ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 498 ನೇ ಕೆರೆ ಗುದ್ದಲಿ ಪೂಜೆ

ಕಲಬುರ್ಗಿ ಜೇವರ್ಗಿ ತಾಲೂಕಿನ ಬೀಳವಾರ ಗ್ರಾಮದಲ್ಲಿ ಇಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬೀಳವಾರ ಗ್ರಾಮದಲ್ಲಿ ಕೆರೆ ಅಭಿವೃದ್ಧಿ ಸಮತಿ ಹಾಗೂ ಗ್ರಾಮ ಪಂಚಾಯಿತಿ ಬೀಳವಾರ ಸಹಭಾಗಿತ್ವದಲ್ಲಿ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮ ಅಡಿಯಲ್ಲಿ ಅಯ್ಕೆಯಾದ 498ನೇ ಕೆರೆ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮ ಯಶಸ್ವಿಗೆ ನಡೆಯಿತು.ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಾದ ಬಸವಣಗೌಡ ಉದ್ಘಾಟಿಸಿ ಮಾತನಾಡಿದರು ನಾಡಿನ ಜಲ ಮೂಲಗಳನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಅದರಲ್ಲಿ ಯಾವುದೆ ಪ್ರತಿಫಲ ಆಪೇಕ್ಷೆ ಇಲ್ಲದೆ ಇಂತಹ ಅನೇಕ ಸಮಾಜಮುಖಿ ಕಾರ್ಯಕ್ರಮಗಳು ಪೂಜ್ಯರು ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಅದರಲ್ಲಿ ಕೆರೆ ಹೂಳೆತ್ತುವುದು ರಿಂದ ಅಂತರಜಲ ಹೆಚ್ಚಾಗಿ ಕೃಷಿ ಚಟುವಟಿಕೆ ಪ್ರಗತಿಯೊಂದಿಗೆ ರೈತರಿಗೆ ಆರ್ಥಿಕವಾಗಿ ಅಭಿವೃದ್ಧಿ ಹೊಂದವರು ಮತ್ತು ಕೆರೆಯಲ್ಲಿ ಸದಾ ನೀರದ್ದರೆ. ಜಾನವಾರಗಳಿಗೆ ಹಾಗೂ ಪ್ರಾಣಿ -ಪಕ್ಷಿಗಳಿಗೆ ನೀರಳಿಕೆ ನೀಗಿಸಿಕೊಳ್ಳಲು ಸಾಹಯ ವಾಗತ್ತದೆ ಎಂದು ಹೇಳಿದರು ಜೇವರ್ಗಿ ತಾಲೂಕಿನ ಯೋಜನೆ ಅಧಿಕಾರಿಗಳಾದ ದಿನೇಶ ಎನ್ ಅವರು ಮಾತನಾಡುತ್ತಾ ಜೇವರ್ಗಿ ತಾಲೂಕಿನಲ್ಲಿ ಬೀಳವಾರ ಗ್ರಾಮದಲ್ಲಿ ಇದು ಮೊದಲ ಭಾರಿಗೆ ಕೆರೆ ಹೂಳೆತ್ತುವ ಕಾರ್ಯಕ್ರಮ ಪ್ರಾರಂಭ ಮಾಡಿದ್ದು. ನಮ್ಮ ಯೋಜನೆ ವತಿಯಿಂದ ಐದು ಲಕ್ಷ ರೂಪಾಯಿ ಪೂಜ್ಯರು ದೇಣಿಗೆ ನೀಡಿದ್ದಾರೆ ಕೆರೆಗಳು ಹಳ್ಳಿಯ ಆರ್ಥಿಕ ಹಾಗೂ ಸಾಮಾಜಿಕ ಕೇಂದ್ರ ಬಿಂದುವಾಗಿದೆ ಇದರಿಂದ ನಮ್ಮ ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗತ್ತದೆ. ಕೆರೆಗಳು ತುಂಬಿದರೆ ರೈತರು ಕೊಳವೆ ಬಾವಿ ಆಳಕ್ಕೆ ಹಾಕುವ ಅಗತ್ಯ ಇರುವುದಿಲ್ಲ ನಮ್ಮ ಯೋಜನೆ ವತಿಯಿಂದ ನಿರ್ಗತಿಕರಿಗೆ ಮಾಶಾಸನದ ವ್ಯವಸ್ಥೆ ದೇವಸ್ಥಾನಕ್ಕೆ ಜೀರ್ಣೋದ್ಧಾರ ವ್ಯವಸ್ಥೆ ಶಾಲೆಗಳಿಗೆ ಡೆಸ್ಕ್ ಬ್ರೆಂಚವಿತರಣೆ,ಜನಮಂಗಲ ಅಡಿಯಲ್ಲಿ ಅಂಗವಿಕಲರಿಗೆ ವಿಲ್ ಚೆರ್ ವಿತರಣೆ ಹಾಗೂ ಸರಕಾರಿ ಶಾಲೆಗಳಿಗೆ ಜ್ಞಾನ ದೀಪ ಶಿಕ್ಷಕರು ನೀಡುವಿಕೆ ,ರುದ್ರ ಭೂಮಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದು. ಅನೇಕ ಕಾರ್ಯಕ್ರಮಗಳನ್ನು ಯೋಜನೆ ಮಾಡುತ್ತಿದೆ ಎಂದು ಹೇಳಿದರು ಕೆರೆ ಅಭಿಯಂತರರಾದ ನಾಗೇಶ ಕೆರೆ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಡಿವಾಳಪ್ಪ ಪಡಶೆಟ್ಟಿ ಕೆರೆ ಕಮಟಿ ಅಧ್ಯಕ್ಷರಾದ ಜಗದೇವರಡ್ಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಯೂನಿಸ್, ಕರಿಬಸಪ್ಪ , ಶರಣು ಪೂಜಾರಿ, ಕೃಷಿ ಅಧಿಕಾರಿಗಳಾದ ರಾಜಕುಮಾರ ರಕ್ಷಾಳ, ಮೇಲ್ವಿಚಾರಕರಾದ ಶ್ಯಾಮ್, ಸೇವಾಪ್ರತಿನಿಧಿ ಬಸವರಾಜ, ಶಿವಪುತ್ರ ಮತ್ತು ಗ್ರಾಮದ ಹಿರಿಯರು ಮುಖಂಡರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ:ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ