ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹಡಪದ ಅಪ್ಪಣ್ಣ ಕ್ಷೌರಿಕರಿಗೆ ಸಮಾಜದ ಕಾಯಕ ಬಂಧುಗಳಿಗೆ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಟೂಲ್ ಕಿಟ್ ವಿತರಣೆ

ಪಿಎಂ ವಿಶ್ವಕರ್ಮ ಯೋಜನೆ ದೇಶದಲ್ಲೇ ನಂ.೧ : ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ವಲಯ ಘಟಕದಲ್ಲಿ ಇರುವ ಹಡಪದ ಅಪ್ಪಣ್ಣ (ಕ್ಷೌರಿಕ ) ಸಮಾಜದ ಕಾಯಕ ಬಂಧುಗಳಿಗೆ ದೇಶದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಪಿ. ಎಮ್. ವಿಶ್ವಕರ್ಮ ಯೋಜನೆಯ ಕಾರ್ಯಕ್ರಮದ ಮೂಲಕ ಬಡ ಹಡಪದ ಅಪ್ಪಣ್ಣ ಕ್ಷೌರಿಕ ಸಮುದಾಯದ ಜನರು ತಮ್ಮ ಸ್ವಂತ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಹೇಳಿದರು.
ನಾಲವಾರ ಅಂಚೆ ಕಚೇರಿ ಆವರಣದಲ್ಲಿ ಮಂಗಳವಾರ ವಿಶ್ವಕರ್ಮ ಯೋಜನೆ ಫಲಾನುಭವಿಗಳ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಲಿಸಿ
ಪಿಎಂ ವಿಶ್ವಕರ್ಮ ಯೋಜನೆ ಕ್ಷೌರಿಕರು ಸೇರಿದಂತೆ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ (5% ಬಡ್ಡಿಯಲ್ಲಿ 3 ಲಕ್ಷ ರೂ. ವರೆಗೆ), ಉಚಿತ ತರಬೇತಿ, ಟೂಲ್ ಕಿಟ್ ಪ್ರೋತ್ಸಾಹಧನ (15,000 ರೂ. ವರೆಗೆ) ಮತ್ತು ಡಿಜಿಟಲ್ ವಹಿವಾಟು ಪ್ರೋತ್ಸಾಹವನ್ನು ಒದಗಿಸುವ ಮೂಲಕ ಆರ್ಥಿಕ ಸಬಲೀಕರಣಕ್ಕೆ ದೊಡ್ಡ ಬೆಂಬಲ ನೀಡಿದೆ. ಇದು ಕ್ಷೌರಿಕರಿಗೆ ಆಧುನಿಕ ಪರಿಕರಗಳನ್ನು ಖರೀದಿಸಿ, ವೃತ್ತಿಯನ್ನು ಅಭಿವೃದ್ಧಿಪಡಿಸಲು ಸಹಕಾರಿಯಾಗಿದೆ ಕೈಗಳು ಮತ್ತು ಉಪಕರಣಗಳಿಂದ ಕೆಲಸ ಮಾಡುವ ಕುಶಲ ಕರ್ಮಿಗಳಿಗೆ ಸಂಪೂರ್ಣ ಬೆಂಬಲ ಒದಗಿಸುತ್ತದೆ. ಸಾಂಪ್ರದಾಯಿಕ ಕರಕುಶಲ ವಸ್ತುಗಳಲ್ಲಿ ತೊಡಗಿರುವ ಜನರನ್ನು ಬೆಂಬಲಿಸುವುದು ಈ ಯೋಜನೆ ಉದ್ದೇಶವಾಗಿದೆ. ಸ್ಥಳೀಯ ಉತ್ಪನ್ನಗಳು, ಕಲೆ ಮತ್ತು ಕರಕುಶಲ ವಸ್ತುಗಳ ಮೂಲಕ ಪ್ರಾಚೀನ ಸಂಪ್ರದಾಯ ಮತ್ತು ವೈವಿಧ್ಯಮಯ ಪರಂಪರೆ ಜೀವಂತ ವಾಗಿಡುವ ಜೊತೆಗೆ ಕುಶಲಕರ್ಮಿಗಳನ್ನು ಆರ್ಥಿಕ ಬೆಂಬಲಿಸುವ ಉದ್ದೇಶ ಈ ಯೋಜನೆಯದ್ದಾಗಿದೆ. ಈ ಯೋಜನೆ ೧೮ ವೃತ್ತಿಗಳಲ್ಲಿ ತೊಡಗಿರುವ ಕುಶಲಕರ್ಮಿಗಳನ್ನು ಮತ್ತು ನಮ್ಮ ಹಡಪದ ಅಪ್ಪಣ್ಣ (ಕ್ಷೌರಿಕ ) ಸಮಾಜದ ಕಾಯಕ ವೃತ್ತಿಯನ್ನು ಮಾಡುವ ಬಂಧುಗಳು ಒಳಗೊಂಡಿದೆ. ಸಾಂಪ್ರದಾಯಿಕ ಕುಲಕಸುಬುದಾರರ ಕೌಶಲವನ್ನು ಹೆಚ್ಚಿಸಲು ಕೇಂದ್ರ ಸರಕಾರ ರೂಪಿಸಿದ ಪಿಎಂ ವಿಶ್ವಕರ್ಮ ಯೋಜನೆಯಡಿ ಪೂರ್ಣ ತರಬೇತಿ ಪಡೆದವರಿಗೆ ಕೊನೆಗೂ ಟೂಲ್‌ ಕಿಟ್‌ ಲಭ್ಯವಾಗತೊಡಗಿದೆ.
ತರಬೇತಿ ಪಡೆದು ವರ್ಷ ಕಳೆದರೂ ಅರ್ಹ ಫ‌ಲಾನುಭವಿಗಳಿಗೆ ಟೂಲ್‌ಕಿಟ್‌ ಬಂದಿರಲಿಲ್ಲ. ಈ ಬಗ್ಗೆ ಅನೇಕ ಕನ್ನಡ ದಿನ ಪತ್ರಿಕೆಯಲ್ಲಿ ವಿಸ್ತೃತ ವರದಿಯನ್ನು ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್. ಹಾಗೂ ಸಮಾಜದ ಬಂಧುಗಳ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಕಚೇರಿ. ಹಾಗೂ ಕಾರ್ಮಿಕ ಇಲಾಖೆ.ಮತ್ತು ಕೈಗಾರಿಕಾ ತರಬೇತಿ ಜಂಟಿ ನಿರ್ದೇಶಕರ ಆಫೀಸ್ ಗೆ ಮತ್ತು ಜಿಲ್ಲಾ ಪೊಸ್ಟ್ ಆಫೀಸ್ ಗೇ ಮನವಿ ಪತ್ರ ಸಲ್ಲಿಸಿ ವರದಿಯನ್ನು ಪ್ರಕಟಿಸಿತ್ತು. ಅದರಂತೆ ಸಂಸದ ಕೋಟಾ ಶ್ರೀನಿವಾಸ ಪೂಜಾರಿಯವರಿಗೊ ಕೇಂದ್ರ ಸರಕಾರದ ಗಮನಕ್ಕೂ ತಂದಿದ್ದು, ಇದೀಗ ಫ‌ಲಾನುಭವಿಗಳಿಗೆ ಟೂಲ್‌ಕಿಟ್‌ ಒದಗಿಸಲಾಗುತ್ತಿದೆ. ಸುಮಾರು 15 ಸಾವಿರ ರೂ. ಮೌಲ್ಯದ ಟೂಲ್‌ಕಿಟ್‌ಗಳನ್ನು ಏಕರೂಪ ವ್ಯವಸ್ಥೆಯಲ್ಲಿ ಭಾರತೀಯ ಅಂಚೆ ಇಲಾಖೆ ಮೂಲಕ ಆಯಾ ಫ‌ಲಾನುಭವಿಗಳ ಮನೆ ಬಾಗಿಲಿಗೇ ತಲುಪಿಸಲಾಗುತ್ತದೆ ಎನ್ನುತ್ತಾರೆ ಇಲಾಖೆಯ ರಾಘವೇಂದ್ರ SPM ಪೊಸ್ಟ್ ಮಾಸ್ತರ,
ಅನ್ನಪೂರ್ಣ ಪೊಸ್ಟ್ ಮ್ಯಾನ್ ಚಿದಾನಂದ ಭವನಗಿರಿ, ಸುಗೂರ ಎನ್ ಪೊಸ್ಟ್ ಮಾಸ್ತರ.
ಈ ಸಂಧರ್ಭದಲ್ಲಿ ದತ್ತು ಸವಿತಾ ಸಮಾಜ ನಾಲವಾರ. ವಿಶ್ವನಾಥ ಬಿ ಹಡಪದ ಸುಗೂರ ಎನ್. ಸಿದ್ದು ಹಡಪದ ಯರಗೋಳ, ಶಶಿಧರ ನಾಲವಾರ. ಮಲ್ಲಿಕಾರ್ಜುನ ಹಡಪದ ಯರಗೋಳ.ಚನ್ನಪ್ಪ ಹಡಪದ ಯರಗೋಳ. ಸಿದ್ದು ಹಡಪದ ನಾಲವಾರ. ಸೇರಿದಂತೆ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್. ಅವರು ಸಮಾಜದ ಜನತೆಗೆ ಟೂಲ್ ಕಿಟ್ ಗಳನ್ನು ಪೋಸ್ಟ್ ಆಫೀಸ್ ನಿಂದ ವಿತರಣೆ ಮಾಡಿಸಿ ಸಂತೋಷ ವ್ಯಕ್ತಪಡಿಸಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!