಳ ಕುಣಿಸುತ ನಿಂದ……..
ಆದರೆ ವ್ಯಾಲೆಂಟೈನ್ ಡೇ ಆಚರಿಸುವ ನಮ್ಮ ಭಾರತೀಯರಿಗೆ ಏನು ಹೇಳೋಣ.
ಹುಚ್ಚೋ, ಬೆಪ್ಪೋ,…..ಶಿವಲೀಲೆಯೋ ?!!
ನೀವೇ ಯೋಚಿಸಿ.
-ವಾಟ್ಸ್ ಆಪ್