
ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಶ್ರೀ ಶಿವ ಬಸವೇಶ್ವರ ದಕ್ಷಿಣ ಕಾಶಿ ವಿದ್ಯಾಭಿವೃದ್ಧಿ ಟ್ರಸ್ಟ್( ರಿ. ) ಸಂಚಾಲಿತ ಶ್ರೀ ಶಿವ ಬಸವೇಶ್ವರ ಶಿಶು ಸಂಸ್ಕಾರ ಕೇಂದ್ರ, ಶ್ರೀ ಶಿವ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಕಾಳಪ್ಪ ಗೌಡ ಪೊಲೀಸ್ ಪಾಟೀಲ್ ಪ್ರೌಢಶಾಲೆ ಹಾಗೂ ಶ್ರೀ ಶಿವ ಬಸವೇಶ್ವರ ಸಂಗೀತ ಪಾಠಶಾಲೆ ಕಾಳಗಿ ಈ ಶಾಲೆಯ ರಜತ ಮಹೋತ್ಸವದ ಕಾರ್ಯಕ್ರಮದ ಅಂಗವಾಗಿ ಮಾತೃ ಮಿಲನ ತಾಯಂದಿರಿಂದ ಕೈ ತುತ್ತಿನ ಊಟ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ಜರುಗಿತು.
ತಾಯಿಯು ಪ್ರೀತಿ, ತ್ಯಾಗ ಮತ್ತು ನಿಸ್ವಾರ್ಥ ಕಾಳಜಿಯ ಸಾಕಾರ ಮೂರ್ತಿ. ಮಗುವಿನ ಬೆಳವಣಿಗೆ, ಯೋಗಕ್ಷೇಮ ಮತ್ತು ಭವಿಷ್ಯಕ್ಕಾಗಿ ತನ್ನ ಜೀವನವನ್ನೇ ಮುಡಿಪಾಗಿಡುವ ಅವಳು, ಮೊದಲ ಗುರು, ಮಾರ್ಗದರ್ಶಿ ಮತ್ತು ಉತ್ತಮ ಸ್ನೇಹಿತೆಯಾಗಿದ್ದಾಳೆ. ತಾಯಿಯ ಬೇಷರತ್ತಾದ ಪ್ರೀತಿ ಮತ್ತು ಬೆಂಬಲ ಮಗುವಿನ ಜೀವನದಲ್ಲಿ ಅತ್ಯಂತ ಅಮೂಲ್ಯವಾಗಿದೆ.
ಈ ಜಗತ್ತಿಗೆ ಜನ್ಮ ನೀಡಿದವಳು ತಾಯಿಯಲ್ಲಿಯೆ ನಾವುಗಳು ಸ್ವರ್ಗ ಲೋಕವನ್ನು ಕಾಣಬೇಕು. ಪ್ರಮುಖವಾಗಿ ಮಕ್ಕಳ ಬೆಳವಣಿಗೆಯಲ್ಲಿ ಹಾಗೂ ಪಾಲನೆ ಪೋಷಣೆಯಲ್ಲಿ ತಾಯಿಯು ಪ್ರಮುಖ ಪಾತ್ರವನ್ನು ವಹಿಸಿರುತ್ತಾಳೆ . ಮಕ್ಕಳು ಅಳುತ್ತಿರುವಾಗ ಮತ್ತು ಊಟ ಮಾಡಿಸುವಾಗ ಹಿಂದಿನ ಕಾಲದ ಪದ್ಧತಿಯು ಹಾಗೂ ಈಗಿನ ಕಾಲದ ಪದ್ಧತಿಯ ಬಗ್ಗೆ ವ್ಯತ್ಯಾಸವನ್ನು ಈ ಸಂದರ್ಭದಲ್ಲಿ ನಾವು ಎಲ್ಲರೂ ಸ್ಮರಿಸಿಕೊಳ್ಳಬೇಕು. ಮಕ್ಕಳಿಗೆ ಮೊಬೈಲ್ ಹಾಗೂ ಟಿವಿಯಿಂದ ಆದಷ್ಟು ದೂರವಿರಬೇಕು. ಮಕ್ಕಳಿಗೆ ಪಾಲಕರಾದವರು ಅರ್ಧಗಂಟೆ ಆದರೂ ನಾವುಗಳು ಸಮಯವನ್ನು ಕೊಡಬೇಕು. ತಂದೆ ತಾಯಿ ಹಿರಿಯರಿಗೆ ಕೊಡುವ ಸಂಸ್ಕಾರವನ್ನು ನಾವು ಮಕ್ಕಳಿಗೆ ಕಲಿಸಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಮಹಿಪಾಲ ರೆಡ್ಡಿ ಜಿಲ್ಲಾಧ್ಯಕ್ಷರು ವಿದ್ಯಾಭಾರತಿ ಕರ್ನಾಟಕ ಜಿಲ್ಲಾ ಘಟಕ ಕಲ್ಬುರ್ಗಿ ರವರು ಮಾತನಾಡಿದರು.
ಈ ಶಾಲೆಯು ಮುಂದಿನ ದಿನಗಳಲ್ಲಿ ಉನ್ನತ ಹಾದಿಯಲ್ಲಿ ಸಾಗುತ್ತದೆ. ಸರ್ಕಾರ ಆದೇಶದಂತೆ ಕಲಿಕಾ ಚಟುವಟಿಕೆಗಳು ಹಾಗೂ ಸಂಸ್ಕಾರ ಭರಿತವಾದಂತ ಶಿಕ್ಷಣವನ್ನು ಈ ಶಾಲೆ ನೀಡುತ್ತಾ ಬರುತ್ತಿದೆ. ಮಕ್ಕಳ ಕಲಿಕಾ ಚಟುವಟಿಕೆಗಳು, ಸಂತರ, ಪ್ರಶಿಕ್ಷಣ, ವಿನೂತನ ಕಲಿಕಾ ಚಟುವಟಿಕೆಗಳಾಗಿ ಮಹತ್ವ ಮನೆಗಳ ಕಾರ್ಯಕ್ರಮಗಳು ಈ ಶಾಲೆಯಲ್ಲಿ ನಡೆಯುತ್ತಿದೆ. ಈ ಶಾಲೆಯಲ್ಲಿ ಗುರುಗಳ ಗೌರವ ಸಮರ್ಪಣೆ ಸಾಮಾಜಿಕವಾದ ಕಳಕಳಿಯ ಶಿಕ್ಷಣವನ್ನು ಈ ಶಿಕ್ಷಣ ಸಂಸ್ಥೆಯು ನೀಡುತ್ತಾ ಬರುತ್ತಿದೆ. ಈ ಶಿಕ್ಷಣವು ಅನಂತವಾಗಿ ಸಾಗಲೆಂದು ಹಾರೈಸುತ್ತೇನೆ ಎಂದು ಬಾಳಮ್ಮ ಸಮೂಹ ಸಂಪನ್ಮೂಲ ವ್ಯಕ್ತಿಗಳು ಕಾಳಗಿ ಇವರು ಹೇಳಿದರು.
ಈ ಶಿಕ್ಷಣ ಸಂಸ್ಥೆಯು ಪ್ರಾರಂಭ ಶಿಕ್ಷಣದಿಂದ ಇಲ್ಲಿಯವರೆಗೂ ಬೆಳೆದು ಬಂದ ಹಾದಿಯನ್ನು ಮತ್ತು ಮುಂದೆಯೂ ಈ ಶಾಲೆಯು ಗುರುವಿನ ಆಶೀರ್ವಾದದಿಂದ ಉತ್ತಮವಾದಂತ ಪ್ರಶಸ್ತಿಯನ್ನು ಪಡೆಯಲಿದೆ ,ಒಳ್ಳೆಯವರ ಸಂಘ ಹಾಗೂ ಕೆಟ್ಟವರ ಸಂಘದಿಂದ ಆಗುವ ಪ್ರಯೋಜನಗಳ ಬಗ್ಗೆ ಕಬೀರದಾಸರ ಒಂದು ಸಣ್ಣ ಕಥೆಯ ಮೂಲಕ ಎಂದು ನಾಗಮ್ಮ ಮಾತಾಜಿಯವರು ತಿಳಿಸಿದರು. ಸದ್ಗುರು ಮಾತ್ರ ಜೀವನ ಕಥೆಗಳನ್ನು ಓದಿ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮವಾದ ಪ್ರಜೆಗಳಾಗಿ ಹೊರಹೊಮ್ಮಬೇಕು. ಈ ಶಾಲೆಯು ಸಂಸ್ಕಾರ ಭರಿತವಾದಂತ ಶಿಕ್ಷಣವನ್ನು ನೀಡುತ್ತಾ ಬರುತ್ತಿದೆ ಎಂದು ಈ ಸಂದರ್ಭದಲ್ಲಿ ರವಿಶಾಸ್ತ್ರಿ ತಮ್ಮ ಮನದಾಳ ಮಾತನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಪೂಜ್ಯಶ್ರೀ ವೇ. ಮೂ. ಚನ್ನಮಲ್ಲಯ್ಯ ಸ್ವಾಮಿ ಗುರಿ ಸ್ಥಳ ಮಠ ಚಿಂತ್ ಕುಂಟ ಮಹಿಪಾಲ್ ರೆಡ್ಡಿ ಜಿಲ್ಲಾಧ್ಯಕ್ಷರು ವಿದ್ಯಾಭಾರತಿ ಕರ್ನಾಟಕ ಜಿಲ್ಲಾ ಘಟಕ ಕಲಬುರ್ಗಿ, ಬಾಳಮ್ಮ ಸಮೂಹ ಸಂಪನ್ಮೂಲ ವ್ಯಕ್ತಿಗಳು ಕಾಳಗಿ, ಶಿವ ಶರಣಪ್ಪ ಕಮಲಾಪುರ ಸಂಸ್ಥಾಪನ ಸದಸ್ಯರು ಎಸ್ಬಿ ಡಿವಿಟಿ ಕಾಳಗಿ, ಲಲಿತಾ ಬಾಯಿ ಸಿದ್ರಾಮಪ್ಪ ಕಮಲಾಪುರ್ ಪ. ಪಂ.ಸದಸ್ಯರು ಕಾಳಗಿ, ಅಂಬವ್ವ ಕಾಳಪ್ಪ ರಾಜಪುರ್ ಸದಸ್ಯರು ಪ. ಪಂ ಕಾಳಗಿ, ಉಷಾರಾಣಿ ದತ್ತಾತ್ರೇಯ ಗುತ್ತೇದಾರ್ ಸದಸ್ಯರು ಪ ಪಂ ಕಾಳಗಿ, ಚಂದ್ರಕಲಾ ಚಂದ್ರಕಾಂತ್ ಚವ್ಹಾಣ್ ಸದಸ್ಯರು ಪ ಪಂ. ಕಾಳಗಿ, ಪಾರ್ವತಿ ವಿಠ್ಠಲ್ ರಾಠೋಡ್ ಸದಸ್ಯರು ಪ ಪಂ ಕಾಳಗಿ, ಸಾಲಿಯಾ ಬೇಗಮ್ ಮೈಬೂಬ್ ಬಿಜಾಪುರ್ ಸದಸ್ಯರು ಪ ಪಂ. ಕಾಳಗಿ, ಜಯಶ್ರೀ ಕಿಟ್ಟದ್ ಸದಸ್ಯರು ಶಾಲಾ ಆಡಳಿತ ಮಂಡಳಿ ಕಾಳಗಿ, ಪಾರ್ವತಿ ಯಲಲ್ಕರ ಸದಸ್ಯ ಶಾಲಾ ಆಡಳಿತ ಮಂಡಳಿ ಕಾಳಗಿ, ಅಂಬಿಕಾ ಎನ್ ತೇಲ್ಕೂರ ಅಧ್ಯಕ್ಷರು ಶಾಲಾ ಮಾತೃಭಾರತಿ ಸಮಿತಿ, ಮಾಲಾಶ್ರೀ ಬಿ ಕಾಳಗಿ ಉಪಾಧ್ಯಕ್ಷರು ಶಾಲಾ ಮಾತೃ ಭಾರತಿ ಸಮಿತಿ, ನಾಗಮ್ಮ ಮಾತಾಜಿ, ಶಿವಲೀಲಾ ಮಾತಾಜಿ, ವಿರೂಪಾಕ್ಷಯ್ಯ ಸರ್ ಮುಖ್ಯ ಗುರುಗಳು ಕಾಳಪ್ಪ ಗೌಡ ಪೊಲೀಸ್ ಪಾಟೀಲ್ ಪ್ರೌಢಶಾಲೆ, ಸತೀಶ್ ಪಾಟೀಲ್ ಮುಖ್ಯ ಗುರುಗಳು ಶ್ರೀ ಶಿವ ಬಸವೇಶ್ವರ ಹಿ. ಪ್ರಾ ಶಾಲೆ, ರೇವಣಸಿದ್ದಯ್ಯ ಹಿರೇಮಠ ಆಡಳಿತ ಅಧಿಕಾರಿಗಳು, ಶರಣಪ್ಪ ಮೇಲಕರಿ , ಪ್ರಕಾಶ , ಸಂಗೀತ ಮಾತಾಜಿ, ಆರ್ ಕೆ ಪಾಟೀಲ್ ಸರ್, ಅಂಜನ ಮಾತಾಜಿ, ಪೂಜಾ ಮಾತಾಜಿ, ಶೋಭಾ ಮಾತಾಜಿ, ಶೃತಿ ವಿ ಹಿರೇಮಠ್ , ವನಿತಾ ಮಾತಾಜಿ, ಪ್ರೇಮಾವತಿ ಮಾತಾಜಿ, ಶೃತಿ ಮಾತಾಜಿ,ಶರಣು ಸೇರಿದಂತೆ ಮಾತೆಯರು ಹಾಗೂ ಪಾಲಕರು ಪೋಷಕರು ಮುದ್ದು ಮಕ್ಕಳು ಭಾಗವಹಿಸಿದ್ದರು.
ಪ್ರಾರ್ಥನೆ ಗೀತೆ ಸಂಗೀತ ಬಳಗದವರಿಂದ, ನಿರೂಪಣೆ ಸಂಗೀತ ಮಾತಾಜಿ, ಸ್ವಾಗತ ಪರಿಚಯ ಪ್ರೇಮಾವತಿ ಮಾತಾಜಿ, ಬಹುಮಾನ ವಿತರಣೆ ವನಿತಾ ಎಸ್ ಮಾತಾಜಿ, ವಂದನಾರ್ಪಣೆಯನ್ನು ಶೃತಿ ಮಾತಾಜಿ ನಡೆಸಿಕೊಟ್ಟರು.
ವರದಿ ಚಂದ್ರಶೇಖರ್ ಆರ್. ಪಾಟೀಲ್




















