ಫೆ.14ರ 2019ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ 40 ಧೈರ್ಯಶಾಲಿ ಸೈನಿಕರ ಹೆಸರಿನಲ್ಲಿ ಒಂದೊಂದು ಗಿಡದಂತೆ 40ಗಿಡಗಳನ್ನು 4ನೇ ವರ್ಷದ ಪುಲ್ವಾಮಾ ಹುತಾತ್ಮ ಯೋಧರ ದಿನದ ಅಂಗವಾಗಿ ವನಸಿರಿ ಫೌಂಡೇಶನ್ ವತಿಯಿಂದ ಸಿಂಧನೂರಿನ ಮರುಜೀವ ಪಡೆದ ಆಲದ ಮರ (ಅಮರಶ್ರೀ) ಆವರಣದಲ್ಲಿ ಶಾಲಾ ಮಕ್ಕಳಿಂದ ಹಚ್ಚಿಸಿ ನಾಮಫಲಕ ಹಾಕಿ,ಯೋಧರ ಶೌರ್ಯ ತ್ಯಾಗ ಬಲಿದಾನದ ಬಗ್ಗೆ ತಿಳಿಸಿ,ಮೌನಾಚರಣೆ ಮಾಡುವ ಮೂಲಕ ಗೌರವ ಸಲ್ಲಿಸುವ ಕಾರ್ಯ ನಡೆಯಿತು.
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಭಾರತೀಯ ಸೇನೆ CRPF ಯೋಧ ನಾಗೇಶ್ ಕಣ್ಣೇರ್ ಅವರು ಮಾತನಾಡಿ,ಯೋಧರ ತ್ಯಾಗವನ್ನು ಈ ದೇಶ ಎಂದಿಗೂ ಮರೆಯುವುದಿಲ್ಲ ಹುತಾತ್ಮ ಯೋಧರ ಶೌರ್ಯ,ತ್ಯಾಗ,ಅದಮ್ಯ ಧೈರ್ಯ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಯಾವಾಗಲೂ ಸ್ಫೂರ್ತಿಯಾಗಿ ಉಳಿಯುತ್ತದೆ ಎಂದರು.
ನಂತರ ಮಾತನಾಡಿದ ಜೀವಸ್ಪಂದನ ಟ್ರಸ್ಟ್ ಕಾರ್ಯದರ್ಶಿ ಅವಿನಾಶ್ ದೇಶಪಾಂಡೆ ಅವರು ವನಸಿರಿ ತಂಡ ಒಂದಲ್ಲಾ ಒಂದು ಕಾರ್ಯದಲ್ಲಿ ತೊಡಗಿಕೊಂಡು ನೆನಪಿಗಾಗಿ ಸಸಿನೆಡುತ್ತಿರುವುದು ಸಂತೋಷದ ವಿಷಯ ಇಂದು ಕೂಡಾ ಪಲ್ವಾಮಾ ದಾಳಿಯಲ್ಲಿ 40 ಹುತಾತ್ಮ ಯೋಧರನ್ನು ನೆನೆದು ಅವರಿಗೆ ಗೌರವ ನಮನಗಳನ್ನು ಸಲ್ಲಿಸಿ ಅವರ ಹೆಸರನ್ನು ಅಜರಾಮರಗೊಳಿಸಲು ಪ್ರತಿಯೊಂದು ಗಿಡಕ್ಕೆ ಅವರ ಹೆಸರಿನ ನಾಮಫಲಕಗಳನ್ನು ಅಳವಡಿಸಿರುವುದು ಹೆಮ್ಮೆಯ ಸಂಗತಿ ವನಸಿರಿ ಫೌಂಡೇಶನ್ ತಂಡದ ಸದಸ್ಯರಿಗೆ ಹೃದಯ ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲು ಬಯಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಅಮರೇಗೌಡ ಮಲ್ಲಾಪೂರ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ,ಅವಿನಾಶ್ ದೇಶಪಾಂಡೆ ಕಾರ್ಯದರ್ಶಿ ಜೀವ ಸ್ಪಂದನ ಚಾರಿಟೇಬಲ್ ಟ್ರಸ್ಟ್,
ಗಿರಿ ಸ್ವಾಮಿ ಹೇಡಿಗಿನಾಳ,ವೆಂಕಟ್ ರೆಡ್ಡಿ ಹೇಡಿಗಿನಾಳ, ರಂಜಾನ್ ಸಾಬ್,ರಾಜು ಬಳಗಾನೂರ್, ವೀರಭದ್ರಯ್ಯ ಸ್ವಾಮಿ ತಿಮ್ಮಾಪುರ್,ಮುದಿಯಪ್ಪ ಹೊಸಳ್ಳಿ ಕ್ಯಾಂಪ್,ಮಧು ಬಳಗಾನೂರ,ಮುಳ್ಳೂರು ಗ್ರಾಮದ ಯುವಕರ ಬಳಗ,ಸರ್ಕಾರಿ ಪ್ರೌಢಶಾಲೆ, ಪಿಡಬ್ಲ್ಯೂಡಿ ಕ್ಯಾಂಪ್,ಶಿಕ್ಷಕರು ಮತ್ತು ವಿದ್ಯಾರ್ಥಿಗಳಿದ್ದರು.