ತುಮಕೂರು:ಪಾವಗಡ ತಾಲೂಕಿನ ಮರಿದಾಸನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ತಿಪ್ಪಯ್ಯನದುರ್ಗ ಗ್ರಾಮದ ಜೆಡಿಎಸ್ ಪಕ್ಷದ ಸದಸ್ಯರಾದ “ಶಿವಲಿಂಗಪ್ಪ” ನವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ 18ಜನ ಸದಸ್ಯರ ಬಲವನ್ನು ಹೊಂದಿರುವ ಪಾವಗಡ ತಾಲೂಕಿನ ಮರಿದಾಸನಹಳ್ಳಿ ಗ್ರಾಮ ಪಂಚಾಯತಿಯಾಗಿದ್ದು ಅದರಲ್ಲಿ 13 ಜನ ಜೆಡಿಎಸ್ ಸದಸ್ಯರನ್ನು ಹೋಂದಿದ್ದು 05 ಜನ ಸದಸ್ಯರು ಕಾಂಗ್ರೆಸ್ ಪಕ್ಷದ ಸದಸ್ಯರ ಬಲ ಹೊಂದಿದ್ದು ಮೋದಲನೆ ಅವಧಿಗೆ ಜೆಡಿಎಸ್ ಪಕ್ಷದ ವಿ.ಚಿಂತಯ್ಯ ಮತ್ತು ಎರಡನೇ ಅವದಿಗೆ ಕುಮಾರರವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು ಹಾಗೆಯೇ ಮೂರನೆಯ ಅವಧಿಗೆ ಶಿವಲಿಂಗಪ್ಪರವರನ್ನು ಅದ್ಯಕ್ಷರನ್ನಾಗಿ ಮಾಡಬೇಕು ಎಂದು ಮಾತುಕತೆ ನಡೆದಿತ್ತು ಮಾತುಕತೆಯಂತೆ ಇಂದು ತಾಲ್ಲೂಕಿನ ಚುನಾವಣಾ ಅಧಿಕಾರಿಗಳಾದ ಕೆ.ಎನ್.ಸುಜಾತ ರವರು ಚುನಾವಣೆ ನಡೆಸಿದ್ದು ಶಿವಲಿಂಗಪ್ಪರವರನ್ನು ಹೋರತುಪಡಿಸಿ ಬೇರೆ ಯಾವ ಅಭ್ಯರ್ಥಿ ಕೂಡಾ ನಾಮ ಪತ್ರ ಸಲ್ಲಿಸದ ಕಾರಣ “ಶಿವಲಿಂಗಪ್ಪ”ನವರು ಅವಿರೋದವಾಗಿ ಅಯ್ಕೆಯಾಗಿದ್ದಾರೆಂದು ಘೋಷಿಸಿದರು ಈ ಸಮಯದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಮುದ್ದಣ್ಣ ಮತ್ತು ಗ್ರಾಮ ಪಂಚಾಯತಿ ಸದಸ್ಯರು ಮತ್ತು ಮುಖಂಡರಾದ ಚಂದ್ರಶೇಖರ್ ,ಶ್ರೀರಾಮ ರೆಡ್ಡಿ ,ದಿವಾಕರ್ ಮಲ್ಲಿಕಾರ್ಜುನ ಯಳಿಯಪ್ಪ ಒಬಣ್ಣ ಮಾರನಾಯಕ lic ನಾಗರಾಜು ನಾಗಭೂಷಣ ತ್ಯಾರಮಲ್ಲೆಶ್ ನಾಗೆಂದ್ರ ಮತ್ತು ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಹಾಜರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.