ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಒಗ್ಗಟ್ಟಿಗೆ ಹೆಸರಾದ ಅಂಕೋಲಾದ ಬಡಗೇರಿ ಹಾಲಕ್ಕಿ ಒಕ್ಕಲಿಗರು.

ಬಡಗೇರಿ,ಬಾವಿಕೇರಿ ಗ್ರಾಮದ ಜನರ ಸಹಕಾರ, ಪಾಂಡುಗೌಡರ ಅಧ್ಯಕ್ಷತೆಯಲ್ಲಿ ದೇವಾಲಯದ ಪುನಃ ನಿರ್ಮಾಣಕದ ಕಾಂಕ್ರೀಟ್ ಕೆಲಸಕ್ಕೆ 300ಕ್ಕೂ ಅಧಿಕ ಹಾಲಕ್ಕಿ ಯುವ ಹಾಲಕ್ಕಿ ಒಕ್ಕಲಿಗರ ಸೇವೆ.

ಅಂಕೋಲಾ: ತಾಲೂಕಿನ ಬಡಗೇರಿ ಗ್ರಾಮದಲ್ಲಿ ಶತಮಾನ ಕಾಲದ ಇತಿಹಾಸವಿರುವ ಶ್ರೀ ಬೇಟೆ ಬೀರ ದೇವಾಲಯದ ಪುನರ್ ನಿರ್ಮಾಣ ಬಡಗೇರಿ, ಭಾವಿಕೇರಿ ಗ್ರಾಮದ ನಾಗರಿಕರ ಸಹಕಾರದಲ್ಲಿ ನಡೆಯುತ್ತಿದೆ. ಕಳೆದ ಸುಮಾರು ವರ್ಷಗಳಿಂದ ದೇವಾಲಯದ ಪುನರ್ ನಿರ್ಮಾಣಕ್ಕೆ ಊರವರು ಪ್ರಯತ್ನ ಪಡುತ್ತಿದ್ದು ಅದು ಕೈಗೂಡದೆ ಹಾಗೆಯೇ ಉಳಿದಿದ್ದು ಇದೀಗ ಊರ ನಾಗರೀಕರು ಅದರಲ್ಲೂ ಬಡಗೇರಿಯ ಹಾಲಕ್ಕಿ ಒಕ್ಕಲಿಗರ ನೇತೃತ್ವದಲ್ಲಿ ದೇವಸ್ಥಾನದ ನಿರ್ಮಾಣವೂ ಭರದಿಂದ ಸಾಗುತ್ತಿದೆ ಇಂದಿನ ದಿನದಲ್ಲಿ ದೇವಸ್ಥಾನ ನಿರ್ಮಾಣವನ್ನು ಗುತ್ತಿಗೆದಾರರೆ ಮಾಡುವುದು ಸಾಮಾನ್ಯವಾಗಿ ಕಂಡು ಬರುತ್ತದೆ ಆದರೆ ಇಲ್ಲಿ 300ಕ್ಕೂ ಅಧಿಕ ಹಾಲಕ್ಕಿ ಒಕ್ಕಲಿಗರು ಯಾವುದೇ ಫಲಾಪೇಕ್ಷೆ ಇಲ್ಲದೆ ತಮ್ಮ ಗ್ರಾಮದ ದೇವಸ್ಥಾನದ ನಿರ್ಮಾಣದ ಕೆಲಸದಲ್ಲಿ ಕೈಜೋಡಿಸಿದ್ದಾರೆ. ಈ ದೇವಸ್ಥಾನದ ಪುನರ್ ನಿರ್ಮಾಣಕ್ಕೆ ಸುಮಾರು ಒಂದೂವರೆ ಕೋಟಿ ಅಂದಾಜಿಸಲಾಗಿದ್ದು ಕಾರವಾರ- ಅಂಕೋಲಾದ ಶಾಸಕರ ಪ್ರಯತ್ನದಿಂದ ಧಾರ್ಮಿಕ ದತ್ತಿ ಇಲಾಖೆಯಿಂದ ಒಂದು ಕೋಟಿ ಮಂಜೂರು ಮಾಡಿದ್ದು ಅದರಲ್ಲಿ 9.5 ಲಕ್ಷ ಬಂದಿದ್ದು ಇನ್ನೂ ಬಾಕಿ ಹಣ ಮುಂದಿನಗಳಲ್ಲಿ ಬರುವುದಾಗಿ ಕಮಿಟಿಯ ಪಾಂಡುರಂಗ ಗೌಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ದೇವಸ್ಥಾನಕ್ಕೆ ನಾಡವರು ,ಹರಿಕಂತ್ರ, ಮಹಾಲೆ
ಯವರ ಸಹಕಾರ ಇರುತ್ತದೆ. ಹೀಗೆ ಸ್ಥಳೀಯ ಭಕ್ತರ ಮನದಾಸೆಯನ್ನು ಈಡೇರಿಸುವ ಶ್ರೀ ಭೇಟಿ ಬೀರ ದೇವಸ್ಥಾನದ ಪುನರ್ ನಿರ್ಮಾಣಕ್ಕೆ ಇದೀಗ ಕಾಲ ಕೂಡಿ ಬಂದಿದ್ದು ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.

ಶ್ರೀ ಬೇಟೆ ಬೀರ ದೇವರ ದೇವಸ್ಥಾನ ಪುನರ್ ನಿರ್ಮಾಣವಾಗುತ್ತಿದ್ದು ಇದಕ್ಕೆ ಸ್ಥಳೀಯರು ಯಾವುದೇ ಫಲಾಪೇಕ್ಷೆ ಇಲ್ಲದೆ ಮುಂದೆ ಬಂದು ದೇವಸ್ಥಾನದ ಪುನ ನಿರ್ಮಾಣಕ್ಕೆ ಕೈಜೋಡಿಸಿರುವುದು ಸಂತಸ ತಂದಿದೆ.

  • ಸಾತು ಗೌಡ ನಿವೃತ್ತ ಶಿಕ್ಷಕರು, ಬಡಗೇರಿ.

ವರದಿ : ಸುಶಾಂತ್ ಭೋವಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!