ಗುಣವಿಲ್ಲದಿರೆನಂತೆ ಹಣವೊಂದಿರಬೇಕು, ಹಣವಿದ್ದರೆ ಗುಣವೆದ್ದುಕಾಣುವುದು ಹಣವಿಲ್ಲದಿರೆ ಹೆಣವಾದಂತೆ…!
ಹಣವೊಂದೆ ಬೇಕು ಸಕಲ ಕಾರ್ಯಕ್ಕೂ
ಗುಣ ಬೇಕೊಂದೊಂದು ಕ್ಷಣಕ್ಕು,
ಹಣವೊಂದಿದ್ದರೆ ಎಲ್ಲಾ ಕಾಲಕ್ಕೂ
ಸಕಲವೂ ದೊರೆಯುವುದವನಿಗೆ ಸರ್ವಕಾಲಕ್ಕೂ….!
ಹಣದಿಂದ ಸರ್ವ ಕಾಯಕ
ಗುಣದಿಂದ ಬರೀ ಭಾವುಕ
ಗುಣವಿದ್ದು ಹಣವಿಲ್ಲದೊಡೆ ಜಗಕೆ ನಿಸ್ಪ್ರಯೋಜಕ…!
ಹಣವಿದ್ದರೆ ಎಲ್ಲಾ
ಗುಣವಿದ್ದರೆ ಏನಿಲ್ಲ
ಹಣವಿದ್ದೋಡೆ ಸುಳಿಯುವುದು ಜನ
ಕಾಲಿಯಾದೊಡೆ ಕಣ್ಣೂ ಹಾಯಿಸದು ಯಾವ ದನ…!
ಹಣವಿದ್ದರೆ ಸಕ್ಕರೆಯ ಸುತ್ತ ಇರುವೆಗಳಿದ್ದಂತೆ ಜನ
ಕಾಲಿಯಾದೊಡೆ ಮಲಕ್ಕೆ ಹಾರುವ ನೊಣವೂ ಕೂಡ ಸೇರದು ಇದು ನೈಜ ತಲ್ಲಣ…!!
- ಹನುಮಂತ ದಾಸರ
ಯುವ ಕವಿ ಸಾಹಿತಿ ಬರಹಗಾರರು ಧಾರವಾಡ.