ಸರ್ಕಾರದ ಕೆಲಸ ದೇವರ ಕೆಲಸ ಅನ್ನೋ ಮಾತು ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿಷಯದಲ್ಲಿ ಮಾತ್ರ ಅನ್ವಯ ವಾಗದು.
ಏಕೆಂದರೆ ಮುಂಡಗೋಡದ ಗಾಂಧಿನಗರದಲ್ಲಿ ಅಲ್ಲಿನ ನಿವಾಸಿಗಳು ಕಳೆದ 45 ವರ್ಷಗಳಿಂದ ವಾಸಿಸುತ್ತಿದ್ದಾರೆ, ಪಟ್ಟಣ ಪಂಚಾಯ್ತಿಯಲ್ಲಿ ಮನೆ ತೆರಿಗೆ ಪಾವತಿ ಮಾಡಿ ನಮೂನೆ-3 ಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ ನಿಯಮಗಳ ಪ್ರಕಾರ ಕೆಲ ದಿನಗಳಲ್ಲಿ ನಮೂನೆ -3 ನೀಡಬೇಕಾಗುತ್ತದೆ ಆದರೆ ಸರ್ಕಾರದ ನೌಕರರಾಗಿ ಸರ್ಕಾರದ ನಿಯಮಾನುಸಾರ ಕೆಲಸ ಮಾಡಲು ಅಸಡ್ಡೆ ತೋರುತ್ತಿರುವ ಪಟ್ಟಣ ಪಂಚಾಯ್ತಿ ಮುಂಡಗೋಡದ ಮುಖ್ಯಾಧಿಕಾರಿ ಹಾಗೂ ಅವರ ಸಿಬ್ಬಂದಿ ವರ್ಗದವರ ವರ್ತನೆ ಬಗ್ಗೆ ರೋಸಿಹೋಗಿ, ಸುಮಾರು 100 ಕ್ಕೂ ಹೆಚ್ಚು ಜನ ಗಾಂಧಿನಗರದ ನಿವಾಸಿಗಳು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರದ ಮೂಲಗಳಿಗೆ ಮನವಿಪತ್ರವನ್ನು ರವಾನಿಸಿದ್ದಾರೆ.
ಪಟ್ಟಣ ಪಂಚಾಯಿತಿ ಮುಂಡಗೋಡದ ಕೆಲ ಸಿಬ್ಬಂದಿಗಳು ಹಣ ನೀಡಿದರೆ ಮಾತ್ರ ಕೆಲಸ ಮಾಡುತ್ತಾರೆ ಅನ್ನೋ ಆರೋಪವನ್ನು ಪ್ರತಿಭಟನೆಯಲ್ಲಿ ಪಾಲ್ಗೊಂಡ ಕೆಲ ಗಾಂಧಿನಗರದ ನಿವಾಸಿಗಳು ಮಾಡಿದ್ದಾರೆ.ಇಷ್ಟೆಲ್ಲಾ ಆರೋಪಗಳು ಪಟ್ಟಣ ಪಂಚಾಯ್ತಿಯ ನೌಕರರ ಮೇಲಿದ್ದರೂ ಹಾಗೂ ಅನೇಕ ವರ್ಷಗಳಿಂದ ಮುಂಡಗೋಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಇವರನ್ನು ಬೇರೆಡೆ ವರ್ಗಾವಣೆ ಮಾಡುವಂತೆ ಸರ್ಕಾರದ ಮಟ್ಟದಲ್ಲಿ ಜನ ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದರು, ಕೆಲ ರಾಜಕೀಯ ನಾಯಕರ ಕೃಪಾ ಕಟಾಕ್ಷ ದಿಂದ ನೌಕರರು ರಾಜರಾಗಿ,ಅಹಂಕಾರದಿಂದ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾ ಇದ್ದಾರೆ.