ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗಡಿಭಾಗದ ಗುರುಕುಲ ಶಿಕ್ಷಣ ಸಂಸ್ಥೆಯ
ಉಪನ್ಯಾಸಕ ಸಂಗಮೇಶ ಬಸರಗಿಗೆ ಇಂಗ್ಲಿಷ್ ಉಪನ್ಯಾಸಕ ವೇದಿಕೆಯಿಂದ ಪ್ರಶಸ್ತಿ ಪುರಸ್ಕಾರ
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಇಂಗ್ಲೀಷ್ ಭಾಷೆಯ ಉಪನ್ಯಾಸಕ ವೇದಿಕೆಯಿಂದ ಪ್ರತಿಷ್ಠಿತ ಸಿ ಎಲ್ ಇ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ 2021-22 ನೇ ಸಾಲಿನ ಇಂಗ್ಲೀಷ್ ವಿಷಯದಲ್ಲಿ ಸಾಧನೆಗೈದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಅಥಣಿ ತಾಲ್ಲೂಕಿನ ಗಡಿಭಾಗದ ಕಕಮರಿಯ ಶ್ರೀ ಸದ್ಗುರು ರಾಯಲಿಂಗೇಶ್ವರ ಸ್ವತಂತ್ರ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಸಂಗಮೇಶ ಬಸರಗಿ ಇಂಗ್ಲಿಷ್ ವಿಷಯದಲ್ಲಿ ಕಾಲೇಜಿಗೆ ಶೇಕಡಾ 100 ಕ್ಕೆ 100 ಫಲಿತಾಂಶ ನೀಡುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕಾರಣ ಅವರನ್ನು ವೇದಿಕೆಯಿಂದ ಸತ್ಕಾರ ಮಾಡಲಾಯಿತು. ಹಾಗೇಯೇ ಗ್ರಾಮೀಣ ಭಾಗದಲ್ಲಿ ಇಂಗ್ಲಿಷ್ ವಿಷಯದಲ್ಲಿ ವಿದ್ಯಾರ್ಥಿಗಳು ಅಷ್ಪೊಂದು ಪ್ರವೀಣರಲ್ಲ ಮಾತನ್ನು ಸುಳ್ಳಾಗಿಸುವ ಮಟ್ಟಿಗೆ ರಾಯಲಿಂಗೇಶ್ವರ ಕಾಲೇಜಿನ ವಿದ್ಯಾರ್ಥಿನಿಯರಾದ ಅಂಕಿತಾ ಕಂಬಾರ ಹಾಗೂ ಅಂಕಿತಾ ಪುಠಾಣಿ ಇಂಗ್ಲಿಷ್ ವಿಷಯದಲ್ಲಿ ಜಿಲ್ಧೆಗೆ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆಯುವ ಮೂಲಕ ಕಾಲೇಜಿನ ಹೆಮ್ಮೆಯನ್ನು ಜಿಲ್ಲಾ ಮಟ್ಟದಲ್ಲಿ ಎತ್ತಿ ಹಿಡಿದಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಚಿಕ್ಕೋಡಿ ಶೈಕ್ಷಣಿಕ DDPU ಆದ ಶ್ರೀ ಪಿ ಆಯ್ ಭಂಡಾರೆ ಅಧ್ಯಕ್ಷತೆಯನ್ನು ಇಂಗ್ಲಿಷ ಉಪನ್ಯಾಸಕ ವೇದಿಕೆಯ ಅಧ್ಯಕ್ಷರಾದ ಶ್ರೀ ಎಸ್ ಡಿ ಸನಗೊಂಡ , ಕಾರ್ಯದರ್ಶಿಗಳಾದ ಶ್ರೀ ರವೀಂದ್ರ ಕಾಗಲೆ ಹಾಗೂ ಜಿಲ್ಲೆಯ ಸಮಸ್ತ ಇಂಗ್ಲಿಷ್ ಉಪನ್ಯಾಸಕ ವೃಂದವರು ಹಾಜರಿದ್ದರು.
ವರದಿ: ವಿಶ್ವನಾಥ ಹರೋಲಿ