ಸಿಂಧನೂರಿನ ವನಸಿರಿ ಫೌಂಡೇಶನ್ ಕಾರ್ಯಾಲಯದಲ್ಲಿ ಇಂದು ಪರಿಸರ ಸ್ನೇಹಿ ಉಡುಗೊರೆಗಳ ಮಾರಾಟ ಕೇಂದ್ರದ ಮಳಿಗೆಯನ್ನು ವನಸಿರಿ ಫೌಂಡೇಶನ್ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಅವರು ಉದ್ಘಾಟಿಸಿದರು.
ಗಂಧದ ನಾಡು ಚಿನ್ನದ ಬೀಡು ಎಂದು ಖ್ಯಾತಿಯಾದ ಕರ್ನಾಟಕ ರಾಜ್ಯದಲ್ಲಿ ಗಂಧದ ಮರಗಳು,ಸಾಗೋನಿ,ತೇಗ ಹೀಗೆ ಇನ್ನೂ ಹೆಚ್ಚಿನ ಗಿಡಮರಗಳನ್ನು ಬೃಹತ್ತಾಕಾರದಲ್ಲಿ ಈ ನಾಡಿನಲ್ಲಿ ಬೆಳೆಯಲಾಗುತ್ತಿತ್ತು.ಇವು ಅತ್ಯಂತ ಹೆಚ್ಚು ಬೆಲೆಬಾಳುವ ಮರಗಿಡಗಳಾಗಿವೆ.ಇಂತಹ ಬೃಹತ್ ಗಿಡಮರಗಳು ಇತ್ತೀಚಿನ ದಿನಗಳಲ್ಲಿ ಅಧುನಿಕತೆಯಿಂದ ತೀರ ಕಡಿಮೆಯಾಗಿವೆ ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಮದುವೆ,ಗೃಹ ಪ್ರವೇಶ,ನಾಮಕರಣ ಕಾರ್ಯಕ್ರಮಗಳಂತಹ ಕಾರ್ಯಗಳಲ್ಲಿ ಪರಿಸರ ಸ್ನೇಹಿ ಉಡುಗೊರೆಗಳನ್ನು ಉಡುಗೊರೆಯಾಗಿ ನೀಡಬೇಕು,ಮತ್ತು ಅವುಗಳನ್ನು ಬೆಳಸಿ ಪೋಷಿಸಿಬೇಕು.ಆಗ ನಮ್ಮ ನಾಡು ಗಂಧದ ಬೀಡಾಗಲಿದೆ.ಮತ್ತು ಇಂತಹ ಒಂದು ಕಾರ್ಯಕ್ಕೆ ಪ್ರತಿಯೊಬ್ಬ ಪರಿಸರ ಪ್ರೇಮಿಗಳು ವನಸಿರಿ ಫೌಂಡೇಶನ್ ಜೊತೆಗೆ ಕೈಜೋಡಿಸಿ.ಅತ್ಯಂತ ಕಡಿಮೆ ದರದಲ್ಲಿ ಮತ್ತು ಪರಿಸರ ಸ್ನೇಹಿ ಸಸಿಗಳನ್ನು ನೀಡಿ ಶುಭ ಕೋರಲು ನಮ್ಮ ವನಸಿರಿ ಫೌಂಡೇಶನ್ ಕಾರ್ಯಾಲಯದಲ್ಲಿ ದೊರಕುವ ನಿಮಗೆ ಇಷ್ಟವಾದ ಹಣ್ಣಿನ ಹಾಗೂ ಹೂವಿನ ಸಸಿಗಳನ್ನು ಒಂದು ಸಣ್ಣ ರಟ್ಟಿನ ಬಾಕ್ಸನಲ್ಲಿ ಇಟ್ಟು ಬಾಕ್ಸ್ ಸುತ್ತಲೂ ಪರಿಸರ ಘೋಷ ವಾಕ್ಯಗಳನ್ನೊಳಗೊಂಡ ಸುಂದರವಾಗಿ ಕಾಣುವಂತೆ ನೀವು ಉಡುಗೊರೆಗಳನ್ನು ನೀಡಿ ಪರಿಸರ ಜಗೃತಿ ಮೂಡಿಸಬೇಕೆಂದು ಪರಿಸರ ಪ್ರೇಮಿ ಅಮರೇಗೌಡ ಮಲ್ಲಾಪೂರ ಮನವಿ ಮಾಡಿದರು.
ಈ ಸಂದರ್ಭದಲ್ಲಿ : ಶ್ರೀಮತಿ ಭಾರತಿ ತಿವಾರಿ,ಗಿರಿಸ್ವಾಮಿ ಹೇಡಿಗಿನಾಳ, ವೆಂಕಟ್ ರೆಡ್ಡಿ ಹೇಡಿಗಿನಾಳ, ಚನ್ನಪ್ಪ ಕೆ. ಹೊಸಹಳ್ಳಿ,ಪ್ರದೀಪ್ ಕನ್ನಾರಿ, ರಾಜು ಮಲ್ಲಾಪುರ್,ರಾಜು ಪೋತ್ನಾಳ,ಸಿಂಧು ಪಾಟೀಲ್, ಸುಷ್ಮಿತಾಗೌಡ,ಬಸವರಾಜ ಬೂತಲದಿನ್ನಿ ವಿದ್ಯಾರ್ಥಿಗಳು ಹಾಗೂ ಇನ್ನೂ ಹಲವಾರು ವನಸಿರಿ ತಂಡದ ಸದಸ್ಯರು ಭಾಗಿಯಾಗಿದ್ದರು.