ಸಿಂಧನೂರಿನ ಆನಂದ್ ಮೋಟಾರ್ಸ್ ಹೀರೋ ಶೋ ರೂಮ್ ಮೋಟಾರ್ಸ್ ನಲ್ಲಿ ನೂತನವಾಗಿ ಮಾರುಕಟ್ಟೆಗೆ ಬಿಡುಗಡೆಯಾದ “ಝಾಮ್” ಸ್ಕೂಟಿಯ ಉದ್ಘಾಟನೆ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟಕರಾಗಿ ಪರಿಸರ ಪ್ರೇಮಿಗಳು,ಕಲ್ಯಾಣ ಕರ್ನಾಟಕ ಭಾಗದ ಹಸಿರುಕರಣದ ಹರಿಕಾರರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕ ಅದ್ಯಕ್ಷರಾದ ಶ್ರೀ ಅಮರೇಗೌಡ ಮಲ್ಲಾಪೂರ ಅವರು ಆಗಮಿಸಿದ್ದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪರಿಸರ ಪ್ರೇಮಿ ಅಮರೇಗೌಡ ಮಲ್ಲಾಪೂರ ಅವರು ಹಿರೋ ಕಂಪನಿ ಪ್ರಪಂಚದ ಮೊದಲ ದೊಡ್ಡ ಟು ವಿಲ್ಹರ್ ಉತ್ಪಾದನಾ ಕಂಪನಿಯಾಗಿದೆ.ಪ್ರತಿವರ್ಷವೂ ಹೀರೋ ಪರಿಸರ ದಿನದಂದು ಲಕ್ಷಾಂತರ ಸಸಿಗಳನ್ನು ನೆಡುವುದರ ಮೂಲಕ ಪರಿಸರ ಕಾಳಜಿ ಮಾಡುತ್ತಿದೆ.ಅದಲ್ಲದೇ ರಾಜಸ್ಥಾನದಲ್ಲಿರುವ ನೀಮ್ರಾನ್ ಪ್ಲಾಂಟ್ನಲ್ಲಿ ಲಕ್ಷಾಂತರ ಸಸಿಗಳನ್ನು ನೆಟ್ಟು ದೇಶವಿದೇಶಗಳಲ್ಲಿ”ಗ್ಲೋಬನ್ ಗಾರ್ಡನ್ ಮ್ಯಾನ್ಯು ಪ್ಯಾಕ್ಟರಿಂಗ್ ಪ್ಲಾಂಟ್”ಎಂಬ ಬಿರುದು ಪಡೆದಿದೆ.ಅದೇ ನೀಮ್ರಾನ್ ಪ್ಲಾಂಟ್ನಲ್ಲಿ ಉತ್ಪಾದನೆಯಾದ ಈ ಝೂಮ್ ಸ್ಕೂಟರ್ ಇಂದು ಮಾರುಕಟ್ಟೆಗೆ ಪರಿಚಯ ಮಾಡಿಕೊಡಲಾಗುತ್ತದೆ.ಇದು ಭಾರತೀಯರ ನಂಬಿಕೆಗೆ ಅರ್ಹವಾದ ನೆಚ್ಚಿನ ನಂಬರ್ 1ಬ್ರಾಂಡ್ ಆಗಿದೆ.ಇಂತಹ ಒಂದು ಸ್ಕೂಟರ್ ನ ಉದ್ಘಾಟಕರಾಗಿ ನನ್ನನ್ನು ಕರೆಸಿರುವುದು ನನ್ನ ಭಾಗ್ಯ ಮತ್ತು ಈ ಉದ್ಘಾಟನಾ ಕಾರ್ಯಕ್ರಮದ ರೂವಾರಿಗಳಾದ ಸಿಂಧನೂರಿನ ಆನಂದ್ ಮೋಟಾರ್ಸ ಹಿರೋ ಶೋ ರೂಮ್ ಕಂಪನಿಯ ಮೇನೇಜರ್ ಹಾಗೂ ಎಲ್ಲಾ ಸಿಬ್ಬಂದಿಗಳಿಗೆ ನಮ್ಮ ವನಸಿರಿ ಫೌಂಡೇಶನ್ ವತಿಯಿಂದ ಹೃದಯ ಪೂರ್ವಕ ಧನ್ಯವಾದಗಳು.ಮತ್ತು ಈ ಸ್ಕೂಟರ್ ನ ಉಪಯೋಗವನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ನಂತರ ಆನಂದ ಮೋಟಾರ್ಸ್ ಹಿರೋ ಶೋ ರೂಮ್ ಕಂಪನಿಯ ವತಿಯಿಂದ ವ್ಯವಸ್ಥಾಪಕರು ಅಮರೇಗೌಡ ಮಲ್ಲಾಪೂರ ಅವರಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಆನಂದ ಮೋಟಾರ್ಸ್ ಹಿರೋ ಶೋ ರೂಮ್ ಕಂಪನಿಯ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಭಾಗಿಯಾಗಿದ್ದರು.