ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜನಪದ ಭೂಷಣ ಪ್ರಶಸ್ತಿಗೆ ಕಲಾವಿದ ಈರಪ್ಪ ಭಾಜನ

ಬಾಗಲಕೋಟೆ -ಮುಧೋಳ : ಕಳೆದ 30 ವರ್ಷಗಳಿಂದ ಜನಪದ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ನಿರಂತರ ಸೇವೆ ಮಾಡುತ್ತಾ ಬಂದಿರುವ ಮುಧೋಳದ ಹಂಚಿನಾಳ [ಆರ್.ಸಿ.] ಪುನವ೯ಸತಿ ಕೇಂದ್ರದ ಜನಪದ ಕಲಾವಿದ ಈರಪ್ಪ ಮಾದರ ಅವರು ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನವು ನೀಡುತ್ತಿರುವ 2026ರ ರಾಜ್ಯ ಮಟ್ಟದ ಜನಪದ ಭೂಷಣ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತಾಲೂಕಿನ ಪುಣ್ಯ ಕ್ಷೇತ್ರ ಕುಳಲಿ ಗ್ರಾಮದ ಸದ್ಗುರು ಗುರುನಾಥಾರೂಢರ ಮಠದ ಸಾಂಸ್ಕೃತಿಕ ಭವನದಲ್ಲಿ ನಡೆದ ರಾಜ್ಯ ಮಟ್ಟದ ಜನಪದ‌ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಸಾಧು ಚಕ್ರವರ್ತಿ ಜಗದ್ಗುರು ಡಾ.ಶ್ರೀ ಶಿವಾನಂದ ಭಾರತಿ ಶ್ರೀಗಳು ಪ್ರಶಸ್ತಿ ನೀಡಿ ಗೌರವಿಸಿದರು.
ಸದ್ಗುರು ಶ್ರೀ ಗುರುನಾಥಾರೂಢರ ಮಠದ ಪೂಜ್ಯರಾದ ಶಂಕರಾನಂದ ಶ್ರೀಗಳು. ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಶರಣಬಸವ ಶಾಸ್ತ್ರಿಗಳು, ಹಿರಿಯರಾದ ನಾಗಪ್ಪ ಐಹೊಳೆ, ಪಿ .ಜಿ.ಗಣಿ, ಶಿವಪ್ಪ ಪವಾಡಶಟ್ಟಿ, ರಮೇಶ ತಳಪಟ್ಟಿ.ಸಂಗಪ್ಪ ಗಣಿ. ಬಸವ ಜಾನಪದ ಕಲಾವಿದರ ಸಂಸ್ಥೆಯ ಅಧ್ಯಕ್ಷ ರಮೇಶ ಸೋಲೋನಿ. ಪಿ.ಕೆ.ಪಿ.ಎಸ್. ಸದಸ್ಯ ಮುತ್ತಪ್ಪ ಪೋಳ.ಪ್ರತಿಷ್ಠಾನದ ಉಪಾಧ್ಯಕ್ಷ ಮುತ್ತಪ್ಪ ಬನಾಜಗೋಳ ಮುಂತಾದವರು ಉಪಸ್ಥಿತರಿದ್ದರು.
ಅಭಿನಂದನೆಗಳು :
ಮಹಾದೇವ ಮಾದರ . ಮುತ್ತಪ್ಪ ಮಾದರ.ಎಂ.ರಮೇಶ.ರಾಮಪ್ಪ ಮಾದರ ಸೇರಿದಂತೆ ಅನೇಕ ಬಂಧುಗಳು ಪುರಸ್ಕೃತ ಕಲಾವಿದ ಈರಪ್ಪ ಮಾದರ ಅವರಿಗೆ ಅಭಿನಂದನೆ ಸಲ್ಲಿಸಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!