ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಮಜಾನ್‌ ಪ್ರಯುಕ್ತ ಉಪವಾಸ ಆಚರಿಸಿದ ಪುಟ್ಟ ಬಾಲಕಿ ಬಿ. ಇಖ್ರಾ ಮುಬೀನ್

ಬಳ್ಳಾರಿ / ಕಂಪ್ಲಿ :ರಮಜಾನ್ ಮಾಸಾಚರಣೆ ಪ್ರಯುಕ್ತ ನಾಲ್ಕು ವರ್ಷದ ಬಿ. ಇಖ್ರಾ ಮುಬೀನ್ ಎಂಬ ಪುಟ್ಟ ಬಾಲಕಿ ಶನಿವಾರದಂದು ಮೊದಲನೆಯ ಬಾರಿಗೆ ಒಂದು ಉಪವಾಸ (ವೃತ, ರೋಜಾ) ಆಚರಿಸುವುದರ ಮೂಲಕ ಹೆಮ್ಮೆ ಮತ್ತು ಪ್ರಶಂಸೆಗೆ ಪಾತ್ರಳಾಗಿದ್ದಾಳೆ.

ನಾಲ್ಕು ವರ್ಷದ ಈ ಪುಟ್ಟ ಬಾಲಕಿ ಕಂಪ್ಲಿ ಪಟ್ಟಣದ 18ನೇ ವಾರ್ಡ್, ಮುಲ್ಲಾರ ಓಣಿ/ಸುಣಗಾರ ಓಣಿಯ ಅಂಜುಮನ್ ಖಿದ್ಮತ್-ಎ-ಇಸ್ಲಾಂ ಸಮಿತಿಯ ಸದಸ್ಯ ಮತ್ತು ಸಮಾಜ ಸೇವಾ ಕಾರ್ಯಕರ್ತರ ವೇದಿಕೆ (ರಿ.) ಕಾರ್ಯದರ್ಶಿ ಬಿ. ರಿಯಾಜ್ ಅಹ್ಮದ್ ತೃತಿಯ ಸುಪುತ್ರಿ ಆಗಿದ್ದಾಳೆ.

ಬಿ. ಇಖ್ರಾ ಮುಬೀನ್ ಎಂಬ ಪುಟ್ಟ ಬಾಲಕಿ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ರಮಜಾನ್ ತಿಂಗಳ ಕಠಿಣ ಉಪವಾಸ ವ್ರತವನ್ನು ಪೂರ್ಣಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ.

ಧಾರ್ಮಿಕ ಶ್ರದ್ಧೆ ಮತ್ತು ಕುಟುಂಬದ ಪ್ರೇರಣೆಯಿಂದ ಈ ಬಾಲಕಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಆಹಾರ ಮತ್ತು ನೀರನ್ನು ತ್ಯಜಿಸಿ ವ್ರತ ಆಚರಿಸುವ ಮೂಲಕ ಧೈರ್ಯ ಪ್ರದರ್ಶಿಸಿದ್ದಾಳೆ.

ಬೆಳಗಿನ ಜಾವ 5-30 ರಿಂದ ಸಂಜೆ 6-30ರ ವರೆಗೆ ಸುಮಾರು 13 ತಾಸಿನ ಉಪವಾಸ ಆಚರಣೆಯನ್ನು ಮೊದಲನೆಯ ಬಾರಿಗೆ ಆಚರಿಸಿ ತನ್ನ ಮೊದಲನೇ ಉಪವಾಸ ರೋಜಾ ಪೂರ್ಣಗೊಳಿಸಿರುತ್ತಾಳೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಖ್ರಾ ಮುಬೀನ್ ತೋರಿದ ಶಿಸ್ತು ಮತ್ತು ಭಕ್ತಿಯನ್ನು ಕಂಡು ಸ್ಥಳೀಯ ಸಮುದಾಯದಲ್ಲಿ, ಅವರ ಮನೆಯ ಎಲ್ಲಾ ಕುಟುಂಬದವರು, ಬಂಧುಗಳು ಸೇರಿದಂತೆ ಅನೇಕರು ಶ್ಲಾಘಿಸಿದ್ದಾರೆ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!