ಬಳ್ಳಾರಿ / ಕಂಪ್ಲಿ : ಗುಲ್ಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದ ಕಂಪ್ಲಿಯಲ್ಲಿ 110/11ಕೆವಿ ಕಂಪ್ಲಿ ಉಪಕೇಂದ್ರದ ನಿರ್ವಹಣೆ ಕಾರ್ಯ ಇರುವುದರಿಂದ ದಿನಾಂಕ: 05-02-2026 ಗುರುವಾರದಂದು ಬೆಳಿಗ್ಗೆ 09:00 ಗಂಟೆಯಿಂದ ಸಾಯಂಕಾಲ 05:00 ಗಂಟೆಯವರೆಗೆ ಕಂಪ್ಲಿ ನಗರ, ನಂ. 10 ಮುದ್ದಾಪುರ, ಕಣಿವೆ ತಿಮ್ಮಾಪುರ, ರಾಮಸಾಗರ, ದೇವಸಮುದ್ರ, ಹಂಪಾದೇವನಳ್ಳಿ, ಜಾಯಿಗನೂರು, ಕುಂಬಾರ್ ಕ್ಯಾಂಪ್, ಕಂಪ್ಲಿ ಕೊಟ್ಬಾಲ್, ಕೃಷನಗರ ಕ್ಯಾಂಪ್ಗೆ ಸಂಬಂದಿಸಿದ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ ಹಾಗೂ ಐಪಿ ಸೆಟ್ ಮಾರ್ಗಗಳನ್ನು ಬೆಳಿಗ್ಗೆ 4 ಗಂಟೆಯಿಂದ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ಜೆಸ್ಕಾಂ ಕಂಪ್ಲಿ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಆದ್ದರಿಂದ ವಿದ್ಯುತ್ ಗ್ರಾಹಕರು ಸಹಕರಿಸಬೇಕಾಗಿ ವಿನಂತಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್



















