ಸಿಂಧನೂರು ನಗರದ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಸುಮಾರು ಎರಡುವರೆ ವರ್ಷಗಳ ಕಾಲ ಆಶ್ರಯ ಪಡೆದಿದ್ದ ಮಾಣಿಕ್ಯಮ್ಮ ಕಳೆದ 8ನೇ ತಾರೀಕಿನಂದು ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ನೇತ್ರದಾನ ಮಹಾದಾನ ಮಾಡುವುದರ ಮೂಲಕ ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಟ್ಟದಲ್ಲಿ ಆರೋಗ್ಯ ಸುಧಾರಣೆ ಮಾಡುವ ಪ್ರಯೋಗಕ್ಕೆ ಮಾದರಿಯಾಗಿದ್ದಾರೆ ಈ ಸಮಯದಲ್ಲಿ ದಿ. ಮಾಣಿಕ್ಯಮ್ಮ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ ಮಾತನಾಡಿದ ಆಶ್ರಮದ ಆಡಳಿತಾಧಿಕಾರಿಗಳಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ ನಮ್ಮ ಕಾರುಣ್ಯ ಆಶ್ರಮದಲ್ಲಿ ಆಶ್ರಯ ಪಡೆದಿದ್ದ ಮಾಣಿಕ್ಯಮ್ಮ ಕಾರುಣ್ಯ ಆಶ್ರಮದ ಅನಾಥ ಜೀವಿಯಿಂದ ನೇತ್ರದೇಹ ದಾನದ ಮೂಲಕ ಸಮಾಜಕ್ಕೆ ದೊಡ್ಡ ಸಂದೇಶ ನೀಡಲಾಗಿದೆ. ಅನಾಥ ಪ್ರಜ್ಞೆಯನ್ನು ಹೋಗಲಾಡಿಸಿ ಅನಾಥ ಎನ್ನುವ ಪದವನ್ನು ಅಳಿಸಿ ಹಾಕುವುದೇ ಕಾರುಣ್ಯ ಕುಟುಂಬದ ಮೂಲ ಉದ್ದೇಶ ಈ ಆಶ್ರಮದ ಕರ್ತವ್ಯ ಜೊತೆಗೆ ರಾಜರತ್ನ ಕನ್ನಡ ಯುವ ಸಮಿತಿ ಸಿಂಧನೂರು ಇವರುಗಳ ಸಹಕಾರದೊಂದಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಮಾರ್ಗದರ್ಶನದ ಮೂಲಕ ಇನ್ನಿತರ ಅನಾಥಪರ ಸಮಾಜ ಪರ ಕಾರ್ಯಗಳನ್ನು ಕೈಗೊತ್ತಿಕೊಳ್ಳಲಾಗುತ್ತಿದೆ. ಕರುಣಾಮಯಿ ಸಂಸ್ಕೃತಿ ಹೊಂದಿರುವ ನಮ್ಮ ಸಿಂಧನೂರಿನ ದಾನಿಗಳ ಸಹಕಾರದಿಂದ ಕಾರುಣ್ಯ ಆಶ್ರಮದ ಸೇವೆಗಳು ನಡೆಯುತ್ತಿವೆ. ನಾನು ನನಗಾಗಿ ಎನ್ನುವ ಪ್ರಪಂಚದಲ್ಲಿ ನಿಮಗಾಗಿ ಎನ್ನುವ ಭಾವನೆಗಳನ್ನು ಸಾರ್ವಜನಿಕರಲ್ಲಿ ಬಿತ್ತುವುದರ ಮೂಲಕ ಸಮಾಜ ಸೇವೆಗೆ ಸಿದ್ದರಾಗುತ್ತಿದ್ದಾರೆ. ಮಾಣಿಕ್ಯಮ್ಮನ ಕಳೆದುಕೊಂಡಂತಹ ಕಾರುಣ್ಯ ಕುಟುಂಬ ಈಗ ಅನಾಥವಾಗಿದೆ ಎಂದು ಭಾವುಕರಾಗಿ ಮಾತನಾಡಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಆಶ್ರಮದಲ್ಲಿ ಆಶ್ರಯ ಪಡೆದ ಅದೆಷ್ಟೋ ಅನಾಥ ಜೀವಿಗಳಿಗೆ ಸತತ 24 ಗಂಟೆಗಳ ಕಾಲ ಸೇವೆ ಮಾಡುತ್ತಿರುವ ಗಿರಿಜಮ್ಮ ಅಮ್ಮನವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಾರುಣ್ಯ ಆಶ್ರಮದ ಆಡಳಿತಾಧಿಕಾರಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ.ನಿರ್ಮಲಾ. ನಾಗೇಶ ಯಾದವ ಕೊಪ್ಪಳ. ಉಮಾ ರಮೇಶ ರಾಯಚೂರು. ಶಾರದ ರಾಮಣ್ಣ ರಾಯಚೂರು. ಲಕ್ಷ್ಮಿ ನಾಗರಾಜ ಶಿವಮೊಗ್ಗ. ಕು. ದೊಡ್ಡ ವೀರೇಶ. ಕು. ಸಣ್ಣ ವೀರೇಶ. ಕು. ಹರ್ಷಿತ ಮತ್ತು ಆಶ್ರಮದ ಸೇವಾಕರ್ತರುಗಳಾದ ಇಂದುಮತಿ,ಶರಣಮ್ಮ ಮರಿಯಪ್ಪ ಹರ್ಷವರ್ಧನ ಅನೇಕರು ಉಪಸಿತರಿದ್ದರು
ವರದಿ – ವೆಂಕಟೇಶ.ಹೆಚ್.ಬೂತಲದಿನ್ನಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.