ನೆನಪುಗಳೇ ಹಾಗೆ ಸತ್ತವರ ಬದುಕಿಸುತ್ತಿವೆ
ಬದುಕಿದ್ದವರನ್ನು ನಿದ್ದೆಗೆಡಿಸಿ ಸಾಯಿಸುತ್ತಿವೆ
ಬಾಲ್ಯದಿಂದ ಯೌವನದ ಹಾದಿಯಲ್ಲಿ
ಹಿಂದೆ ಹಿಂದೆ ಬರುವುವು ನೆನಪುಗಳು
ನಾವು ಕಟ್ಟಿಕೊಂಡ ಕನಸು ಕೈಗೆ ಸಿಗದೆ ಸಾಗುತ್ತಿರಲು ನೆನಪಿನಂಗಳದಿಂದ ಉದಯಿಸಿವೆ ಮತ್ತೆ ಮತ್ತೆ ಕನಸುಗಳು
ನೆನಪುಗಳ ಸರಮಾಲೆಯಿಂದ ನಗುವು ಕಾಣದಾಗಿದೆ
ಕಾಣದ ದೇವರ ಹುಡುಕಾಟದಲ್ಲಿ ವಯಸ್ಸು ಕಳೆದಿದೆ
ದೇವರ ಹುಡುಕುವುದೆ ಒಂದು ಕಾಯಕವಾಗಿದೆ
ಈ ಜಗದಲಿ ಮಾಡಬೇಕು ಮೂಕಾಭಿನಯ
ಅಭಿನಯ ಮಾಡಿದ್ದರೆ ಯಾರು ಬರುವುದಿಲ್ಲ ಸನಿಹ
ತೋರಿಸಬೇಕು ಮೈಮೇಲಿನ ಚಿನ್ನ
ಚಿನ್ನವಿಲ್ಲದಿದ್ದರೆ ಮಾತನಾಡಿಸುವುದಿಲ್ಲ ಯಾರು ನಿನ್ನ
ಕೊಚ್ಚಿಕೊಂಡಷ್ಟು ಮೆಚ್ಚಿಕೊಳ್ಳುವರು ನಿನ್ನ
ಅವರ ಹಣದ ಮುಂದೆ ನಿನ್ನ ಗುಣ ತೃಣ ಸಮಾನ
ನೆನಪುಗಳು ಬರಗಾಲದಲ್ಲಿ ಮಳೆ ಬಿದ್ದು
ಕೆರೆ ತುಂಬಿ ಕೋಡಿ ಬಿದ್ದಂತೆ
ಎಲ್ಲೊ ಬಿದ್ದಿದ್ದ ನೆನಪು ಹೃದಯಕ್ಕೆ ಒದ್ದು
ಕಣ್ಣಿನಲ್ಲಿ ಕಂಬನಿ ತರಿಸಿ ತನಗೆ ತಿಳಿಯದಂತೆ
ಇನ್ನೊಂದು ಕಡೆಗೆ ಜಾರುತ್ತಿದೆ
ನೆನಪುಗಳೇ ಹೀಗೆ
-ವಿ.ಶ್ರೀನಿವಾಸ,ವಾಣಿಗರಹಳ್ಳಿ,
ದೊಡ್ಡಬಳ್ಳಾಪುರ (ತಾ)