ಮಾರ್ಚ್ ೩ ರಂದು ಬಸವರಾಜ ಮತ್ತಿಮೂಡ ಅವರ ಜನ್ಮದಿನದಂದು ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್ ಅವರಿಂದ ಉಚಿತ ಕ್ಷೌರ ಸೇವಾ ಕಾರ್ಯ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ವಲಯ ಘಟಕದಲ್ಲಿ ಇರುವ ಜನಪ್ರಿಯ ಹೇರ್ ಸಲೂನ್ ಚಂದ್ರಿಕಾ ಬ್ಯೂಟಿ ಪಾರ್ಲರ್ ನಲ್ಲಿ ಹಡಪದ ಅಪ್ಪಣ್ಣ ಸಮಾಜದ ಸೇವಕ ಮತ್ತು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಇಲ್ಲಿಯವರೆಗೆ 1850 ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಕ್ಷೌರ ಸೇವೆ ಸಲ್ಲಿಸಿದ್ದಾರೆ. ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಜನಪ್ರಿಯ ಬಿಜೆಪಿ ಶಾಸಕರಾದ ಸನ್ಮಾನ್ಯ ಶ್ರೀ ಬಸವರಾಜ ಮತ್ತಿಮೂಡ ಅವರ 46ನೇ ವರ್ಷದ ಹುಟ್ಟು ಹಬ್ಬದ ಸಂದರ್ಭದಲ್ಲಿ ಅಂದು ಬೆಳಿಗ್ಗೆ 9:30ಕ್ಕೆ ಜನಪ್ರಿಯ ಹೇರ್ ಸಲೂನ್ ಚಂದ್ರಿಕಾ ಬ್ಯೂಟಿ ಪಾರ್ಲರ್ ನಲ್ಲಿ ರವಿವಾರ ಮತ್ತು ಸೋಮವಾರ ದಿನದಂದು ಎರಡು ದಿನಗಳಿಂದ ಉಚಿತ ಕ್ಷೌರ ಸೇವೆ ಈ ರೀತಿಯಾಗಿ ಸೇವೆ ಸಲ್ಲಿಸಿದರು.
- ಕರುನಾಡ ಕಂದ ಪತ್ರಿಕೆ




















