ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀ ಮೊಗ್ಗಿ ಮಾಯಿದೇವ ರತ್ನ ಪ್ರಶಸ್ತಿ ಸ್ವೀಕರಿಸಿದ ಮುತ್ತು ವಡ್ಡರ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘ (ರಿ. ) ಇವರು ಶ್ರೀರಾಮಲಿಂಗೇಶ್ವರ ಜಾತ್ರಾ ಪ್ರಯುಕ್ತ ನೀಡುವ ಈ ವರ್ಷದ ಶ್ರೀ ಮೊಗ್ಗಿ ಮಾಯಿದೇವ ರತ್ನ ಪ್ರಶಸ್ತಿಯನ್ನು ಹಿರೇಮಳಗಾವಿಯ ಶಿಕ್ಷಕರಾದ ಶ್ರೀ ಮುತ್ತು ವಡ್ಡರಿಗೆ ನೀಡಿ ಗೌರವಿಸಲಾಯಿತು.
ವಿಜಯನಗರ ಸಾಮ್ರಾಜ್ಯದ ಒಂದನೇ ಪ್ರೌಢದೇವರಾಯರ ಕಾಲದಲ್ಲಿ ಆಸ್ಥಾನದ ರಾಜ ಗುರುವಾಗಿದ್ದ ಶ್ರೀ ಮೊಗ್ಗಿ ಮಾಯಿದೇವರು ಕ್ರಿ. ಶ 1430 ರಲ್ಲಿ ಮಲಪ್ರಭಾ ದರದ ಐಪುರ ಹಿರೇಮಾಗಿ ಎಲ್ಲಿ ಜನಿಸಿದರು. ಶ್ರೀ ಸೋಮೇಶ್ವರ ತನ್ನ ಆರಾಧ್ಯ ದೈವವನ್ನಾಗಿಸಿಕೊಂಡು ಅನುಭವ ಸೂತ್ರ, ಶಿವ ಸೂತ್ರ, ಸಂಸ್ಕೃತ ಗ್ರಂಥಗಳು ಹಾಗೂ ಪ್ರಭು ಗೀತೆ ಮತ್ತು ಐಪುರಿಶ್ವರ ಶತಕ ವಚನಗಳನ್ನು ರಚಿಸಿದ್ದಾರೆ. ಇವರ ಸ್ಮರಣಾರ್ಥಕವಾಗಿ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘವು ಪ್ರತಿ ವರ್ಷವು ಇವರ ಹೆಸರಿನಲ್ಲಿ ಶ್ರೀ ಮೊಗ್ಗಿ ಮಾಯಿದೇವ ರತ್ನ ಪ್ರಶಸ್ತಿ ನೀಡುತ್ತಾ ಬಂದಿರುತ್ತಾರೆ. ಈ ವರ್ಷದ ಈ ಪ್ರಶಸ್ತಿಯನ್ನು ವೃತ್ತಿಯಲ್ಲಿ ಶಿಕ್ಷಕರಾಗಿರುವ ಹಾಗೂ ಪ್ರವೃತ್ತಿಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಹಾಗೂ ಇತ್ತೀಚೆಗೆ ಸನ್ಮಾರ್ಗದ ದುಂಬಿ ಎಂಬ ಸ್ಪೂರ್ತಿದಾಯಕ ಕವನಗಳನ್ನು ಒಳಗೊಂಡಿರುವ ಪುಸ್ತಕ ಬಿಡುಗಡೆ ಮಾಡಿದ ಇವರಿಗೆ ಈ ವರ್ಷ ಪ್ರಶಸ್ತಿ ನೀಡಲಾಯಿತು.
ಈ ಸರಳ ಸುಂದರ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಮ. ನಿ.ಪ್ರ ಅಭಿನವ ಒಪ್ಪತ್ತೇಶ್ವರ ಮಹಾಸ್ವಾಮಿಗಳು ಒಪ್ಪತ್ತೇಶ್ವರ ಮಠ ಗುಳೇದಗುಡ್ಡ, ಹಾಗೂ ಶ್ರೀ ಮ. ನಿ. ಪ್ರ ಶಿವಲಿಂಗ ಮಹಾಸ್ವಾಮಿಗಳು ವಿರಕ್ತಮಠ ಬಿಜಕಲ್, ವೇ. ಮೂ ನಾಗರಾಜ ಸಂ ಹಿರೇಮಠ, ಶ್ರೀ ಶ್ರೀ ಚನ್ನಬಸಪ್ಪ ಅಜ್ಜನವರು, ಶ್ರೀ ಶ್ರೀ ಪ್ರಾಣೇಶ ಅಜ್ಜನವರು ವಹಿಸಿಕೊಂಡಿದ್ದರು.
ಶ್ರೀ ಮೊಗ್ಗಿ ಮಾಯಿದೇವರ 644 ನೇ ಜಯಂತೋತ್ಸವದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!