ನಿನ್ನೆ ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಿದ ರಾಜ್ಯ ಬಜೆಟ್ ಅಗೋಚರ, ಅದೃಶ್ಯ, ಮರೀಚಿಕೆಯ ಬಜೆಟ್ ಆಗಿದೆ. ಎರಡೂಮುಕ್ಕಾಲುಗಂಟೆಗಳ ಕಾಲ ಮಂಡಿಸಿದ ಬಜೆಟ್ ಜನಪರವೂ ಅಲ್ಲ, ಜನಪ್ರಿಯವೂ ಅಲ್ಲ. ಇದೊಂದು ತುಟಿಗೆ ತುಪ್ಪ ಸವರುವ ಬಜೆಟ್…
ಒಂದು ಬಾರಿಗೆ ನಿರುದ್ಯೋಗಿ ಪದವೀಧರ ಯುವಕರಿಗೆ 2 ಸಾವಿರ ರೂ. ನೀಡುವುದಾಗಿ ಘೋಷಿಸಿರುವ ಸರ್ಕಾರ ಪದವೀಧರ ಯುವಜನರಿಗೆ ಅವಮಾನ ಮಾಡಿದೆ. ಈ 2 ಸಾವಿರದಿಂದ ಅವರ ಬದುಕು ಹಸನಾಗುವುದಿಲ್ಲ. ಮೊದಲು ಖಾಲಿ ಇರುವ 2 ಲಕ್ಷ ಹುದ್ದೆ ಭರ್ತಿ ಮಾಡಿ, ಅರ್ಜಿ ಶುಲ್ಕ ಮನ್ನಾ ಮಾಡಿ..
ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡುವ ಭರವಸೆ ನೀಡಲಾಗಿದೆ. ಯಾವಾಗ? ಮಾಡುತ್ತಾರೆ. ಸರ್ಕಾರಕ್ಕೆ ಉಳಿದಿರುವುದು 1 ತಿಂಗಳು ಮಾತ್ರ. ನಾನು ಮುಂಗಾರು ಅಧಿವೇಶದಿಂದಲೂ ಖಾಲಿ ಹುದ್ದೆ ಭರ್ತಿಗೆ ಒತ್ತಾಯಿಸುತ್ತಿದ್ದು, ದಪ್ಪ ಚರ್ಮದ ಸರ್ಕಾರ ಸಂವೇದನೆಯನ್ನೇ ಕಳೆದುಕೊಂಡಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿಯಿಂದ ಬಡ ಮತ್ತು ಮಧ್ಯಮ ವರ್ಗದ ಜನರು ಬೆಂದು ಹೋಗುತ್ತಿದ್ದಾರೆ. ದರ ಇಳಿಸುವ ಯಾವುದೇ ಪರಿಹಾರವನ್ನು ಸರ್ಕಾರ ನೀಡಿಲ್ಲ. ಸರ್ಕಾರಕ್ಕೆ ಜನಪರ ಕಾಳಜಿಯೇ ಇಲ್ಲ ಎಂದು ಆಗ್ರಹಿಸಿದರು