ಹರ ಹರ ಮಹಾದೇವ ನಿನ್ನ ಶಿವ ನಾಮವನು
ಶಿವರಾತ್ರಿಯ ಜಾಗರಣೆ ವ್ರತದೀ ಜಪಿಸುವೆನು
ತ್ರಿದಳ ಬಿಲ್ವಪತ್ರೆಯ ಪ್ರಿಯನೇ ಸಮರ್ಪಿಸುವೆ
ಗುರು ಹರನೇ ನಿನಗೆ ಶಿವಪೂಜೆಯ ಗೈಯುವೆ
ಪಾಪ ಭಸ್ಮ ವಿನಾಶಕನು ತ್ರಿನೇತ್ರ ಶಿವಶಂಕರ
ಭವರೋಗ ಕಳೆಯುವ ಭಕ್ತರ ಅಭಯಂಕರ
ಕೈಲಾಸ ಸಿದ್ಧಿ ದಯಪಾಲಿಸು ನೀ ತಪಯೋಗಿ
ನಮಿಸುವೆ ನಿನಗೆ ಕರಗಳ ಮುಗಿದು ಶಿರಬಾಗಿ
ಸ್ಪಟಿಕ ಮಣಿಯ ಎಣಿಸಿ ನಾಮ ಜಪಿಸುವೆನು
ಸಂಗೀತ ವೀಣೆ ಮೀಟಿ ತೀರಿಸುವೆ ಭಕ್ತಿಯನು
ಧೂಪ ಕರ್ಪೂರದ ಆರತಿ ಬೆಳಗಿ ಧ್ಯಾನಿಸುವೆ
ಗಂಟೆ ಜಾಗಟೆ ಡಮರುಗ ಬಾರಿಸಿ ನಮಿಸುವೆ
ತನು ಮನ ಶುದ್ದದೀ ಭಕ್ತಿಯಿಂದ ಅರ್ಪಿಸುತ
ಧರೆಯ ಬೆಳಕು ತನ್ಮಯ ಭಕ್ತ ವೃಂದವ ರಕ್ಷಿತ
ಲೋಕ ಉದ್ಧಾರಕನು ಪಾರ್ವತಿ ಧರ್ಮಪತಿತೇ
ಲಿಂಗ ಪೂಜಿತ ನೀ ತ್ರಿಶೂಲ ನೀಲವರ್ಣ ಸ್ತುತೇ
ಡಮರುಗದಿ ನರ್ತಿಸುವ ಭೂಲೋಕ ಅಧಿಪತಿ
ಫಲಪುಷ್ಪ ಪಂಚಾಮೃತ ನೈವೇದ್ಯ ನಮೋಸ್ತುತಿ
ಭಜಿಸುವೆ ನಿನ್ನಯ ಸ್ಮರಣೆ ನಂಜುಂಡೇಶ್ವರನೇ
ಸಂಕಷ್ಟದಿ ಬಂದು ಪರಿಹರಿಸು ಕರುಣಾಕರನೇ
-ಮಲ್ಲಪ್ಪ ಭೈರಗೊಂಡ
ತಾಂತ್ರಿಕ ಸಹಾಯಕ,ಘಟಕ-07 BMTC ಬೆಂಗಳೂರು