ಬಳ್ಳಾರಿ : ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಸಂಚಾರ ಸಮೀಕ್ಷಾ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಎಲ್ಲಾ ವಾಹನ ಚಾಲಕರು ನಿಧಾನವಾಗಿ ವಾಹನ ಚಲಾಯಿಸಬೇಕು ಎಂದು ಬಳ್ಳಾರಿಯ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
2026ನೇ ಸಾಲಿನ ರಸ್ತೆ ಸಂಚಾರ ಸಮೀಕ್ಷೆಯು ಫೆ.26ರ ಬೆಳಿಗ್ಗೆ 6 ರಿಂದ ಫೆ. 28ರ ಬೆಳಿಗ್ಗೆ 6 ಗಂಟೆಯವರೆಗೆ 3 ದಿನ ನಡೆಯಲಿದೆ. ಇದಕ್ಕಾಗಿ ರಸ್ತೆಗಳ ಮೇಲೆ ಕ್ಯಾಮೆರಾ ಸಮೇತ ಸಮೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.
ಸಮೀಕ್ಷಾ ಕೇಂದ್ರಗಳಿದ್ದಲ್ಲಿ ‘ವಾಹನ ರಸ್ತೆ ಸಂಚಾರ ಸಮೀಕ್ಷೆ ಕೇಂದ್ರವಿದೆ, ತಮ್ಮ ವಾಹನಗಳನ್ನು ನಿಧಾನವಾಗಿ ಚಲಿಸಿ’ ಎಂದು ಸೂಚನಾ ಫಲಕಗಳನ್ನು ಅಳವಡಿಸಲಾಗಿರುತ್ತದೆ ಈ ಸಮೀಕ್ಷೆಯಿಂದ ಸಂಗ್ರಹಿಸಿದ ಮಾಹಿತಿಯಿಂದ ಸರ್ಕಾರಕ್ಕೆ ರಸ್ತೆಗಳ ಸಂಚಾರ ತೀವ್ರತೆ ಕಂಡುಹಿಡಿಯುವುದಕ್ಕೆ ರಸ್ತೆಗಳ ಅಗಲ ಅಳತೆ ನಿರ್ಧರಿಸಲು, ರಸ್ತೆಗಳ ಮೇಲ್ದರ್ಜೆಗೇರಿಸಲು ಹಾಗೂ ರಸ್ತೆಗಳ ಸ್ಥಿತಿಗತಿ ಸುಧಾರಿಸಲು ಅನುಕೂಲವಾಗುತ್ತದೆ.
ತಮ್ಮ ವಾಹನಗಳನ್ನು ನಿಧಾನವಾಗಿ ಚಲಾಯಿಸಿ ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್



















