ಶಿವಮೊಗ್ಗ ನಗರದ ಮಾರಿ ಜಾತ್ರೆ ಪ್ರಯುಕ್ತ ಭಕ್ತಾದಿಗಳಿಗೆ ಲಡ್ಡು ವಿತರಿಸಿ ಸಚಿವ ಸಂತೋಷ್ ಲಾಡ್ ರವರ ಹುಟ್ಟುಹಬ್ಬ ಆಚರಣೆ.
ಯುವಕರ ಆಶಾಕಿರಣ, ಅಹಿಂದ ವರ್ಗದ ನಾಯಕ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವರಾದ ಶ್ರೀ ಸಂತೋಷ್ ಲಾಡ್ ರವರ ಹುಟ್ಟು ಹಬ್ಬದ ಅಂಗವಾಗಿ ಶಿವಮೊಗ್ಗ ಜಿಲ್ಲೆಯ ಯುವ ಕಾಂಗ್ರೆಸ್ ನ ಪದಾಧಿಕಾರಿಗಳು ಹಾಗೂ ಸಂತೋಷ್ ಲಾಡ್ ಅಭಿಮಾನಿಗಳು ಶಿವಮೊಗ್ಗ ನಗರದ ಐತಿಹಾಸಿಕ ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದೇವಿಯ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ಲಡ್ಡು ವಿತರಿಸುವ ಮುಖಾಂತರ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಯುವ ಮುಖಂಡರಾದ ಕೆ ರಂಗನಾಥ್ , ಸೂಡ ಸದಸ್ಯರಾದ ಎಂ. ಪ್ರವೀಣ್ ಕುಮಾರ್, ಹಾಪ್ ಕಾಮ್ಸ್ ನಿರ್ದೇಶಕ ಶರತ್ ಮರಿಯಪ್ಪ ,ಪ್ರಮುಖರಾದ ಹೆಚ್ ಪಿ ಗಿರೀಶ್, ಬಿ. ಲೋಕೇಶ್, ಇ ಟಿ ನಿತಿನ್ , ಎಂ ರಾಕೇಶ್, ಕೆ ಎಲ್ ಪವನ್, ಗುರುಪ್ರಸಾದ್, ಎಸ್. ಬಸವರಾಜ್, ಮೋಹನ್ ಸೋಮಿನಕೊಪ್ಪ, ಶಬರೀಶ್ ,ರಾಹಿಲ್, ಸಚಿನ್ ಈಡಿಗ, ವಿನಯ್ ಬಜಾರ್, ಸಂತೋಷ್, ಗಣೇಶ್ , ಸಾಹಿಲ್, ಭವಿತ್, ಅನಿಲ್ ಹಾಗೂ ಇತರರು ಇದ್ದರು.
ವರದಿ : ಕೊಡಕ್ಕಲ್ ಶಿವಪ್ರಸಾದ್




















