ಹುನಗುಂದ : ತಾಲೂಕಿನ ಹಿರೇಮಾಗಿಯ ವಿದ್ಯಾರ್ಥಿ ಅಮರೇಶ ರೇವಣೆಪ್ಪ ರಾಜಮನಿ ಅವರು ರಾಷ್ಟ್ರೀಯ ಅಬ್ಯಾಕಸ್ ಸ್ಪರ್ಧೆಯಲ್ಲಿ ಸುಪರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಅಮರೇಶ ರೆ.ರಾಜಮನಿಯವರು ಗುಲಬುರ್ಗಾ ಕೇಂದ್ರೀಯ ವಿದ್ಯಾಲಯದ ಶಾಲೆಯಲ್ಲಿ 5 ನೇ ತರಗತಿಯಲ್ಲಿ ಓದುತ್ತಿದ್ದಾನೆ.
ಗ್ಯಾಲಾಕ್ಸಿ ಇಂಟರ್ ನ್ಯಾಷನಲ್ ಅವರು ಜನೆವರಿ 31 ರಂದು ಗೋವಾದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಅಬ್ಯಾಕಸ್ ಚಾಂಪಿಯನ್ ಸ್ಪರ್ಧೆಯಲ್ಲಿ ಕೇವಲ 7 ನಿಮಿಷದಲ್ಲಿ 150 ಲೆಕ್ಕಗಳಲ್ಲಿ 145 ಲೆಕ್ಕ ಮಾಡುವ ಮೂಲಕ ಸೂಪರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾನೆ.
ಈ ಸ್ಪರ್ಧೆಯಲ್ಲಿ ಐದು ರಾಜ್ಯಗಳಿಂದ ಸುಮಾರು 150 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದು ವಿದ್ಯಾರ್ಥಿಗಳ ಬುದ್ದಿ ಶಕ್ತಿಗೆ ಸವಾಲು ಆಗಿರುತ್ತದೆ. ಅರ್ಥಮೆಟಿಕ್ಸ ಹೆಚ್ಚು ಒತ್ತು ನೀಡಲಾಗುತ್ತದೆ ಎಂದು ಸಂಘಟಕರು
ಪತ್ರಿಕೆಗೆ ತಿಳಿಸಿದರು.
ಇಂಟರ್ ನ್ಯಾಷನಲ್ ಅಬ್ಯಾಕಸ್ ಸ್ಪರ್ಧೆಯು ಸಿಂಗಾಪುರ ದಲ್ಲಿ ಜರುಗಲಿದ್ದು ಅಲ್ಲಿ ಕೂಡಾ ಭಾಗವಹಿಸಲು ಆಸಕ್ತಿ ತೋರಿದ್ದಾನೆ.
- ಕರುನಾಡ ಕಂದ ಪತ್ರಿಕೆ



















